ಗಾಂಧೀನಗರ: ಗುಜರಾತಿನ ಗಾಂಧೀನಗರದಲ್ಲಿ ಬುಧವಾರ ನಡೆದ ಮಹಿಳಾ ಸರಪಂಚ್ಗಳ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಸ್ವಚ್ಛ ಶಕ್ತಿ 2017’ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಈ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳ 6 ಸಾವಿರಕ್ಕೂ ಅಧಿಕ ಮಹಿಳಾ ಸರಪಂಚ್ಗಳು ಹಾಗೂ ಸ್ವಸಹಾಯ ಗುಂಪುಗಳ ಸದಸ್ಯರುಗಳು ಆಗಮಿಸಿದ್ದರು. ತಮ್ಮ ಗ್ರಾಮಗಳನ್ನು ಸ್ವಚ್ಛವಾಗಿಡಲು ಶ್ರಮಿಸಿದ ಅದರಲ್ಲೂ ಮುಖ್ಯವಾಗಿ ಬಯಲು ಶೌಚದಿಂದ ತಮ್ಮ ಹಳ್ಳಿಗಳನ್ನು ಮುಕ್ತಗೊಳಿಸಿದ ಸರಪಂಚ್ಗಳನ್ನು ಅಭಿನಂದಿಸಲಾಯಿತು.
ಸ್ವಚ್ಛತಾ ಅಭಿಯಾನಕ್ಕೆ ಅಮೋಘ ಕೊಡುಗೆಗಳನ್ನು ನೀಡಿದ ಪ್ರಮುಖ 10 ಮಹಿಳೆಯರನ್ನು ‘ಸ್ವಚ್ಛ ಶಕ್ತಿ ಸಮ್ಮಾನ್’ ಮೂಲಕ ಪುರಸ್ಕರಿಸಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಮೋದಿ, ‘2019ಕ್ಕೆ ಭಾರತವನ್ನು ಸ್ವಚ್ಛ ದೇಶವನ್ನಾಗಿಸಲು ನಾವು ಶ್ರಮಿಸಬೇಕು, ಸ್ವಚ್ಛತಾ ಅಭಿಯಾನಕ್ಕೆ ಅಪಾರ ಕೊಡುಗೆ ನೀಡಿದ ಮಹಿಳೆಯರನ್ನು ಇಂದು ನಾವು ಗೌರವಿಸಿದ್ದು ಹೆಮ್ಮೆ ತಂದಿದೆ’ ಎಂದರು.
ಅಲ್ಲದೇ ಹೆಣ್ಣು ಮಕ್ಕಳ ವಿರುದ್ಧದ ತಾರತಮ್ಯ ಧೋರಣೆಯನ್ನು ನಾವು ಅಂತ್ಯಗೊಳಿಸಬೇಕಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.