ಕೊಯಂಬತ್ತೂರು: ನಿನ್ನೆಯಷ್ಟೇ ವಿಶ್ವದಾದ್ಯಂತ ಮಹಿಳಾ ದಿನವನ್ನು ಆಚರಿಸಲಾಯಿತು, ವಿವಿಧ ರಂಗದಲ್ಲಿ ಸಾಧನೆ ಮಾಡಿದ ಮಹಿಳೆಯರ ಬಗ್ಗೆ ತಿಳಿದುಕೊಳ್ಳುವುದಕ್ಕೂ ಈ ದಿನ ಪ್ರೇರಣೆ ನೀಡುತ್ತದೆ.
ತಮಿಳುನಾಡಿನ ಕೊಯಂಬತ್ತೂರಿನಲ್ಲೊಬ್ಬರು 98 ವರ್ಷದ ಅಜ್ಜಿ ಇದ್ದಾರೆ, ಇವರನ್ನು ಅಜ್ಜಿ ಎನ್ನುವುದಕ್ಕಿಂತ ಉತ್ಸಾಹಿ ಮಹಿಳೆ ಎನ್ನುವುದೇ ಉತ್ತಮ. ಏಕೆಂದರೆ 98ರ ಈ ಇಳಿ ವಯಸ್ಸಿನಲ್ಲೂ ಆಕೆ ಯುವಕರಿಗೆ ಯೋಗದ ಮೂಲಕ ಹೇಗೆ ಕ್ರಿಯಾಶೀಲರಾಗಿರಬಹುದು, ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬಹುದು ಎಂಬ ಬಗ್ಗೆ ಹೇಳಿಕೊಡುತ್ತಾರೆ.
ನನಮ್ಮಲ್ ಅವರು ತಮ್ಮ 5ನೇ ವಯಸ್ಸಿನಿಂದ ಯೋಗಾಭ್ಯಾಸವನ್ನು ಮಾಡುತ್ತಾ ಬರುತ್ತಿದ್ದಾರೆ, ಈಗಲೂ ಅವರು ವಿವಿಧ ವಯಸ್ಸಿನ 100 ಮಂದಿಗೆ ಯೋಗವನ್ನು ಕಲಿಸುತ್ತಿದ್ದಾರೆ,
3 ಹೆಣ್ಣು ಹಾಗೂ 2 ಗಂಡು ಮಕ್ಕಳನ್ನು ಹೊಂದಿರುವ ಅವರು ಈಗಲೂ ಸದೃಢ ಹಾಗೂ ಆರೋಗ್ಯಕರವಾಗಿದ್ದಾರೆ. ತನ್ನ ಈ ಇಳಿ ವಯಸ್ಸಿನ ಯೌವ್ವನಕ್ಕೆ ಯೋಗವೇ ಕಾರಣ ಎನ್ನುವ ನನಮ್ಮಲ್, 5 ಗಂಟೆಗೆ ಎದ್ದು ಯೋಗ ಮಾಡುತ್ತಾರೆ. ೫೦ ಆಸನಗಳಲ್ಲಿ ಅವರಿಗೆ ಪರಿಣಿತಿ ಇದೆ.
ಯೋಗವನ್ನು ನಿರಂತರ ಅಭ್ಯಾಸಿಸುತ್ತ ಬಂದರೆ ಆರೋಗ್ಯಕರ ಜೀವನ ನಡೆಸಬಹುದು ಎಂಬ ಕಿವಿಮಾತನ್ನು ಅವರು ಯುವ ಸಮುದಾಯಕ್ಕೆ ನೀಡುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.