ಲಕ್ನೋ: ಇಸಿಸ್ ಉಗ್ರ ಸಂಘಟನೆಯ ವಕ್ರದೃಷ್ಟಿ ಭಾರತದ ಮೇಲೆ ಬಿದ್ದಿದ್ದು, ದೇಶದಾದ್ಯಂತ ಅವರು ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಭಯೋತ್ಪಾದನ ನಿಗ್ರಹ ದಳದ ಅಧಿಕಾರಿಗಳು ನೀಡಿದ್ದಾರೆ.
ನಿನ್ನೆಯಷ್ಟೇ ಲಕ್ನೋದ ಟಾಕೋರ್ಗಂಜ್ನಲ್ಲಿ ಸೈಫುಲ್ಲ ಎಂಬ ಉಗ್ರನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು ಮತ್ತು ಕಾನ್ಪುರ ಹಾಗೂ ಮಧ್ಯಪ್ರದೇಶದಲ್ಲಿ ಐವರು ಶಂಕಿತರನ್ನು ಬಂಧಿಸಲಾಗಿತ್ತು. ಮಾಹಿತಿಯ ಸೂಕ್ಷ್ಮತೆಯ ಹಿನ್ನಲೆಯಲ್ಲಿ ಬಂಧಿತರ ಹೆಸರನ್ನು ತನಿಖಾಧಿಕಾರಿಗಳು ಬಹಿರಂಗಪಡಿಸಿಲ್ಲ.
ಇದೀಗ ಈ ಬಂಧಿತ ಉಗ್ರರು ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ ಬಗ್ಗೆ ಬಾಯ್ಬಿಡುತ್ತಿದ್ದಾರೆ. ಉಜ್ಜೈನಿ ರೈಲು ದುರಂತದಲ್ಲಿ ಇವರ ಕೈವಾಡವಿರುವುದು ಬಹುತೇಕ ಸಾಬೀತಾಗಿದೆ.
ದೊಡ್ಡ ದೊಡ್ಡ ದಾಳಿಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಅಭ್ಯಾಸ ನಡೆಸುವ ಉಜ್ಜೈನಿ ರೈಲು ಸ್ಫೋಟವನ್ನು ನಡೆಸಿದ್ದೇವೆ ಎಂದು ಬಂಧಿತರು ಹೇಳಿದ್ದಾರೆ ಎನ್ನಲಾಗಿದೆ. ಇಸಿಸ್ ತಂಡದಲ್ಲಿ 9 ಮಂದಿಯಿದ್ದು ಇವರೆಲ್ಲ ಲಕ್ನೋ ಮತ್ತು ಕಾನ್ಪುರದವರು ಎನ್ನಲಾಗಿದೆ.
ಸೈಫುಲ್ಲಾ ಎಂಬಾತ ಶರಣಾಗಲು ತಿರಸ್ಕರಿಸಿದ ಹಿನ್ನಲೆಯಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು, ಈತನಿದ್ದ ಜಾಗದಲ್ಲಿ ಇಸಿಸ್ ಧ್ವಜ್, ರೈಲುಗಳ ಟೈಮ್ ಟೇಬಲ್ಗಳು ಇದ್ದವು ಎನ್ನಲಾಗಿದೆ.
ಉಜ್ಜೈನಿ ರೈಲು ಸ್ಫೋಟ ಹಾಗೂ ನಿನ್ನೆ ನಡೆದ ಇಸಿಸ್ ವಿರುದ್ಧದ ಕಾರ್ಯಾಚರಣೆಯಿಂದ ಇಸಿಸ್ ಭಾರತದಲ್ಲಿ ನಿಧಾನಕ್ಕೆ ತಳವೂರುತ್ತಿದೆಯೇ ಎಂಬ ಆತಂಕ ಮೂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.