ಹೈದರಾಬಾದ್: ತ್ರಿವಳಿ ತಲಾಖ್ ಕುರಿತ ಪ್ರಕರಣ ತೀವ್ರ ಚರ್ಚೆಯಲ್ಲಿರುವಾಗಲೇ ವ್ಯಾಟ್ಸ್ಪ್ ಮೂಲಕ ತಲಾಖ್ ನೀಡಿದ ಪ್ರಕರಣಗಳು ಬೆಳಕಿಗೆ ಬಂದಿವೆ.
ಅಮೆರಿಕದಲ್ಲಿರುವ ಸಯೀದ್ ಫಯಾಜುದ್ದೀನ್ ಮತ್ತು ಉಸ್ಮಾನ್ ಖುರೇಷಿ ಎಂಬುವರು ತಮ್ಮ ಪತ್ನಿಯರಿಗೆ ವ್ಯಾಟ್ಸ್ಪ್ ಮೂಲಕ ವಿಚ್ಛೇದನ ನೀಡಿದ್ದಾರೆ. ಪತ್ನಿಯರಾದ ಹಿನಾ ಫಾತಿಮಾ ಹಾಗೂ ಮಹ್ರಿನ್ ಎಂಬುವರು ಹೈದರಾಬಾದ್ನಲ್ಲಿದ್ದಾರೆ.
ತಲಾಖ್ ತಲಾಖ್ ತಲಾಖ್ ಎಂದು ನನ್ನ ಗಂಡ ವ್ಯಾಟ್ಸ್ಪ್ ಮೂಲಕ ಸಂದೇಶ ಕಳಿಸಿದ ಎಂದಿರುವ ಮೆಹ್ರಿನ್, ಖುರೇಷಿ ಎಂಬುವನನ್ನು 2015 ರಲ್ಲಿ ಮದುವೆಯಾಗಿದ್ದರು. ಹೀನಾ ಫಾತಿಮಾ ಎಂಬುವರು ಫಯಾಜುದ್ದೀನ್ ಎಂಬುವನನ್ನು ಮದುವೆಯಾಗಿದ್ದರು. ಕಳೆದ 6 ತಿಂಗಳ ಹಿಂದೆ ಇವರಿಗೆ ಫಯಾಜುದ್ದೀನ್ ತಲಾಖ್ ಸಂದೇಶ ಕಳಿಸಿ ಮನೆಯಿಂದ ಹೊರ ಹಾಕಿದ್ದಾರೆ ಎನ್ನಲಾಗಿದೆ.
ನಾನು ತುಂಬು ಗರ್ಭಿಣಿ. ಇಂಥ ಸಂದರ್ಭದಲ್ಲಿ ಏಕಪಕ್ಷೀಯವಾಗಿ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದಿರುವ ಫಾತಿಮಾ, ಫಯಾಜುದ್ದೀನ್ ವಿರುದ್ಧ ದೂರು ಸಲ್ಲಿಸಿದ್ದಾಳೆ. ಇದೀಗ ಈ ಇಬ್ಬರು ಮಹಿಳೆಯರನ್ನು ಮಾವನ ಮನೆಯಿಂದ ಹೊರಹಾಕಲಾಗಿದೆ ಎನ್ನಲಾಗಿದೆ.
ತ್ರಿವಳಿ ತಲಾಖ್ ಕುರಿತು ಸುಪ್ರೀಂ ಕೋರ್ಟ್ ಕೂಡಾ ವಿಚಾರಣೆ ನಡೆಸುತ್ತಿದೆ. ಮಾನವ ಹಕ್ಕುಗಳ ಹಿನ್ನೆಲೆಯಲ್ಲಿ ತಲಾಖ್ ಪ್ರಕರಣವನ್ನು ನಿರ್ಣಯಿಸಲಾಗುತ್ತದೆ ಎಂದು ಸುಪ್ರೀಂ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.