ಆಗ್ರಾ: ನಾರಿ ಶಕ್ತಿ ಪುರಸ್ಕಾರ್ ಪ್ರಶಸ್ತಿ ವಿಜೇತೆ, ಉತ್ತರ ಪ್ರದೇಶದ ವೃಂದಾವನದ ಡಾ. ಲಕ್ಷ್ಮೀ ಗೌತಮ್ ವಿಧವೆಯರಿಗೆ ಸಮಾನ ಹಕ್ಕುಗಳನ್ನು ನೀಡುವ ಬೇಡಿಕೆಯೊಂದಿಗೆ -#WeAreEqual – ಸಾಮಾಜಿಕ ಮಾಧ್ಯಮ ಅಭಿಯಾನ ಆರಂಭಿಸಿದ್ದಾರೆ.
ತಮ್ಮ ಗಂಡಂದಿರನ್ನು ಕಳೆದುಕೊಂಡಿರುವ ಮಹಿಳೆಯರಿಗೆ ‘ವಿಧವೆ’ ಎಂಬ ಪದ ಬಳಸಬಾರದು. ಈ ಪದವನ್ನು ನಿಘಂಟಿನಿಂದ (Dictionary) ತೆಗೆದು ಹಾಕಬೇಕು. ಇದು ‘ತಾರತಮ್ಯ’ವಾಗಲಿದ್ದು, ಮಹಿಳೆಯರ ಮೇಲೆ ಪ್ರತಿಕೂಲ ಮಾನಸಿಕ ಪ್ರಭಾವ ಬೀರುತ್ತದೆ. ಅವರನ್ನು ಗೌರವದಿಂದ ಕಾಣಬೇಕು ಮತ್ತು ಭೇದಭಾವ ಮಾಡಬಾರದು ಎಂದು ಡಾ. ಲಕ್ಷ್ಮೀ ಗೌತಮ್ ಹೇಳಿದ್ದಾರೆ.
ವಿಧವೆಯರನ್ನು ತಾರತಮ್ಯದಿಂದ ಕಾಣುವ ಜನರ ಮನಸ್ಥಿತಿ ಬದಲಾವಣೆಗೆ ಸಲಗೆ ನೀಡಿದ ಅವರು, ಅವರಿಗೆ ಸಮಾನ ಹಕ್ಕು ನೀಡಬೇಕು. ಮಹಿಳೆಯರ ವರ್ಗೀಕರಣ ಕೊನೆಗೊಳಸಲು ‘ವಿಧವೆ’ ಎಂಬ ಪದ ತೆಗೆದು ಹಾಕಲು ದೀರ್ಘ ಸಮಯ ಬೇಕಾಗಬಹುದು ಎಂದು ಡಾ. ಲಕ್ಷ್ಮೀ ಹೇಳಿದ್ದಾರೆ.
ಈ ನೀತಿಯನ್ನು ಕೊನೆಗೊಳಿಸಲು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಜನರಲ್ಲಿ ಮನವಿ ಮಾಡಿದ ಅವರು, ತನ್ನ ಎನ್ಜಿಒ ಕನಕ್ ಧಾರಾ ಫೌಂಡೇಶನ್ ಮಹಿಳೆಯರ ಹಕ್ಕುಗಳಿಗಳಿಗಾಗಿ ಹೋರಾಡಲಿದೆ ಮತ್ತು ವಿಧವೆಯರಿಗಾಗಿ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಲಿಂಗ ತಾರತಮ್ಯದ ಬಗ್ಗೆ ಅರಿವು ಮೂಡಿಉಸುವ ಗುರಿಯೊಂದಿಗೆ #WeAreEqual ಅಭಿಯಾನ ಆರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.