ನವದೆಹಲಿ: ಕೇಂದ್ರ ಸರ್ಕಾರ ಡೆಬಿಟ್, ಕ್ರೆಡಿಟ್ ಕಾರ್ಡ್ ಅಲ್ಲದೇ ನಿಮ್ಮ ಮೊಬೈಲ್ ಫೋನ್ಗಳನ್ನೂ ಬಳಸದೇ ಹಣ ಪಾವತಿಸುವ ಆಧಾರ್ ಆಧಾರಿತ ಹೊಸ ‘ಆಧಾರ್ ಪೇ’ ಅಪ್ಲಿಕೇಶನ್ನ್ನು ಬಿಡುಗಡೆ ಮಾಡಿದೆ. ಇದರ ಅತ್ಯಂತ ವಿಶೇಷ ವೈಶಿಷ್ಟ್ಯವೆಂದರೆ ಇದು ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುವುದಿಲ್ಲ.
ಐಡಿಎಫ್ಸಿ ಬ್ಯಾಂಕ್ ಬಿಡುಗಡೆ ಮಾಡಿರುವ ಆಧಾರ್ ಪೇ ಆ್ಯಂಡ್ರಾಯ್ಡ್ ಆ್ಯಪ್ನ್ನು ವ್ಯಾಪಾರಸ್ಥರು ಬಳಬಹುದಾಗಿದ್ದು, ಗ್ರಾಹಕರು ಕೇವಲ ತಮ್ಮ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಹೆಸರು ಸೂಚಿಸಿದರೆ ಸಾಕು. ಸುಲಭವಾಗಿ ಹಣ ಪಾವತಿಸಬಹುದು.
ಇದಕ್ಕೆ ಯಾವುದೇ ಎಂಡಿಆರ್ (ವ್ಯಾಪಾರ ರಿಯಾಯಿತಿ ದರ) ಶುಲ್ಕ ವಿಧಿಸಲಾಗುವುದಿಲ್ಲ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಕಾಂತ್ ಹೇಳಿದ್ದಾರೆ.
ವ್ಯಾಪಾರಸ್ಥರು ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಆಧಾರ್ ಪೇ ಆ್ಯಪ್ ಡೌನ್ಲೋಡ್ ಮಾಡಿ ಸ್ಮಾರ್ಟ್ಫೋನ್ನ್ನು ಬಯೋಮೆಟ್ರಿಕ್ ಅಥವಾ ಬೆರಳಚ್ಚು ಸ್ಕ್ಯಾನರ್ಗೆ ಕನೆಕ್ಟ್ ಮಾಡಬೇಕು. ಗ್ರಾಹಕರು ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಪಾವತಿ ಬ್ಯಾಂಕ್ನ್ನು ಆಯ್ಕೆ ಮಾಡಬೇಕು. ಗ್ರಾಹಕರ ಬಯೋಮೆಟ್ರಿಕ್ ದಾಖಲೆಗಳು ಸ್ಕ್ಯಾನ್ ಆಗಿ ಪಾಸ್ವರ್ಡ್ ರೂಪದಲ್ಲಿ ದಾಖಲಾಗುತ್ತದೆ.
ಇದು ಇತರ ಯಾವುದೇ ಕ್ಯಾಶ್ಲೆಸ್ ಪಾವತಿ ಮಾದರಿಗಳಷ್ಟೇ ಸುರಕ್ಷಿತವಾಗಿದೆ ಎಂದು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ಮುಖ್ಯಸ್ಥ ಅಜಯ್ ಪಾಂಡೆ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.