ನವದೆಹಲಿ: ವಿಶ್ವಸಂಸ್ಥೆಯ ಭಯೋತ್ಪಾದಕ ಪಟ್ಟಿಯಲ್ಲಿ ಪಾಕಿಸ್ಥಾನ ಮೂಲದ ಉಗ್ರ ಮಸೂದ್ ಅಝರ್ನ್ನು ಸೇರಿಸಬೇಕು ಎಂದು ಕೋರಿ ಭಾರತ ಸಲ್ಲಿಸಿರುವ ಪ್ರಸ್ತಾವಣೆಯನ್ನು ಚೀನಾ ಪರಿಗಣನೆಗೆ ತೆಗೆದುಕೊಂಡಿದ್ದು, ತನಿಖೆ ನಡೆಸಲು ಮುಂದಾಗಿದೆ.
ಅಝರ್ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕ ಪಟ್ಟಿಗೆ ಸೇರಿಸುವ ಬಗೆಗಿನ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಬಳಿಕ ಭಾರತದ ಪ್ರಸ್ತಾವಣೆಯನ್ನು ಬೆಂಬಲಿಸಬೇಕೋ ಅಥವಾ ಬೇಡವೋ ಎಂಬುದಾಗಿ ನಿರ್ಧರಿಸುತ್ತೇವೆ ಎಂದು ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ.
2016ರ ಜನವರಿ 2ರಂದು ಪಠಾನ್ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿ ನಡೆದ ಬಳಿಕ ಪಾಕ್ನ ಜೈಶೇ ಮೊಹಮ್ಮದ್ ಸಂಘಟನೆಯ ಮುಖಂಡ ಮಸೂದ್ ಅಝರ್ಗೆ ಜಾಗತಿಕ ಮಟ್ಟದಲ್ಲಿ ನಿಷೇಧ ಹೇರಬೇಕು ಎಂದು ಭಾರತ ವಿಶ್ವಸಂಸ್ಥೆಯನ್ನು ಕೋರಿದೆ.
ಆದರೆ ಪಾಕಿಸ್ಥಾನದ ಮಿತ್ರ ಚೀನಾದ ಕುಟಿಲತನದಿಂದಾಗಿ ಭಾರತದ ಪ್ರಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ಸೋಲಾಗಿದೆ. ಆದರೀಗ ಭಾರತದ ಪ್ರಸ್ತಾವಣೆಯನ್ನು ಪರಿಶೀಲಿಸುವುದಾಗಿ ಚೀನಾ ಹೇಳಿದ್ದು ಭಾರತದ ಪಾಲಿಗೆ ತುಸು ನೆಮ್ಮದಿಯ ವಿಷಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.