ಲಖ್ನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಕೊನೆಯ ಹಂತದ ಮತದಾನದ ಮುನ್ನಾ ದಿನವಾದ ಮಂಗಳವಾರ ಲಖ್ನೌನ ಠಾಕುರ್ಗಂಜ್ ಪ್ರದೇಶದಲ್ಲಿ ಉತ್ತರಪ್ರದೇಶ ಪೊಲೀಸ್ನ ಭಯೋತ್ಪಾದನೆ ನಿಗ್ರಹ ತಂಡ (ಎಟಿಎಸ್) ಹಾಗೂ ಶಂಕಿತ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಉತ್ತರ ಪ್ರದೇಶ ಪೊಲೀಸರು ಕಾನ್ಪುರ ಮತ್ತು ಲಖ್ನೌಗಳಲ್ಲಿ ಇಬ್ಬರು ಉಗ್ರರು ಅಡಗಿರುವ ಮಾಹಿತಿ ಪಡೆದಿದ್ದು, ಕಾನ್ಪುರದಲ್ಲಿ ಅಡಗಿದ್ದ ಉಗ್ರನನ್ನು ಬಂಧಿಸಲಾಗಿದೆ. ಆತ ನೀಡಿದ ಮಾಹಿತಿಯಂತೆ ಲಖ್ನೌದಲ್ಲಿ ಅಡಗಿರುವ ಮತ್ತೋರ್ವ ಉಗ್ರನನ್ನು ಪತ್ತೆ ಹಚ್ಚಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ನಿರ್ದೆಶಕ ಜನರಲ್ ದಲ್ಜಿತ್ ಸಿಂಗ್ ಚೌಧರಿ ಹೇಳಿದ್ದಾರೆ.
ವರದಿಗಳ ಪ್ರಕಾರ, ಸೈಫುಲ್ ಎಂಬ ಶಂಕಿತ ಉಗ್ರ ಠಾಕುರ್ಗಂಜ್ ಪ್ರದೇಶದ ಹಾಜಿ ಕಾಲನಿಯ ಮನೆಯೊಂದರಲ್ಲಿ ಅಡಗಿದ್ದು, ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಪೊಲೀಸರು ಮನೆಯನ್ನು ಸುತ್ತುವರಿದಿದ್ದು, ಸುಮಾರು ಒಂದೂವರೆ ಗಂಟೆಗಳ ಗುಂಡಿನ ಹೋರಾಟದ ಬಳಿಕ ಗುಂಡಿನ ದಳಿ ಅಂತ್ಯಗೊಂಡಿದೆ ಎನ್ನಲಾಗಿದೆ.
ಪೊಲೀಸರು ಆತ ಶರಣಾಗುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಉಗ್ರ ಸೈಫುಲ್ ಇರಾಕ್ ಇಸ್ಲಾಮಿಕ್ ಸಂಘಟನೆ ಮತ್ತು ಲೆವಾಂಟ್ ಜೊತೆ ಸಂಬಂಧ ಹೊಂದಿರುವ ಬಗ್ಗೆ ಅನುಮಾನವಿದ್ದು, ಮಧ್ಯಪ್ರದೇಶದ ಶಾಜಾಪುರ್ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದ ಭೋಪಾಲ್-ಉಜ್ಜೈನ್ ಪ್ಯಾಸೆಂಜರ್ ರೈಲು ಸ್ಫೋಟದಲ್ಲಿ ಕೈವಾಡವಿರುವ ಬಗ್ಗೆ ಶಂಕಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.