ನವದೆಹಲಿ: ಯೋಗೊದ ಸತ್ಸಂಗ ಮಠದ 100ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿಯವರು ವಿಶೇಷ ಅಂಚೆ ಚೀಟಿಯನ್ನು ಮಂಗಳವಾರ ದೆಹಲಿಯ ವಿಜ್ಞಾನಭವನದಲ್ಲಿ ಬಿಡುಗಡೆಗೊಳಿಸಿದರು.
ಯೋಗೊದ ಸತ್ಸಂಗ ಸೊಸೈಟಿಗೆ 100ತುಂಬಿರುವ ಹಿನ್ನಲೆಯಲ್ಲಿ ಸಮಾರಂಭವನ್ನು ಏರ್ಪಡಿಸಲಾಗಿತ್ತು. 1917ರಲ್ಲಿ ಆಧುನಿಕ ಯುಗದ ಪ್ರಮುಖ ಆಧ್ಯಾತ್ಮ ಸಾಧಕ ಎಂದೇ ಕರೆಯಲ್ಪಡುವ ಪರಮಹಂಸ ಯೋಗಾನಂದ ಅವರು ಇದನ್ನು ಸ್ಥಾಪಿಸಿದ್ದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಯೋಗಿ ಜೀ ಅವರು ತನ್ನ ಸಂದೇಶಗಳನ್ನು ಬಿತ್ತರಿಸಿ ಅಗಲಿದರು ಆದರೆ ಅವರು ಎಲ್ಲಾ ಕಾಲದಲ್ಲೂ ಭಾರತದ ಜೊತೆಯಿರುತ್ತಾರೆ ಎಂದು ನಂಬಿದ್ದೇನೆ, ಅವರು ಕೇವಲ ಮುಕ್ತಿಯ ಬಗ್ಗೆ ಹೇಳಿಲ್ಲ ಅಂತರ್ರಯಾತ್ರೆಯ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.