ಮಂಗಳೂರು : ಮಂಗಳೂರಿನ ರಾಮಕೃಷ್ಣ ಮಿಷನ್ ವತಿಯಿಂದ ಏರ್ಪಡಿಸಲಾಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದಡಿಯಲ್ಲಿ ಸ್ವಚ್ಛ ಕಾರ್ಯಕ್ರಮವನ್ನು 22 ನೇ ವಾರದಲ್ಲಿ ನಗರದ 10 ಕಡೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
240 – ಎಬಿ ಶೆಟ್ಟಿ ವೃತ್ತ : ಹಿಂದೂ ವಾರಿಯರ್ಸ್ತಂಡ ಎಬಿ ಶೆಟ್ಟಿ ವೃತ್ತದಿಂದ ಕ್ಲಾಕ್ಟವರ್ ವೃತ್ತದ ವರೆಗೆ ಸ್ವಚ್ಛತಾಕಾರ್ಯವನ್ನುಕೈಗೊಂಡಿತು. ಬೆಳಿಗ್ಗೆ 7.30 ಕ್ಕೆ ಸ್ವಾಮಿ ಜಿತಕಾಮಾನಂದಜಿ ಹಾಗೂ ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಶ್ರೀ ಯೋಗಿಶ್ಕಾಯರ್ತ್ತಡ್ಕ ಮಾರ್ಗದರ್ಶನದಲ್ಲಿ ಕೆಲವು ಯುವಕರುಬೀದಿ ದೀಪಗಳ ಕಂಬಕ್ಕೆ ಕಟ್ಟಲಾಗಿದ್ದ ಹಳೆಯ ಬ್ಯಾನರ್, ಬಂಟಿಂಗ್ಸ್ ಹಾಗೂ ಅನೇಕ ದಿನಗಳಿಂದ ವಿದ್ಯುತ್ತ ದೀಪದ ಕಂಬಗಳಲ್ಲಿ ಶೇಖರಣೆಯಾಗಿದ್ದ ಹಗ್ಗ, ದಾರ, ಹುರಿಗಳನ್ನು ಕತ್ತರಿಸಿ ತೆಗೆದು ಸ್ವಚ್ಛಗೊಳಿಸಿದರು. ಶ್ರೀ ಶಿವು ಪುತ್ತೂರು ಸೇರಿದಂತೆ ಇನ್ನುಳಿದ ಯುವಕರು ಮಾರ್ಗ ವಿಭಜಕಗಳ ಮಧ್ಯದಲ್ಲಿದ್ದ ಕಸ ಹಾಗೂ ಹುಲ್ಲನ್ನು ತೆಗೆದು ಶುಚಿಗೊಳಿಸಿದರು.
241 – ಜೆಪ್ಪು : ಭಗಿನಿ ಸಮಾಜದ ವಿದ್ಯಾರ್ಥಿಗಳು ಹಾಗೂ ಸ್ಥಳಿಯರು ಮೋರ್ಗನ್ಸ್ಗೇಟ್ ಹಾಗೂ ಜೆಪ್ಪು ಭಗಿನಿ ಸಮಾಜದ ಆಸುಪಾಸಿನಲ್ಲಿ ಸ್ವಚ್ಛತಾಕಾರ್ಯವನ್ನು ಹಮ್ಮಿಕೊಂಡಿದ್ದರು. ಡಾ ವರ್ಣೋಧರ ಪ್ರದೀಪ ಹಾಗೂ ಶ್ರೀ ರಾಜಶ್ರೀ ಅಭಿಯಾನಕ್ಕೆ ಜಂಟಿಯಾಗಿ ಚಾಲನೆ ನೀಡಿದರು. ಭಗಿನಿ ಸಮಾಜದಿಂದ ಮೋರ್ಗನ್ಸ್ಗೇಟ್ ವರೆಗಿನ ಪ್ರದೇಶವನ್ನು ಸಂಯೋಜಕಿ ಶ್ರೀಮತಿ ರತ್ನಾ ಆಳ್ವ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶುಚಿಗೊಳಿಸಿದರು. ಅಲ್ಲದೇಜೆಪ್ಪು ಪ್ರದೇಶದ ಮನೆಮನೆಗಳಿಗೆ ತೆರಳಿ ಸ್ವಚ್ಛತೆಯ ಕರಪತ್ರ ಹಂಚಿಜಾಗೃತಿ ಮೂಡಿಸಲು ಪ್ರಯತ್ನಿಸಲಾಯಿತು. ಹವ್ಯಾಸಿ ಕಲಾವಿದ ಡಾ. ವರ್ಣೋಧರ ಪ್ರದೀಪ ನೇತೃತ್ವದಲ್ಲಿ ಭಗಿನಿ ಸಮಾಜದ ಗೋಡೆಗಳನ್ನು ಶುಚಿಗೊಳಿಸಿ ಸಾಮಾಜಿಕ ಕಾಳಜಿಯುಳ್ಳ ಚೆಂದದ ಥ್ರೀಡಿ ಚಿತ್ರಗಳನ್ನು ಬರೆಯಲಾಗುತ್ತಿದೆ. ಶ್ರೀ ಸುರೇಶ್ ಶೆಟ್ಟಿ, ಅಧ್ಯಾಪಕಿ ಶ್ರೀಮತಿ ವಿಜಯಲಕ್ಷ್ಮೀ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
242 – ಕರಂಗಲಪಾಡಿ: ಸ್ವಚ್ಛ ಕರಂಗಲಪಾಡಿ ತಂಡದ ಸದಸ್ಯರು ಇಂದು ಜೈಲ್ರಸ್ತೆ ಹಾಗೂ ಸಿ ಜಿ ಕಾಮತ್ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಶ್ರೀ ಎಂ ಆರ್ ವಾಸುದೇವ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಸ್ಥಳಿಯ ನಿವಾಸಿಗಳು ಹಾಗೂ ಕರಂಗಲಪಾಡಿ ಆಟೋಚಾಲಕರು ಸ್ವಚ್ಛತಾಕಾರ್ಯವನ್ನು ಕೈಗೊಂಡರು. ಜೈಲ್ರಸ್ತೆಯ ಮೂಲೆಯಲ್ಲಿ ರಾಶಿರಾಶಿಯಾಗಿ ಬಿದ್ದಿದ್ದ ತ್ಯಾಜ್ಯವನ್ನುತೆಗೆದು ಸ್ವಚ್ಛಗೊಳಿಸಲಾಯಿತು. ತದನಂತರ ಸುತ್ತಮುತ್ತಲಿನ ಪ್ರದೇಶಗಳನ್ನು ಶುಚಿಗೊಳಿಸಲಾಯಿತು. ಶ್ರೀ ಸತ್ಯನಾರಾಯನ ಕೆ ವಿ, ಶ್ರೀ ಪ್ರಶಾಂತ ಉಬರಂಗಳ, ಶ್ರೀಮತಿ ವಿದ್ಯಾ ಶೆಣೈ ಸೇರಿದಂತೆ ಅನೇಕ ನಾಗರಿಕರು, ಆಟೋಚಾಲಕರು ಸ್ವಚ್ಛತಾಕಾರ್ಯದಲ್ಲಿ ಕೈಜೋಡಿಸಿದರು.
243- ಮಣ್ಣಗುಡ್ಡ : ಆರ್ಟ್ಆಫ್ ಲೀವಿಂಗ್ನ ಸದಸ್ಯರು ಮಣ್ಣಗುಡ್ಡೆಯ ಗಾಂಧಿ ಪಾರ್ಕ್ನ ಸುತ್ತಮುತ್ತ ಸ್ವಚ್ಛತೆಯ ಕೈಂಕರ್ಯ ಕೈಗೊಂಡರು. ಸ್ವಾಮಿಜಿತಕಾಮಾನಂದಜಿ ಹಾಗೂ ಶ್ರಿಮತಿ ಸುಮನಾ ಕಾಮತ್ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಪಾರ್ಕ ಸುತ್ತಮುತ್ತಲಿನ ತೋಡು ಹಾಗೂ ಮಾರ್ಗಗಳನ್ನು ಶುಚಿಗೊಳಿಸಲಾಯಿತು. ಶ್ರೀಸದಾಶಿವ ಕಾಮತ್, ಶ್ರಿಮತಿ ತನುಜಾ, ಆಶಾ ರವಿ, ಶ್ರೀಮತಿ ರೇಣುಕಾ ಶೆಟ್ಟಿ ಸೇರಿದಂತೆ ಆರ್ಟ್ಆಫ್ ಲೀವಿಂಗ್ ನ ಅನೇಕ ಸದಸ್ಯರು ಅಭಿಯಾನದಲ್ಲಿ ಪಾಲ್ಗೊಂಡರು.
244-ಕೆಪಿಟಿ : ಕರ್ನಾಟಕ ಪಾಲಿಟೆಕ್ನಿಕ್ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಕೆಪಿಟಿ ಪರಿಸರದಲ್ಲಿ ಸ್ವಚ್ಛತಾಕಾರ್ಯ ಜರುಗಿತು. ಹೆದ್ದಾರಿಯ ಅಕ್ಕಪಕ್ಕದಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಕೆಪಿಟಿ ಕಾಲೇಜಿನ ಕಂಪೌಂಡಿಗೆ ಅಂಟಿಸಲಾಗಿದ್ದ ಭಿತ್ತಿ ಪತ್ರಗಳನ್ನು ತೆಗೆದು ಶುಚಿಗೊಳಿಸಲಾಯಿತು. ವಿದ್ಯಾರ್ಥಿನಿಯರು ಏರ್ಪೋರ್ಟ್ರಸ್ತೆ ಹಾಗೂ ಪುಟ್ಪಾಥ್ಗಳನ್ನು ಗುಡಿಸಿ ಸ್ವಚ್ಛಗೊಳಿಸಿದರು. ವಿಧಾನ್ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಾರ್ಯಕ್ರಮಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
245- ಕಾಟಿಪಳ್ಳ: ಜೆಸಿಆಯ್ ಗಣೇಶಪುರ ಸದಸ್ಯರು ಅಯೋಜಿಸಿದ್ದ ಸ್ವಚ್ಛತಾ ಅಭಿಯಾನ ಬೆಳಿಗ್ಗೆ 7.30 ರಿಂದ 10 ಗಂಟೆಯವರೆಗೆ ಜರುಗಿತು. ಶ್ರೀ ಹರೀಶ್ ನಾಯ್ಕ ಹಾಗೂ ಶ್ರೀ ಶರತ್ಕುಮಾರ್ ಅಭಿಯಾನಕ್ಕೆ ಚಾಲನೆ ನೀಡಿದರು. ಜೆಸಿಆಯ್ ಕೇಸರಿ ಫ್ರೇಂಡ್ಸ್ ಹಾಗೂ ನವೋದಯ ಯುವಕ ಮಂಡಳದ ಸದಸ್ಯರು ಗಣೇಶಪುರ ರಂಗಮಂದಿರದ ಮುಂಭಾಗ ಹಾಗೂ ದೇವಸ್ಥಾನದ ಮುಂಭಾಗದ ರಸ್ತೆಗಳನ್ನು ಶುಚಿಗೊಳಿಸಿದರು. ಶ್ರೀ ಬ್ರಿಜೇಶ್, ಶ್ರೀ ಗೌತಮ್ ನಾಯಕ್, ಲಕ್ಷ್ಮೀಶ್ ಅಂಚನ್ ಸೇರಿದಂತೆ ಅನೇಕ ಸಂಘಸಂಸ್ಥೆಗಳ ಪದಾಧಿಕಾರಿಗಳು ಶ್ರಮದಾನದಲ್ಲಿ ಪಾಲ್ಗೊಂಡರು. ಡಾಸಂಪತ್ಕುಮಾರ್ ಹಾಗೂ ಶ್ರೀಶ ಕರ್ಮರನ್ ಸಂಯೋಜಿಸಿದರು.
246- ಬಿಜೈ: ಮಂಗಳೂರು ಹಿರಿಯರ ಅಸೋಸಿಯೆಶನ್ ಸದಸ್ಯರಿಂದ ಬಿಜೈ-ಕರಂಗಲಪಾಡಿರಸ್ತೆಯಲ್ಲಿ ಸ್ವಚ್ಛತಾಕಾರ್ಯಕ್ರಮ ಜರುಗಿತು. ಶ್ರೀ ರಮೇಶ್ರಾವ್ ಹಾಗೂ ಇನ್ನುಳಿದ ಹಿರಿಯರು ವಿವೇಕಾನಂದ ಪಾರ್ಕ್ನಿಂದ ಬಿಜೈಚರ್ಚ್ ವರೆಗಿನ ರಸ್ತೆ ಹಾಗೂ ತೋಡುಗಳನ್ನು ಶುಚಿಗೊಳಿಸಿದರು. ಪಾಲಿಕೆ ಸದಸ್ಯ ಶ್ರೀ ಪ್ರಕಾಶ್ ಸಾಲಿಯಾನ್ ಸಕ್ರಿಯವಾಗಿ ಅಭಿಯಾನದಲ್ಲಿ ಭಾಗವಹಿಸಿದರು. ಶ್ರೀಕೃಷ್ಣ ಶೆಟ್ಟಿ, ಲಾನ್ಸಿ ಪೀಟರ್ಸ್ ಅಭಿಯಾನವನ್ನು ಆರಂಭಗೊಳಿಸಿದರು. ಶ್ರೀ ಸಿ ಡಿ ಕಾಮತ್, ಡಾ. ಅನೂಸೂಯಾ ಮತ್ತಿತರರು ಸ್ವಚ್ಛತೆಯಲ್ಲಿ ಕೈಜೋಡಿಸಿದರು. ಶ್ರೀ ನಾಗೇಶ್ ಹಾಗೂ ಶ್ರೀ ರಾಮಕುಮಾರ್ ಬೇಕಲ್ ಸಂಯೋಜಿಸಿದರು.
247-ಚಿಲಿಂಬಿ: ಅಲ್ಪಸಂಖ್ಯಾತ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿನಿಯರಿಂದ ಸ್ವಚ್ಛ ಮಂಗಳೂರು ಅಭಿಯಾನ ಚಿಲಿಂಬಿ ಕೋಟೆಕಣಿಯಲ್ಲಿ ಜರುಗಿತು. ಶ್ರೀಮತಿ ಪೂರ್ಣಿಮಾ ಕುಲಾಲ ಹಾಗೂ ಶ್ರೀ ಸತೀಶ್ಕಾಮತ್ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿನಿಯರು ಕೋಟೆಕಣಿ ಪರಿಸರದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಶ್ರಮದಾನಗೈದರು. ಶ್ರೀ ವಿಠಲದಾಸ ಪ್ರಭು ಹಾಗೂ ಶ್ರೀ ಸುಬ್ರಾಯ ನಾಯಕ ಮಾರ್ಗದರ್ಶಿಸಿದರು.
248 ವಲಚ್ಚಿಲ: ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ವಲಚ್ಚಿಲ ಜಂಕ್ಷನ್ನಲ್ಲಿ ಸ್ವಚ್ಛತಾಅಭಿಯಾನವನ್ನು ಕೈಗೊಳ್ಳಲಾಯಿತು. ಮೇರ್ಲಪದವು ಹೋಗುವ ರಸ್ತೆಯ ತಿರುವುಗಳಲ್ಲಿ ಬಿದ್ದಿದ್ದ ಕಸ ತ್ಯಾಜ್ಯವನ್ನು ತೆಗೆದು ಶುಚಿಗೊಳಿಸಲಾಯಿತು. ಜೊತೆಗೆ ಬಸ್ ತಂಗುದಾಣ ಆಟೋ ನಿಲ್ದಾಣಗಳನ್ನು ಸ್ವಚ್ಛಗೊಳಿಸಲಾಯಿತು.
249 ಕೋಟೆಕಾರ್: ಶ್ರೀ ಅಯ್ಯಪ್ಪ ಭಜನಾ ಮಂದಿರದ ಸದಸ್ಯರು ಹಾಗೂ ಸ್ಥಳೀಯ ಸಾರ್ವಜನಿಕರ ಸಹಯೋಗದಲ್ಲಿ ಕೋಟೆಕಾರ್ ಪರಿಸರದಲ್ಲಿ ಸ್ವಚ್ಛತಾಕಾರ್ಯ ನಡೆಯಿತು. ಕೋಟೆಕಾರ್ ಜಂಕ್ಷಣ್ ಬಸ್ ನಿಲ್ದಾಣ ಹಾಗೂ ಸೋಮೇಶ್ವರದತ್ತ ಸಾಗುವ ಮಾರ್ಗಗಳನ್ನು ಸ್ವಚ್ಛಗೊಳಿಸಲಾಯಿತು. ಶ್ರೀ ಜಿತೇಂದ್ರ ಕಾರ್ಯಕ್ರಮ ಸಂಯೋಜಿಸಿದರು.
ಈ ಎಲ್ಲ ಕಾಯಕ್ರಮಗಳಿಗೆ ಎಂಆರ್ಪಿಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.