ಮಂಗಳೂರು : ಚಿನ್ನಾಭರಣಗಳ ಗುಣಮಟ್ಟ ಪರೀಕ್ಷಕ ಸಂಸ್ಥೆ ಮಂಗಳೂರು ಟೆಸ್ಟಿಂಗ್ ಸೆಂಟರ್(ಎಂ.ಟಿ.ಸಿ.) ನಗರದ ಜಿ.ಎಚ್.ಎಸ್. ಕ್ರಾಸ್ ರಸ್ತೆಯಲ್ಲಿ ಮಾರ್ಚ್ 6 ರಂದು ಶುಭಾರಂಭಗೊಳ್ಳಲಿದೆ.
ಆನೆಗುಂದಿ ಮಹಾಸಂಸ್ಥಾನದ ಶ್ರೀ ಅಷ್ಟೋತ್ತರ ಶತಶ್ರೀ ಕಾಳ ಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಶ್ರೀ ಹರಿ ನಾರಾಯಣ ದಾಸ ಅಸ್ರಣ್ಣ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್, ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನದ ಟ್ರಸ್ಟಿ ನಾಗರಾಜ ಆಚಾರ್ಯ, ಮಂಗಳಾದೇವಿ ಶ್ರೀ ಉಮಾ ಮಹೇಶ್ವರ ದೇವಸ್ಥಾನದ ಟ್ರಸ್ಟಿ ಮಹೇಶ್ ಬೊಂಡಾಲ, ವಿಜಯ ಬ್ಯಾಂಕ್ ಡಿ.ಜಿ.ಎಂ. ಸುಧಾಕರ್ ನಾಯಕ್ ಎ., ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ರಮೇಶ್ ಆಚಾರ್ಯ ಉಪ್ಪಿನಂಗಡಿ, ಚಿನ್ನ ಮತ್ತು ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಮಂಜುನಾಥ ಶೇಟ್ ಮುಖ್ಯ ಅತಿಥಿಗಳಾಗಿರುವರು.
ಮಂಗಳೂರು ಟೆಸ್ಟಿಂಗ್ ಸೆಂಟರ್ :
ಚಿನ್ನದ ಗುಣಮಟ್ಟದ ಪರೀಕ್ಷೆ ನಡೆಸುವ ಅತ್ಯಾಧುನಿಕ ಯಂತ್ರಗಳನ್ನು ಬಳಸಿಕೊಳ್ಳುತ್ತಿರುವ ಮಂಗಳೂರಿನ ಪ್ರಪ್ರಥಮ ಸಂಸ್ಥೆ ನಮ್ಮದಾಗಿದ್ದು, ಮೂಲತಃ ಸಾಂಪ್ರದಾಯಿಕ ಚಿನ್ನಾಭರಣಗಳನ್ನು ಸಿದ್ಧಪಡಿಸುವ ಪರಂಪರೆಯುಳ್ಳವರಾದ ನಾವು ಈ ಸಂಸ್ಥೆಯನ್ನು 2010 ರಲ್ಲಿ ಗ್ರಾಹಕರಿಗೆ ಪರಿಚಯಿಸಿದ ಹೆಮ್ಮೆ ನಮ್ಮದು.
ಈ ಸಂಸ್ಥೆಯನ್ನು ಅಂದಿನ ಐ.ಜಿ.ಪಿ. ಗೋಪಾಲ ಹೊಸೂರು ಉದ್ಘಾಟಿಸಿ ಶುಭ ಹಾರೈಸಿದ್ದರು. 3000 ಕ್ಕೂ ಅಧಿಕ ಸಂತೃಪ್ತ ಗ್ರಾಹಕರು ನಮ್ಮ ಸಂಸ್ಥೆಯ ಸೇವೆ ಪಡೆದುಕೊಳ್ಳುತ್ತಿದ್ದಾರೆ.
ಎಸ್.ಡಿ.ಡಿ., ಎಕ್ಸ್.ಆರ್.ಎಫ್ (ಸಿಲಿಕಾನ್ ಡ್ರಿಫ್ಟ್ ದಿಟೆಕ್ಟೆರ್ ಎಕ್ಸ್ರೇ ಪ್ಲೊರೆಸೆನ್ಸ್) ಯಂತ್ರವನ್ನೂ ಚಿನ್ನದ ಗುಣಮಟ್ಟ ಪರೀಕ್ಷೆಗೆಂದು ಬಳಸಿದ ಮಂಗಳೂರಿನ ಮೊದಲ ಸಂಸ್ಥೆ ನಮ್ಮದು. ಈ ಯಂತ್ರದಲ್ಲಿ ಚಿನ್ನಕ್ಕೆ ಯಾವುದೇ ಹಾನಿಯಾಗುವುದಿಲ್ಲ ಮತ್ತು ಮೂರು ನಿಮಿಷದೊಳಗೆ ಅದು ಚಿನ್ನದ ಗುಣಮಟ್ಟವನ್ನು ಕರಾರುವಕ್ಕಾಗಿ ನಿರ್ಧರಿಸುತ್ತದೆ. ತಾಂತ್ರಿಕವಾಗಿ ಇದರ ಮೌಲ್ಯಮಾಪನದಲ್ಲಿ + ಅಥವಾ – 0.25 ಶೇಕಡಾ ವ್ಯತ್ಯಾಸ ಬರಬಹುದಷ್ಟೇ. ಸಾಂಪ್ರದಾಯಿಕವಾದ ಕಲ್ಲಿಗೆ ಒರೆ ಹಚ್ಚುವ ಪರೀಕ್ಷಾ ವಿಧಾನ ಆಯಾ ವ್ಯಕ್ತಿಯ ನೈಪುಣ್ಯವನ್ನು ಅವಲಂಬಿಸಿರುತ್ತದೆ ಮತ್ತು ಅದನ್ನು ವೈಜ್ಞಾನಿಕವಾಗಿ ಸಾಬೀತು ಮಾಡಲಾಗದು.
2013 ರಲ್ಲಿ ನಾವು ಲೇಸರ್ ವೆಲ್ಡಿಂಗ್ ಯಂತ್ರವನ್ನು ಅಮೇರಿಕಾದಿಂದ ತರಿಸಿದ್ದು ಅದು ಚಿನ್ನ, ಬೆಳ್ಳಿ, ಪ್ಲಾಟಿನಂ ಆಭರಣಗಳನ್ನು ಅವುಗಳ ಹೊಳಪು ಕುಂದಿಸದೆಯೇ ತಕ್ಷಣವೇ ಬೆಸುಗೆ ಹಾಕಬಲ್ಲರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಯಂತ್ರವನ್ನು ಬಳಕೆಗೆ ತಂದವರಲ್ಲಿ ನಾವೇ ಮೊದಲಿಗರು.
2016 ರಲ್ಲಿ ನಾವು ಫೋರ್ಟೆಬಲ್ ಎಕ್ಸ್.ಆರ್.ಎಫ್. ಮಿಷನ್ ಮತ್ತು ನಾನ್ ಡಿಸ್ಟ್ರೆಕ್ಟಿವ್ ಆಲ್ಟ್ರಾಸೋನಿಕ್ ಥಿಕ್ನೆಸ್ ಗೇಜ್ ಮಿಷನ್ನ್ನು ಜಪಾನ್ನಿಂದ ಆಮದು ಮಾಡಿಕೊಂಡಿದ್ದೇವೆ. ಇದನ್ನು ದೇವಾಲಯಗಳಿಗೆ ಕೊಂಡೊಯ್ದು ಆಭರಣಗಳ ಗುಣಮಟ್ಟ ತಪಾಸಣೆ ಮಾಡುವ ಯೋಜನೆ ಹೊಂದಿದ್ದೇವೆ. ಈ ಬಗ್ಗೆ ಈಗಾಗಲೇ ಮುಜರಾಯಿ ಇಲಾಖೆಯನ್ನೂ ಸಂಪರ್ಕಿಸಿದ್ದೇವೆ ಮತ್ತು ಅಧಿಕಾರಿಗಳಿಂದ ಧನಾತ್ಮಕ ಪ್ರತಿಕ್ರಿಯೆ ದೊರತಿದೆ ಈ ಪ್ರಸ್ತಾವಕ್ಕೆ ಅಂಗೀಕಾರ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಬ್ಯಾಂಕ್ಗಳಲ್ಲಿ ಅಡವಿಟ್ಟ ಚಿನ್ನಾಭರಣಗಳ ಮೌಲ್ಯಮಾಪನಕ್ಕೆ ಈ ಮಿಷನ್ ಬಳಸಬಹುದಾಗಿದೆ. ವರ್ಷಕ್ಕೊಮ್ಮೆ ಈ ರೀತಿ ಪರಿಶೀಲನೆ ನಡೆಸುವುದು ಆರ್.ಬಿ.ಐ. ನಿಯಮ ಪ್ರಕಾರ ಬ್ಯಾಂಕ್ಗಳಿಗೆ ಕಡ್ಡಾಯವಾಗಿರುತ್ತದೆ ಎಂದು ತಿಳಿದು ಬಂದಿದೆ. ಆಭರಣಗಳ ಪೋಟೋ ಸಹಿತ ಅದರ ಗುಣಮಟ್ಟ ಕುರಿತ ಪ್ರಮಾಣ ಪತ್ರವನ್ನು ಬ್ಯಾಂಕ್ ಆವರಣದಲ್ಲಿಯೇ ಹಾರ್ಡ್ ಕಾಪಿ ಮತ್ತು ಸಾಫ್ಟ್ ಕಾಪಿಯ ಮೂಲಕ ನೀಡಬಹುದಾಗಿದೆ. ಅನೇಕ ಹಿರಿಯರು, ಮಹಿಳೆಯರು ಚಿನ್ನದಲ್ಲಿ ಹೂಡಿಕೆ ಮಾಡಲು ಇಚ್ಛಿಸುತ್ತಾರೆ. ಅವರಿಗೆ ಎಂ.ಟಿ.ಸಿ. ಬುಲಿಯನ್ ಮೂಲಕ ಶುದ್ಧ ಚಿನ್ನವನ್ನು ಒದಗಿಸುವ ಸೌಲಭ್ಯ ನಮ್ಮಲ್ಲಿದೆ.
ನಗದು ರಹಿತ ಆರ್ಥಿಕತೆಯತ್ತ ಸಾಗುತ್ತಿರುವ ಇಂದಿನ ದಿನಗಳಲ್ಲಿ ಜನರಿಗೆ ತ್ವರಿತ ಹಣಕಾಸು ಒದಗಿಸಲು ನಮ್ಮ ಸಂಸ್ಥೆ ಚಿನ್ನದ ಸಾಲ (ಎಂ.ಟಿ.ಸಿ. ಗೋಲ್ಡ್ ಲೋನ್) ಯೋಜನೆಯನ್ನು ಆರಂಭಿಸಲಿದೆ. ಇದು ಅತ್ಯಂತ ಪಾರದರ್ಶಕವಾಗಿರಲಿದ್ದು ಆಭರಣವನ್ನು ಅಡವಿಟ್ಟ ಗ್ರಾಹಕರ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುವ ಸೌಲಭ್ಯವಿರುತ್ತದೆ ಎಂದು ಎಂ.ಟಿ.ಸಿ. ಪಾಲುದಾರರಾದ ಬಿ. ಸಿ. ಶ್ರೀಧರ್, ಸತೀಶ್ ರಾವ್, ರಕ್ಷಿತ್ ಸೂರ್ಯ, ಆದೇಶ್ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.