ಇಂದಿನ ಕಾಲದಲ್ಲಿ ರಾತ್ರಿ ವೇಳೆ ರಸ್ತೆಯಲ್ಲಿ ನಡೆದಾಡುವಾಗ ಟಾರ್ಚ್ನ್ನು ಹಿಡಿದು ನಡೆಯುವವರು ತೀರಾ ಕಡಿಮೆ. ಒಂದೋ ಬೀದಿ ದೀಪಗಳಿರುತ್ತವೆ. ಇಲ್ಲವೇ ಇಂದಿನ ಮೊಬೈಲ್ಗಳಿಗೇ ಟಾರ್ಚ್ ಲೈಟ್ ಇರುವುದರಿದಂದ ಟಾರ್ಚ್ನ ಬಗ್ಗೆ ಯಾರು ಚಿಂತಿಸುತ್ತಾರೆ ಹೇಳಿ?
ಆದರೆ ರಾತ್ರಿ ಇಡೀ ಉರಿಯುವ ಬೀದಿ ದೀಪಗಳಿಗೆ ರಾಜ್ಯ ಸರ್ಕಾರಗಳು ಸಾವಿರಾರು ಮೆಗಾ ವ್ಯಾಟ್ ವಿದ್ಯುತ್ ಮತ್ತು ಹಣ ವ್ಯಯಿಸಬೇಕಾಗುತ್ತಿದೆ.
ಅಂತೆಯೇ ರಾತ್ರಿ ಹೊತ್ತು ಪ್ರಯಾಣಿಸುವ ಮೈಸೂರಿನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ವಿದ್ಯುತ್ ಉಳಿತಾಯದೊಂದಿಗೆ ರಾಜ್ಯ ಸರ್ಕಾರಕ್ಕೆ ನೆರವಾಗುವಂತೆ ಹೊಸ ಮಾದರಿಯ ಸ್ಮಾರ್ಟ್ ಬೀದಿ ದೀಪಳನ್ನು ವಿನ್ಯಾಸಗೊಳಿಸಿದ್ದಾರೆ.
ಮೈಸೂರಿನ ವಿದ್ಯಾ ವಿಕಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಿಭಾಗದ ಜಿ. ಅರ್ಜುನ್, ಸಿ.ಜಿ. ಮೇಘನಾ, ಅಭಿಷೇಕ್ ಮಯ್ಯ, ಎಚ್.ಎನ್. ಅಭಿಷೇಕ್ ಮತ್ತು ಆರ್. ಚೇತನ್ ಈ ಬೀದಿ ದೀಪವನ್ನು ತಯಾರಿಸಿದ್ದಾರೆ.
ವಿಶೇಷವೆಂದರೆ ಮೋಷನ್-ಸೆನ್ಸಾರ್ ಹೊಂದಿರುವ ಈ ಬೀದಿ ದೀಪಗಳು ವಾಹನಗಳು ಅಥವಾ ಜನರು ಸಮೀಪಿಸುತ್ತಿದ್ದಂತೆ ಪ್ರಕಾಶಮಾನವಾಗುತ್ತವೆ. ವಾಹನಗಳು ಮುಂದಕ್ಕೆ ದಾಟುತ್ತಿದ್ದಂತೆ ದೀಪಗಳ ಬೆಳಕು ಮಂದವಾಗುತ್ತದೆ.
ವೈರ್ಲೆಸ್ ಸೆನ್ಸಾರ್ ನೆಟ್ವರ್ಕ್ ತಂತ್ರಜ್ಞಾನ ಬಳಸಿ ರಚಿಸಲಾಗಿರುವ ‘ಸ್ಮಾಟ್ ಹೈವೇ’ ಹೆಸರಿನ ಈ ಸ್ಮಾರ್ಟ್ ಬೀದಿ ದೀಪಗಳು, ಸಾಮಾನ್ಯ ಬೀದಿ ದೀಪಗಳಿಗೆ ಹೋಲಿಸಿದರೆ ಶೇ. 60ರಷ್ಟು ವಿದ್ಯುತ್ ಉಳಿತಾಯ ಮಾಡುವ ಸಾಮರ್ಥ್ಯ ಹೊಂದಿದೆ.
ವಿದ್ಯಾಥಿಗಳು ಈ ಪ್ರಾಜೆಕ್ಟ್ ಮೇಲೆ ಸುಮಾರು 15,000 ರೂ. ವ್ಯಯಿಸಿದ್ದು, ಇದನ್ನು ಪೂರ್ಣಗೊಳಿಸಲು 8 ತಿಂಗಳು ಶ್ರಮಿಸಿದ್ದಾರೆ. ವಡೋದರಾದಲ್ಲಿ ಇತ್ತೀಚೆಗೆ ನಡೆದ ಸ್ವಿಚ್ ಗ್ಲೋಬಲ್ ಎಕ್ಸ್ಪೋ 2016ರಲ್ಲಿ ಇದರ ಪ್ರದರ್ಶನವೂ ನಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.