ಕೊಚ್ಚಿ: ಕೇರಳದ ಪ್ರೊಫೆಸರ್ ಟಿ.ಜೆ ಜೋಸೆಫ್ ಅವರ ಕೈ ಕಡಿದ ಪ್ರಕರಣದ 10 ಮಂದಿ ತಪ್ಪಿತಸ್ಥರಿಗೆ ಎರ್ನಾಕುಲಂನ ಎನ್ಐಎ ನ್ಯಾಯಾಲಯ 8 ವರ್ಷಗಳ ಜೈಲುಶಿಕ್ಷೆಯನ್ನು ನೀಡಿದೆ.
ಉಳಿದ ಇಬ್ಬರಿಗೆ ಎರಡು ವರ್ಷಗಳ ಶಿಕ್ಷೆಯನ್ನು ನೀಡಲಾಗಿದೆ. ಈ ಎಲ್ಲಾ ತಪ್ಪಿತಸ್ಥರೂ ಪಾಪುಲರ್ ಫ್ರಾಂಟ್ ಆಫ್ ಇಂಡಿಯಾದ ಕಾರ್ಯಕರ್ತರಾಗಿದ್ದಾರೆ.
ಮೇ 6ರಂದು ನ್ಯಾಯಾಲಯ ಪ್ರಕರಣದಲ್ಲಿ 13 ಮಂದಿ ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು. ಮೇ 8ಕ್ಕೆ ಶಿಕ್ಷೆಯ ಪ್ರಮಾಣದ ತೀರ್ಪನ್ನು ಕಾಯ್ದಿರಿಸಿತ್ತು.
2010ರ ಜುಲೈ 4ರಂದು ಈ ದುಷ್ಕರ್ಮಿಗಳು ಜೋಸೆಫ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅವರ ಕೈಯನ್ನು ಕಡಿದು ಹಾಕಿದ್ದರು. ಪ್ರವಾದಿ ಮೊಹಮ್ಮದರ ಬಗ್ಗೆ ಪ್ರಶ್ನೆ ಪತ್ರಿಕೆಯಲ್ಲಿ ಅವಹೇಳನಕಾರಿ ಪ್ರಶ್ನೆ ಕೇಳಲಾಗಿದೆ ಎಂದು ಆರೋಪಿಸಿ ಈ ಕೃತ್ಯ ಎಸಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.