ನವದೆಹಲಿ: ನರೇಂದ್ರ ಮೋದಿಯ ಆಡಳಿತದಲ್ಲಿ ಇಸ್ಲಾಂನ್ನು ರಕ್ಷಣೆ ಮಾಡುವುದಕ್ಕಾಗಿ ಫತ್ವಾ ಹೊರಡಿಸಿ ಎಂದು ದಾರುಲ್ ಉಲುಮ್ ದಿಯೋಬಂದ್ ಸಂಘಟನೆಗೆ ಜಾಮಿಯತ್ ಉಲಮಾ-ಈ-ಹಿಂದ್ ಮುಖಂಡ ಮೌಲಾನಾ ಮೆಹಮೂದ್ ಮದನಿ ಮನವಿ ಮಾಡಿಕೊಂಡಿದ್ದಾನೆ.
ಮೇ 16ರಂದು ದೆಹಲಿಯಲ್ಲಿ ಪ್ರಮುಖ ಮುಸ್ಲಿಂ ಮುಖಂಡರು ಸಮಾವೇಶವನ್ನು ಆಯೋಜಿಸಿದ್ದಾರೆ. ಈ ವೇಳೆ ಫತ್ವಾ ಹೊರಡಿಸಲಾಗುತ್ತದೆ ಎಂಬ ವಿಶ್ವಾಸವನ್ನು ಮದನಿ ವ್ಯಕ್ತಪಡಿಸಿದ್ದಾನೆ. ಅಂದು ಮೋದಿ ಆಡಳಿತವೂ ಒಂದು ವರ್ಷ ಪೂರೈಸಲಿದೆ.
ಈ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಮುಕ್ತಾರ್ ಅಬ್ಬಾಸ್ ನಖ್ವಿ ‘ಸರ್ಕಾರ ಫತ್ವಾಗಳಿಂದ ಸ್ಥಾಪಿತವಾಗುವುದಿಲ್ಲ, ಫತ್ವಾಗಳಿಂದ ಸರ್ಕಾರ ನಡೆಯುವುದು ಇಲ್ಲ’ ಎಂದಿದ್ದಾರೆ.
ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಮದನಿ ಈ ರೀತಿಯ ರಾಜಕೀಯ ದಾಳವನ್ನು ಉರುಳಿಸುತ್ತಿದ್ದಾನೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.