ಹುಬ್ಬಳ್ಳಿ: ರಾಜ್ಯ ಒಲಿಂಪಿಕ್ ಸ್ಪರ್ಧೆಗಳ ಅಂಗವಾಗಿ ನಗರದ ಪಾಲಿಕೆ ಈಜುಕೋಳದಲ್ಲಿ ಮಂಗಳವಾರ ಸ್ಪರ್ಧೆ ಆರಂಭವಾಗಿದ್ದು, ಈಜುಗಾರರು ಮೀನುಗಳನ್ನೂ ನಾಚಿಸುವಂತೆ ಕಂಡುಬಂದರು.
ಪುರುಷರ ಫ್ರೀ ಸ್ಟೈಲ್ 800 ಮೀ. ಸ್ಪರ್ಧೆಯಲ್ಲಿ ಬಸವನಗುಡಿ ಅಕ್ವಟಿಕ್ ಕೇಂದ್ರದ ಅವಿನಾಶ್ ಮಣಿ 9ನಿಮಿಷ 19 ಸೆಕೆಂಡ್ 5 ಮಿಲಿ ಸೆಕೆಂಡ್ಗಳಲ್ಲಿ ಗುರಿ ತಲುಪುವ ಮೂಲಕ 528 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರು.
ಎರಡನೇ ಸ್ಥಾನದಲ್ಲಿ ಅದೇ ಕೇಂದ್ರದ ಓಂಕುಮಾರ್ ಟಿ.ಹೆಚ್. (9:32.51) 492 ಅಂಕ ಗಳಿಸಿದರು. ಮೂರನೇ ಸ್ಥಾನದಲ್ಲಿ ಅದೇ ಕೇಂದ್ರದ ಲಿತೇಶ್ ಜಿ ಗೌಡ (9:52.98) 443 ಅಂಕ ಪಡೆದರು.
ಪಾರಮ್ಯ ಮೆರೆದ ಮತ್ಸ್ಯ ಕನ್ಯೆಯರು
ಇದೇ ವಿಭಾಗದ ಮಹಿಳೆಯರ ಸ್ಪರ್ಧೆಯಲ್ಲಿ ಬೆಂಗಳೂರಿನ ಬಸವನಗುಡಿ ಅಕ್ವಟಿಕ್ ಕೇಂದ್ರದ ಖುಷಿ ದಿನೇಶ್ (9:53.88) 575 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರು. ನಿಕಿತ ಎಸ್.ವಿ. (10:04.64) 545 ಅಂಕಗಳೂಂದಿಗೆ ದ್ವಿತೀಯ ಸ್ಥಾನ ಹಾಗೂ ಪ್ರೇಕ್ಷಾ ಹೆಚ್.ಎಂ. (10:07.13) 539 ಅಂಕ ಗಳಿಸಿ ತೃತೀಯ ಸ್ಥಾನ ಪಡೆದರು.
ಪುರುಷರ 100 ಮಿ. ಬ್ರೆಸ್ಟ್ ಸ್ಟೋಕ್
ಪುತ್ತೂರು ಅಕ್ವಟಿಕ್ ಕೇಂದ್ರದ ವೈಷ್ಣವ ಹೆಗಡೆ 1:10.70 ಸಮಯದಲ್ಲಿ 565 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು. ದ್ವಿತೀಯ ಸ್ಥಾನದಲ್ಲಿ ಬೆಂಗಳೂರಿನ ಬಸವನಗುಡಿ ಅಕ್ವಟಿಕ್ ಕೇಂದ್ರದ ಪೃಥ್ವಿ ಎಂ (1:11.72) 541 ಅಂಕ ಗಳಿಸಿದರು. ಅದೇ ಕೇಂದ್ರದ ನಿಶಾಂತ ಎಸ್. (1:13.76) 497 ಅಂಕ ಗಳಿಸಿ ತೃತೀಯ ಸ್ಥಾನ ಪಡೆದರು.
ಮಹಿಳೆಯರ ವಿಭಾಗ
ಇದೇ ವಿಭಾಗದ ಮಹಿಳೆಯರ ಸ್ಪರ್ಧೆಯಲ್ಲಿ ಗ್ಲೋಬಲ್ ಸ್ವಿಮ್ ಕೇಂದ್ರದ ಹರ್ಶಿತಾ ಜಯರಾಮ್ (1:21.56) 493 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು. ದ್ವಿತೀಯ ಸ್ಥಾನವನ್ನು ಶ್ರೀಯಾ ಆರ್. ಭಟ್ (1:23.08) 466 ಅಂಕ ಹಾಗೂ ತೃತಿಯ ಸ್ಥಾನದಲ್ಲಿ ಪ್ರತೀಕ್ಷಾ ಪಾಟೀಲ್ (1:24.30) 446 ಅಂಕ ಗಳಿಸಿ ಗೆಲುವಿನ ನಗೆ ಬೀರಿದರು.
ಪುರುಷರ ೨೦೦ ಬ್ಯಾಕ್ ಸ್ಟ್ರೋಕ್
ಈ ವಿಭಾಗದಲ್ಲಿ ಗೋಬಲ್ ಸ್ವಿಮ್ ಕೇಂದ್ರದ ಹೇಮಂತ ಜೇನುಕಲ್ ವಿ.ಬಿ. (2:20.17) 509 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರು. ಎರಡನೇ ಸ್ಥಾನವನ್ನು ನಿಶಾಂತ ಕುಮಾರ್ (2:23.14) 478 ಅಂಕಗಳ ಮೂಲಕ ಪಡೆದರು. ತೃತೀಯ ಸ್ಥಾನವನ್ನು ಸೌರಭ್ ವೆರ್ಣೀಕರ್ (2:26.19) 448 ಅಂಕ ಗಳಿಸಿ ಪಡೆದರು.
ಮಹಿಳಾ ವಿಭಾಗ
ಶ್ರೀಯಾ ಆರ್. ಭಟ್ (2:44.34) 434 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರು. ಶಿಮ್ರಾನ್ ದೀಪಕ್ ಮುಂಗರೆಕರ್ (2:47.89) 403 ಅಂಕ ಗಳಿಸಿ ದ್ವಿತೀಯ ಹಾಗೂ ಮೂರನೇ ಸ್ಥಾನವನ್ನು ಸಾಚಿ ಜಿ. (2:48.85) 396 ಅಂಕ ಗಳಿಸಿ ಪಡೆದರು.
ರಿಲೇ ಈಜು ಸ್ಪರ್ಧೆ
4*300 ಮೀ. ಪುರುಷರ ಫ್ರೀ ಸ್ಟೈಲ್ ರಿಲೇ ಈಜು ಸ್ಪರ್ಧೆಯಲ್ಲಿ ಬೆಂಗಳೂರಿನ ಬಸವನಗುಡಿ ಅಕ್ವಟಿಕ್ ಕೇಂದ್ರದ ಎ ತಂಡ 8:10.67 ಸಮಯದಲ್ಲಿ ಗುರಿ ಸಾಧಿಸಿ 620 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರು. ಅದೇ ಕೇಂದ್ರದ ಬಿ ತಂಡ 9:19.67 ಸಮಯದಲ್ಲಿ 418 ಅಂಕ ಗಳಿಸಿ ಎರಡನೇ ಸ್ಥಾನ ಪಡೆಯಿತು. ಸ್ವಿಮ್ಲೈಫ್ ತಂಡ 13:49.85 ಸಮಯದಲ್ಲಿ 128 ಅಂಕ ಗಳಿಸಿ ತೃತೀಯ ಸ್ಥಾನವನ್ನು ಪಡೆಯಿತು.
ಮಹಿಳಾ ವಿಭಾಗ
4*100 ಮೀ. ಮಹಿಳೆಯರ ಫ್ರೀ ಸ್ಟೈಲ್ ರಿಲೇ ಈಜು ಸ್ಪರ್ಧೆಯಲ್ಲಿ ಬೆಂಗಳೂರಿನ ಬಸವನಗುಡಿ ಅಕ್ವಟಿಕ್ ಕೇಂದ್ರದ ಅನುಕ್ರಮವಾಗಿ ಎ ಮತ್ತು ಬಿ ತಂಡಗಳು 524 ಹಾಗೂ 509 ಅಂಕ ಗಳಿಸುವ ಮೂಲಕ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.