ಮಂಗಳೂರು: ಸ್ವಾಭಿಮಾನದ ಬದುಕನ್ನು ಬದುಕಲು ಪ್ರಯತ್ನಿಸುವುದರೊಂದಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಸಭ್ಯ ನಾಗರಿಕರಾಗಿ ಬದುಕಲು ಪ್ರಯತ್ನಿಸುತ್ತಿರುವ ಮಂಗಳಮುಖಿಯರಿಗೆ ಕೆಲವೊಂದು ಮಂಗಳಮುಖಿ ನಾಯಕಿಯರು ಎನಿಸಿಕೊಂಡವರು ವಿವಿಧ ರೀತಿಯ ಕಿರುಕುಳ ನೀಡುವುದರೊಂದಿಗೆ ಬಲವಂತವಾಗಿ ಲೈಂಗಿಕ ಕಾರ್ಯಕರ್ತೆಯರನ್ನಾಗಿ ಅಥವಾ ಭಿಕ್ಷೆ ಬೇಡಿ ದಿನ ದೂಡುವ ಕೆಲಸ ನಗರದಲ್ಲಿ ನಡೆಯುತ್ತಿದೆ.
ಮಂಗಳಮುಖಿಯರಾಗಿ ಯಾವುದೇ ರೀತಿಯ ಆಸರೆ ಇಲ್ಲದೆ ಬದುಕುತ್ತಿದ್ದ ನಮಗೆ ವಾಯ್ಲೆಟ್ ಪಿರೇರಾರವರು ನಮ್ಮ ಉತ್ತಮ ಭವಿಷ್ಯಕ್ಕಾಗಿ ಅಂತೆಯೇ ನಮ್ಮನ್ನು ಮುಖ್ಯವಾಹಿನಿಗೆ ತರಲು ತುಂಬಾ ಶ್ರಮಿಸುತ್ತಿದ್ದಾರೆ. ಹಾಗಿರುವಾಗ ನಮ್ಮನ್ನು ಪರಿವರ್ತನಾ ಟ್ರಸ್ಟಿಗೆ ಹೋಗಬಾರದು, ಅದರ ಸದಸ್ಯರಾಗಬಾರದು ಎಂಬ ಬೆದರಿಕೆಯನ್ನು ಕೂಡ ಹಾಕಿದ್ದರು. ಮಾ ಗುರುಗಳು ಎಂದು ಕರೆಯುವ ಕೆಲವುರು ನಮ್ಮನ್ನು ಪರಿವರಿವರ್ತನಾ ಸಂಘಕ್ಕೆ ಹೋಗಬಾರದು, ನೀವು ಭಿಕ್ಷೆ ಬೇಡಿ ಅಥವಾ ಲೈಂಗಿಕ ಕಾರ್ಯಕರ್ತೆಯರಾಗಿ ಜೀವನವನ್ನು ನಡೆಸಬೇಕು. ನಿಮಗೆ ಯಾವುದೇ ಸಂಘಸಂಸ್ಥೆಯೂ ಬೇಡ ಎಂದು ನಮ್ಮನ್ನು ತಡೆದಿದ್ದರು. ಆದರೆ ನಮ್ಮ ವಾಯ್ಲೆಟ್ ಮೇಡಮ್ ನಮಗೋಸ್ಕರ ತುಂಬಾ ಕೆಲಸಗಳನ್ನು ಮಾಡುತ್ತಿದ್ದಾರೆ. ನಮಗೆ ತೊಂದರೆಯಾದಾಗ ನಮಗೆ ಸಹಾಯ ಮಾಡುತ್ತಾರೆ. ಆದ್ದರಿಂದ ನಾವು ಪರಿವರ್ತನಕ್ಕೆ ಹಿಂದೆ ಬಂದೆವು. ನಮಗೆ ಸರಕಾರದಿಂದ ಬರುವ ಸವಲತ್ತುಗಳನ್ನು ಕೊಡಿಸಲು ವಾಯ್ಲೆಟ್ ಮೇಡಮ್ ತುಂಬಾ ಸಹಾಯ ಮಾಡಿದ್ದಾರೆ. ಆಧಾರ್ ಕಾರ್ಡ್ ಮಾಡಿಸಲು ಪರಿವರ್ತನಾ ಟ್ರಸ್ಟ್ನ ಕಚೇರಿಗೆ ಮೇಷಿನ್ ತರಿಸಿ ನಮ್ಮ ಕಾರ್ಡುಗಳನ್ನು ಮಾಡಿಸಿದ್ದಾರೆ. ನಮಗೆ 17 ಮಂದಿಗೆ ಟೈಲರಿಂಗ್ ಮತ್ತು ಬ್ಯೂಟಿಷಿಯನ್ ಕೋರ್ಸ್ ಮಾಡಿಸಲು ಅರ್ಜಿ ಹಾಕಿಸಿದ್ದು, ಸದ್ಯದಲ್ಲಿಯೇ ಈ ಕೋರ್ಸುಗಳು ಪ್ರಾರಂಭ ಆಗಲಿವೆ.
ಈ ರೀತಿ ನಾವು ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸುತ್ತಿದ್ದೇವೆ. ಸ್ವಾಭಿಮಾನದಿಂದ ಬದುಕುವ ಪ್ರಯತ್ನವಾಗಿ ಟೈಲರಿಂಗ್ ಹಾಗೂ ಇನ್ನಿತರ ಸ್ವ ಉದ್ಯೋಗದ ತರಬೇತಿಯನ್ನು ಪಡೆಯಲು ಕೂಡ ಆರಂಭಿಸುತ್ತೇವೆ. ಸಮಾಜದಲ್ಲಿ ಈ ವರೆಗೆ ನಮಗೆ ಯಾವುದೇ ಅಸ್ತಿತ್ವವೇ ಇಲ್ಲದ ವೇಳೆಯಲ್ಲಿ ಪರಿವರ್ತನಾ ಟ್ರಸ್ಟಿನ ನೇತೃತ್ವದಲ್ಲಿ ಸ್ವಂತ ಆಧಾರ್ ಕಾರ್ಡ್ ಪಡೆಯುವ ಅವಕಾಶ ಲಭಿಸಿದ್ದು, ಇದರಿಂದ ನಮಗೆ ಒಂದು ಅಸ್ತಿತ್ವ ಲಭಿಸಿದಂತಾಗಿದೆ.
ಸ್ವ ಉದ್ಯೋಗದೊಂದಿಗೆ ಸ್ವಾಭಿಮಾನದೊಂದಿಗೆ ಬದುಕುವ ಆಸೆಯನ್ನು ಹೊಂದಿದ ನಮಗೆ ಕೆಲವೊಂದು ಮಂಗಳಮುಖಿಯರ ನಾಯಕಿ ಎನಿಸಿಕೊಂಡವರು ನಮ್ಮನ್ನು ಒತ್ತಾಯವಾಗಿ ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ ಅಲ್ಲದೆ ಅಲ್ಲಿ ದುಡಿದು ನಾಯಕಿ ಎನಿಸಿಕೊಂಡವರಿಗೆ ತಿಂಗಳಿಗೆ ರೂ. 6000 ಕೊಡಬೇಕೆಂದು ಇಲ್ಲವಾದರೆ ನಮ್ಮನ್ನು ಮಂಗಳೂರಿನಲ್ಲಿ ಜೀವಿಸಲು ಬಿಡುವುದಿಲ್ಲ ಎಂಬ ಬೆದರಿಕೆಯನ್ನು ಹಾಕಿದ್ದಾರೆ. ನಾವು ಕಷ್ಟಪಟ್ಟು, ಭಿಕ್ಷೆ ಬೇಡಿ, ಲೈಂಗಿಕ ಕಾರ್ಯಕರ್ತೆಯರಾಗಿ ದುಡಿದ ಹಣವನ್ನು ನಾವು ಅವರಿಗೆ ಯಾಕೆ ನೀಡಬೇಕು. ನಾವು ಹಣಕೊಡಲು ಒಪ್ಪದಾಗ ನಮಗೆ ಹೊಡೆಯಲು ತುಂಬಾ ಸಾರಿ ಜನರನ್ನು ಕಳುಹಿಸಿದ್ದರು ಆದರೆ ನಾವು ತಪ್ಪಿಸಿಕೊಂಡೆವು. ಈಗ ನಮಗೆ ಪರಿವರ್ತನಾ ಟ್ರಸ್ಟ್ ತುಂಬಾ ಸಹಾಯ ಮಾಡುತ್ತಿದೆ. ನಮ್ಮ ಕೋರ್ಸ್ ಮುಗಿದ ಮೇಲೆ ನಾವು ಸಹ ಇತರರಂತೆ ದುಡಿದು ಸಂಪಾದನೆ ಮಾಡಬೇಕೆಂಬುದೆ ನಮ್ಮ ಉದ್ದೇಶವಾಗಿದೆ. ಭಾನುವಾರ ನಮ್ಮ ಸಹಪಾಟಿ ಪ್ರಿಯ ಎಂಬವರ ಮೇಲೆ ಹಲ್ಲೆಯಾಗಿದೆ. ಅವರು ರೂ. 6000 ಕೊಡಲು ನಿರಾಕರಿಸಿದ್ದರು ಅದಕ್ಕಾಗಿ ಯಾರಿಂದಲೋ ಪ್ರಿಯಾರ ತಲೆಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ನಮಗೆ ನಗರದಲ್ಲಿ ರಕ್ಷಣೆ ಇಲ್ಲದ ಹಾಗೆ ಆಗಿದೆ, ನಾವು ಈ ಕುರಿತಂತೆ ಪಣಂಬೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ದಯವಿಟ್ಟು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ನಮ್ಮಿಂದ ವಸೂಲಿ ಮಾಡುವುದನ್ನು ನಿಲ್ಲಿಸಬೇಕಾಗಿ ನಮ್ಮ ವಿನಂತಿ.
ಟ್ರಸ್ಟಿನ ಸಹಾಯದಿಂದ ಸ್ವಾಭಿಮಾನದೊಂದಿಗೆ ಬದಕು ಕಟ್ಟಿಕೊಳ್ಳಲು ಪ್ರಯತ್ನಿಸುವ ನಮಗೆ ಇಂತಹ ಕೆಲವೊಂದು ವ್ಯಕ್ತಿಗಳ ಕಿರುಕುಳದಿಂದ ನಡೆದಾಡುವುದು ಕೂಡ ಕಷ್ಟವಾಗಿದೆ. ನಮಗೆ ಸಮಾಜ, ಆಡಳಿತ ವರ್ಗ ಹಾಗೂ ಪೋಲಿಸ್ ಇಲಾಖೆಯಿಂದ ಸೂಕ್ತ ರಕ್ಷಣೆಯ ಅವಶ್ಯಕತೆ ಇದೆ ಅಲ್ಲದೆ ಇಂತಹ ಕಿರುಕುಳ ನೀಡುವ ವ್ಯಕ್ತಿಗಳ ವಿರುದ್ದ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.