ಧಾರವಾಡ: ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಹಾಕಿ ಪಂದ್ಯದ 5 ನೇ ದಿನವಾದ ಇಂದು ಅಂತಿಮ ಮಹಿಳಾ ಹಾಕಿ ಲೀಗ್ ಪಂದ್ಯವು ಡಿ.ವೈ.ಇ.ಎಸ್ ಮೈಸೂರು ಹಾಗೂ ಬೆಳಗಾವಿ ಮಹಿಳಾ ತಂಡಗಳು ಮುಖಾಮುಖಿಯಾದವು.
ಡಿ.ವೈ.ಇ.ಎಸ್ ಮೈಸೂರು ತಂಡವು ಬೆಳಗಾವಿ ತಂಡವನ್ನು 13-0 ಗೋಲುಗಳ ಅಂತರದಿಂದ ಮಣಿಸಿ ಪೈನಲ್ಗೆ ಲಗ್ಗೆ ಇಟ್ಟಿತು.
ಡಿ.ವೈ.ಇ.ಎಸ್ ಮೈಸೂರು ತಂಡದ ಪರ ರಶ್ಮಿ-4 ಗೋಲು(2, 3, 15 ಹಾಗೂ 16 ನೇ.ನಿ) ಕೃತಿಕಾ-1 (10ನೇ .ನಿ), ನಿಹಾ-2 (12 , 38 ನೇ .ನಿ), ತನುಶ್ರೀ-1 (20ನೇ ನಿ.), ರಮ್ಯಾ-3 (19, 39, 44 ನೇ, ನಿ), ಭವ್ಯಾ ಎಸ್.ಪಿ-1(46 ನೇ,ನಿ), ರುಕ್ಮಿಣಿ-1 (13ನೇ, ನಿ) ತಂಡದ ಜಯಕ್ಕೆ ಕಾರಣರಾದರು. ಬೆಳಗಾವಿ ತಂಡವು ಯಾವುದೇ ಗೋಲುಗಳಿಸದೇ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಡಿ.ವೈ.ಇ.ಎಸ್ ಮೈಸೂರು ತಂಡವು ನಾಳೆ ನಡೆಯುವ ಫೈನಲ್ ಪಂದ್ಯದಲ್ಲಿ ಬಳ್ಳಾರಿ ತಂಡವನ್ನು ಎದುರಿಸಲಿದೆ.
ನಂತರ ನಡೆದ 2ನೇ ಪಂದ್ಯದಲ್ಲಿ ಬಳ್ಳಾರಿ ತಂಡವು ಆತಿಥೇಯ ಹುಬ್ಬಳ್ಳಿ-ಧಾರವಾಡ ತಂಡವನ್ನು 4-1 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಜಯ ಕಂಡಿತು. ಬಳ್ಳಾರಿ ತಂಡದ ಪರ ನಿಕಿತಾ-2 (5 , 6ನೇ ನಿ), ವಿಜಯಲಕ್ಷ್ಮೀ-1 (8 ನೇ.ನಿ), ಸಾಯೀದಾ-1 (2ನೇ ನಿ), ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆತಿಥೇಯ ತಂಡ ಒಂದೇ ಒಂದು ಗೋಲನ್ನು ಗಳಿಸಿ ಸೋತಿತು. ಹುಬ್ಬಳ್ಳಿ-ಧಾರವಾಡ ತಂಡದ ಪರ ಐಶ್ವರ್ಯ-1 (22 ನೇ. ನಿ) ಗಳಿಸಿದರು. ಬಳ್ಳಾರಿ ಈ ಜಯದೊಂದಿಗೆ ಪೈನಲ್ ಪ್ರವೇಶಿಸಿತು.
ಪುರುಷರ ಹಾಕಿ ವರದಿ:
ಪೈನಲ್ಗೆ ಲಗ್ಗೆ ಇಟ್ಟ ಕೂರ್ಗ(ಕೊಡಗು) ಹಾಗೂ ಆರ್.ಡಬ್ಲು.ಎಫ್ ಬೆಂಗಳೂರು ಪುರುಷರ ಹಾಕಿ ತಂಡ ಇಂದು ನಡೆದ ಪುರುಷರ ಮೊದಲನೇ ಹಾಕಿ ಸೆಮಿಪೈನಲ್ ಪಂದ್ಯದಲ್ಲಿ ಆರ್.ಡಬ್ಲು.ಎಫ್ ತಂಡವು ಆತಿಥೇಯ ಹುಬ್ಬಳ್ಳಿ-ಧಾರವಾಡ ತಂಡವನ್ನು 6-4 ಗೋಲುಗಳಿಂದ ಮಣಿಸಿತು. ಆರ್.ಡಬ್ಲು.ಎಫ್ ತಂಡವು ಪಂದ್ಯದ ಪ್ರಥಮಾರ್ಧದಲ್ಲಿ ತಂಡದ ಕುಶಾ-2 (26, 31ನೇ. ನಿ) ಗೋಲುಗಳಿಸುವ ಮೂಲಕ 2-0 ದಿಂದ ಮುನ್ನಡೆ ಸಾಧಿಸಿತು. ಈ ಸಮಯದಲ್ಲಿ ಆತಿಥೇಯ ತಂಡ ಯಾವುದೇ ಗೋಲುಗಳಿಸದೆ ವಿಫಲವಾಯಿತು.
ದ್ವೀತಿಯಾರ್ಧದಲ್ಲಿ ಆತಿಥೇಯ ತಂಡ ಎರಡು ಮಹತ್ವದ ಗೋಲುಗಳಿಸುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಈ ಸಮಯದಲ್ಲಿ ತಂಡದ ಪರ ವಿನಾಯಕ-1 (40ನೇ.ನಿ), ಮಂಜುನಾಥ-1 (64ನೇ ನಿ.)ಗೋಲು ಗಳಿಸಿದರು.
ಪಂದ್ಯವು ಡ್ರಾ ಗೊಂಡ ನಂತರ ಎರಡು ತಂಡಗಳಿಗೆ ಪೆನಾಲ್ಟಿ ಶೂಟೌಟ್ ಗೆ ಅವಕಾಶ ನೀಡಲಾಯಿತು. ಆರ್.ಡಬ್ಲು.ಎಫ್ ತಂಡವು 4 ಗೋಲುಗಳನ್ನು ಗಳಿಸುವ ಮೂಲಕ ಫೈನಲ್ ಗೆ ಪ್ರವೇಶಿಸಿತು. ತಂಡದ ಪರ ಉಮೇಶ-1, ಕುಶಾ-1, ಚಂಗಪ್ಪ-1, ಬಿಜು-1 ಗೋಲು ಗಳಿಸಿದರು.
ಹುಬ್ಬಳ್ಳಿ-ಧಾರವಾಡ ತಂಡವು ಪೆನಾಲ್ಟಿ ಶೂಟೌಟ್ ನಲ್ಲಿ ಕೇವಲ 2 ಗೋಲು ಗಳಿಸುವ ಮೂಲಕ ಸುಲಭವಾಗಿ ಶರಣಾಯಿತು. ತಂಡದ ಪರ ಶ್ರೀಶೈಲ-1, ಸಚಿನ್-1 ಗಳಿಸಿದರು. ಇದರಿಂದಾಗಿ ತನ್ನ 3ನೇ ಸ್ಥಾನಕ್ಕಾಗಿ ನಾಳೆ ಸಾಯಿ ಸೌಥ್ ಬೆಂಗಳೂರು ತಂಡದ ವಿರುದ್ದ ಹೋರಾಡಲಿದೆ.
2ನೇ ಸೆಮಿ ಪೈನಲ್ ಪಂದ್ಯದಲ್ಲಿ ಕೂರ್ಗ(ಕೊಡಗು) ತಂಡವು ಸಾಯಿ ಸೌಥ್ ಬೆಂಗಳೂರು ತಂಡವನ್ನು 2-1 ಗೋಲುಗಳ ಅಂತರದಿಂದ ರೋಚಕ ಜಯದೊಂದಿಗೆ ಪೈನಲ್ ಪ್ರವೇಶಿಸಿತು.
ಕೂರ್ಗ ತಂಡದ ಪರ ಕುಂಜಪ್ಪ-1 (31ನೇ.ನಿ), ಭರತ-1 (67ನೇ. ನಿ)ಗಳಿಸಿದರು. ಸಾಯಿ ಸೌಥ್ ಪರ ಪೃಥ್ವಿ-1 (53ನೇ, ನಿ)ಗಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.