ನವದೆಹಲಿ: ಇಂದು (ಜ.20) ರಾತ್ರಿ 10.30 ಕ್ಕೆ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಹೊಸ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುಎಸ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವದಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿರುವ ನಾಯಕರಾಗಲಿದ್ದಾರೆ.
ವಿಶ್ವದ ಎಲ್ಲಾ ನಾಯಕರುಗಳ ನಡುವೆ ಪ್ರಧಾನಿ ಮೋದಿ ಅವರು ಫೇಸ್ಬುಕ್, ಟ್ವಿಟರ್, ಯುಟ್ಯೂಬ್ ಮತ್ತು ಗೂಗಲ್+ ನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿರುವ ನಾಯಕರಾಗಿದ್ದಾರೆ.
ಪ್ರಧಾನಿ ಮೋದಿ ತಂತ್ರಜ್ಞಾನ ಮತ್ತು ಆಧುನಿಕ ಸಂವಹನ ಮಾಧ್ಯಮಗಳ ಮೂಲಕ ದೇಶದ ಜನತೆ ಹಾಗೂ ಯುವ ಸಮೂಹದ ಜೊತೆ ಸಂಪರ್ಕದಲ್ಲಿರುವವರಾಗಿದ್ದಾರೆ, ಇದಷ್ಟೇ ಅಲ್ಲದೇ ಅವರು ತಮ್ಮ ಆಡಳಿತದಲ್ಲಿಯೂ ಸಹ ತಂತ್ರಜ್ಞಾನದ ಬಳಕೆಯನ್ನು ಬಯಸುತ್ತಾರೆ.
ಸಾಮಾಜಿಕ ತಾಣಗಳಲ್ಲಿ ಮೋದಿ ಅವರ ಹಿಂಬಾಲಕರ ಸಂಖ್ಯೆ ಹೀಗಿದೆ,
ಟ್ವಿಟರ್ 26.5 ಮಿಲಿಯನ್, ಫೇಸ್ಬುಕ್ 39.2 ಮಿಲಿಯನ್, ಗೂಗಲ್+ 3.2 ಮಿಲಿಯನ್, ಲಿಂಕ್ಡ್ ಇನ್ 1.99೯ ಮಿಲಿಯನ್, ಇನ್ಸ್ಟಾಗ್ರಾಮ್ 5.8 ಮಿಲಿಯನ್ ಮತ್ತು ಯುಟೂಬ್ 5.91 ಲಕ್ಷ.
ಪ್ರಧಾನಿ ಮೋದಿ ಸಮಾಜದ ಬಡಜನರಿಗೆ ಸರ್ಕಾರದ ಅನುದಾನ ಮತ್ತು ಪ್ರಯೋಜನಗಳನ್ನು ತಲುಪಿಸಲು ನೇರ ವರ್ಗಾವಣೆಯ ಪ್ರಕ್ರಿಯೆ ಒಂದು ಅತ್ಯಂತ ಮಹತ್ವದ್ದಾಗಿದ್ದು, ಇದಕ್ಕಾಗಿ ತಂತ್ರಜ್ಞಾನವನ್ನು ಬಳಸುವಂತೆ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು. ಇದರಿಂದಾಗಿ ರೂ. 1.5 ಲಕ್ಷ ಕೋಟಿ ಹಣವನ್ನು ನೇರವಾಗಿ ಸುಮಾರು 32 ಕೋಟಿ ಫಲಾನುಭವಿಗಳಿಗೆ ಕಳುಹಿಸಲಾಗಿದೆ.
#Sandesh2Soldiers, #MyCleanIndia, #IncredibleIndia, #SelfieWithDaughter ಹೀಗೆ ಹಲವು ಟ್ಯಾಗ್ಗಳು ಟ್ವಿಟರ್ನಲ್ಲಿ ಮೋದಿ ಅವರು ಪರಿಚಯಿಸಿದ ಟ್ರೆಂಡ್ಗಳಾಗಿವೆ.
ಪ್ರಧಾನಿ ಮೋದಿ ದೂರು ನಿವಾರಣೆ ಮತ್ತು ಕುಂದು ಕೊರತೆಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿದ್ದಾರೆ, ಮತ್ತು ಪ್ರತಿ ತಿಂಗಳ ಪ್ರಗತಿ ಅಧಿವೇಶನದಲ್ಲಿ ಇವುಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ. ಪ್ರಗತಿ ಅವಧಿಯಲ್ಲಿ ಮೋದಿಯವರು ತಂತ್ರಜ್ಞಾನಗಳ ಮೂಲಕವೇ ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿ ಮತ್ತು ಕೇಂದ್ರ ಸರ್ಕಾರದ ಮುಖ್ಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತಾರೆ.
ಜನರು ತಮ್ಮ ಸಲಹೆ, ಸೂಚನೆ ಮತ್ತು ಇತರ ಆಲೋಚನೆಗಳನ್ನು MyGov.in ನಲ್ಲಿ ನೀಡಬಹುದು.
ಸದ್ಯ ಈ ಪೋರ್ಟಲ್ ನಾಲ್ಕು ಮಿಲಿಯನ್ ಸದಸ್ಯರನ್ನು ಹೊಂದಿದೆ ಹಾಗೂ ನಾಗರಿಕರ ತೊಡಗಿಕೊಳ್ಳುವಿಕೆಗೆ ಮಾದರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.