ಖಾದಿಯಲ್ಲಿ ಗಾಂಧಿ ಹೋಗಿ ಪ್ರಧಾನಿ ಮೋದಿ ಬಂದ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಪರ ವಿರೋಧ ಅಭಿಪ್ರಾಯಗಳು, ಸಮರ್ಥನೆಗಳು, ಟೀಕೆಗಳು ಸಾಮಾನ್ಯವಾಗಿವೆ. ಮಹಾತ್ಮನಿಗೆ ಮಹಾತ್ಮನೇ ಸಾಟಿ. ಆದರೆ, ನನ್ನ ಚಿಂತೆ ಅವನ ಅಡ್ಡ ಹೆಸರಿನ (ಗಾಂಧಿ) ಅಜೆಂಡಾ ಬಗ್ಗೆ.
ಹೌದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು, ಶಿಕ್ಷಣ ಸಂಸ್ಥೆ, ವಿಮಾನ ನಿಲ್ದಾಣಗಳು, ರಸ್ತೆಗಳು, ಆಸ್ಪತ್ರೆಗಳು, ವಿದ್ಯುತ್ ಘಟಕಗಳು, ವಸತಿ ನಿಲಯಗಳು, ಕ್ರೀಡಾ ಅಕಾಡೆಮಿ, ಕ್ರೀಡಾ ತರಬೇತಿ ಕೇಂದ್ರಗಳು, ಕ್ರೀಡಾ ಪ್ರಶಸ್ತಿಗಳು, ವಿಶ್ವ ವಿದ್ಯಾನಿಲಯ, ರಾಷ್ಟ್ರೀಯ ಉದ್ಯಾನವನ, ಭೌಗೋಳಿಕ ಅಧ್ಯಯನ ಕೇಂದ್ರ, ಪ್ರಶಸ್ತಿ, ಸಂಸ್ಥೆ, ಕಟ್ಟಡಗಳು ಹೀಗೇ ಅಂದಾಜು 450ಕ್ಕೂ ಹೆಚ್ಚು ಯೋಜನೆಗಳೆಲ್ಲ ಗಾಂಧಿ ಮತ್ತು ನೆಹರೂ ಹೆಸರಿನಲ್ಲೇ ಇರುವುದು ನನ್ನನ್ನು ಇನ್ನಿಲ್ಲದಂತೆ ಕಾಡುತ್ತಿದೆ.
98ಕ್ಕೂ ಹೆಚ್ಚು ವಿವಿ ಮತ್ತು ಶೈಕ್ಷಣಿಕ ಸಂಸ್ಥೆಗಳು, 19ಕ್ಕೂ ಹೆಚ್ಚು ಮೈದಾನಗಳು ಮತ್ತು 28 ಕ್ಕೂ ಹೆಚ್ಚು ಟೂರ್ನಾಮೆಂಟ್ಗಳು, 400 ಸಂಸ್ಥೆಗಳು ಗಾಂಧಿ ಮತ್ತು ನೆಹರು ಹೆಸರಿನಲ್ಲೇ ಇರುವುದು ಪಾಪ ತುಂಡು ಪಂಜೆಯ ಅಜ್ಜನಿಗೇನು ಗೊತ್ತು ಬಿಡಿ.
ಖಾದಿಯಲ್ಲಿ ಮೋದಿ ಬಂದಾಕ್ಷಣ ಎಚ್ಚೆತ್ತುಕೊಂಡದ್ದು ತಪ್ಪಲ್ಲ, ಆದರೆ ಇತ್ತವೂ ಸ್ವಲ್ಪ ಚಿತ್ತ ಇರಬೇಕಲ್ಲ ? ಉತ್ತರ ಪ್ರದೇಶದ ರಾಯ್ಬರೇಲಿ ಜಿಲ್ಲೆಯಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಉರನ್ ಅಕಾಡೆಮಿಯ ಎರಡು ವಸತಿ ನಿಲಯಗಳಿವೆ. ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ರಾಹುಲ್ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಪ್ರಿಯಾಂಕ ಹೆಸರಿಡಲಾಗಿದೆಯಲ್ಲ ಯಾಕೆ..?
ಅದ್ಯಾವ ಶೈಕ್ಷಣಿಕ ಕ್ರಾಂತಿಗೆ ರಾಹುಲ್ ಮತ್ತು ಪ್ರಿಯಾಂಕ ಕಾರಣರಾಗಿದ್ದಾರೆ ? ದೇಶದ ಅಭಿವೃದ್ಧಿಯಲ್ಲಿ ಇವರಿಬ್ಬರ ಕೊಡುಗೆ ಏನು ? ಹೋಗಲಿ ಅದ್ಯಾವ ಯುವಸಮೂಹಕ್ಕೆ ಇವರು ರೋಲ್ ಮಾಡಲ್ಗಳಾಗಿದ್ದಾರೆ ? ಈ ನೆಲದ ಬಗ್ಗೆ ಅವರಿಗೆಷ್ಟು ಜಿಗುಟು ಅಭಿಮಾನವಿದೆ ? ಭಾರತಮಾತೆ ಎಂಬ ಭಾವ ಅವರನ್ನು ಎಷ್ಟು ಆವರಿಸಲು ಸಾಧ್ಯ ? ದೇಶವನ್ನು ಉತ್ತುಂಗಕ್ಕೊಯ್ಯುವ ಕನಸುಗಳೆಷ್ಟಿವೆ ? ಅವರಿಗಿರುವ ಅರ್ಹತೆ ’ಗಾಂಧಿ’ ಎಂಬ ಅಡ್ಡ ಹೆಸರು ಮಾತ್ರ.
ಒಮ್ಮೆಯಾದರೂ ಅವರು, ಈ ನೆಲ, ಜಲ, ಸಂಸ್ಕೃತಿ, ಸಂಸ್ಕಾರ, ರೀತಿ, ನೀತಿಗಳ ಬಗ್ಗೆ ಮಾತಾಡಿದ ಉದಾಹರಣೆಗಳುಂಟೆ ? ಬಾಲಿಶ ಮಾತುಗಳು, ವೃಥಾ ಆರೋಪಿಸುವುದು, ಹದವೇ ಇಲ್ಲದ ನಡವಳಿಕೆ ಕಂಡಾಗೆಲ್ಲ, ಅವರಿರುವುದು ಕೇವಲ ಒಂದು ರಾಜಕೀಯ ಪಕ್ಷದ ಮುಖಂಡರಾಗಿ, ಆಡಳಿತದ ಗದ್ದುಗೆ ಏರುವ ರಾಜಕೀಯ ಪ್ರಾಬಲ್ಯಕ್ಕಾಗಿ ಎಂದು ಅನಿಸುವುದಿಲ್ಲವೇ? ಎಲ್ಲಿಂದಲೋ ಬಂದವರು ಎಂಬ ಭಾವ ಇದುವರೆಗೂ ಯಾರಿಗೂ ಕಾಡಿಲ್ಲವೇ ?
ಭಾರತದ ಸ್ವಾತಂತ್ರ್ಯಕ್ಕಾಗಿ ಆತ್ಮಾರ್ಪಣೆ ಮಾಡಿಕೊಂಡ, ಸ್ವಾತಂತ್ರ್ಯದ ಯಜ್ಞಕುಂಡಕ್ಕೆ ಆಹುತಿಯಾದ ಕ್ರಾಂತಿಕುಸುಮಗಳು ಅಸಂಖ್ಯ. ಆದರೆ, ಸ್ವಾತಂತ್ರ್ಯಾನಂತರ ಜಾರಿಗೆ ಬಂದ ಅಸಂಖ್ಯ ಯೋಜನೆಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೈಜ ಹೀರೋಗಳ ಹೆಸರು ಬೆರಳೆಣಿಕೆಯಷ್ಟೂ ಇಲ್ಲ.
ದುರದೃಷ್ಟವಶಾತ್ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಹೆಸರು ಮಾತ್ರ ಸರ್ಕಾರಿ ಕಟ್ಟಡಗಳ ಮೇಲೆ ರಾರಾಜಿಸುತ್ತಿವೆ. ಅವೇನು ಅವರ ಖಾಸಗಿ ಆಸ್ತಿಗಳಾ..? ಮುಂದೊಂದು ದಿನ ವಾದ್ರಾ ಸಾಹೇಬರ ಮಕ್ಕಳ ಹೆಸರೂ ಸರ್ಕಾರಿ ಕಟ್ಟಡಗಳ ಮೇಲೆ ಕೆತ್ತುವಂತಾದರೂ ಆಶ್ಚರ್ಯವಿಲ್ಲ ಬಿಡಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.