ಸಂಶಯವೇ ಇಲ್ಲ, ಕೇಂದ್ರದ ರಸ್ತೆ ಸುರಕ್ಷತೆ ಮತ್ತು ಸಾರಿಗೆ ಮಸೂದೆ-2015 ರ ಬಗ್ಗೆ ಎಡಪಕ್ಷಗಳು ಗೊಂದಲಕ್ಕೆ ಒಳಗಾಗಿವೆ. ನೀವು ಶುಕ್ರವಾರ ನೀಡಿದ್ದ ಬಂದ್ನ ಉದ್ದೇಶ ಸಫಲವಾಯಿತಾ ಅಂದರೆ ಹೌದು ಅಂತಾರೆ, ಹಾಗಾದರೆ ಅಪಘಾತಗಳನ್ನು ತಡೆಯಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳನ್ನು ವಿರೋಧಿಸುವ ಮೂಲಕ ನೀವು ಅಪಘಾತಗಳು ಕಡಿಮೆಯಾಗುವುದನ್ನು ವಿರೋಧಿಸುತ್ತಿದ್ದೀರಿ ಎಂದು ಅನಿಸುವುದಿಲ್ಲವೇ ಅಂದರೆ ಉತ್ತರ ಏನು ಕೊಡುವುದು ಎಂದು ಗೊತ್ತಾಗದೆ ಗೊಂದಲಕ್ಕೆ ಒಳಗಾಗುತ್ತಾರೆ.
ಭಾರತದಲ್ಲಿ ಕಳೆದ 10 ವರ್ಷಗಳಲ್ಲಿ 12 ಲಕ್ಷ ಜನರು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾದರೆ ವರ್ಷಕ್ಕೆ ಎಷ್ಟಾಯಿತು ನೀವೇ ಊಹಿಸಿ. ಹೆಚ್ಚಾಗಿ ಅಪಘಾತಗಳಲ್ಲಿ ಸಾಯುವವರು ಯುವ ಜನಾಂಗ. ಅಂದರೆ 20 ರಿಂದ 30 ವರ್ಷದ ಒಳಗಿನ ಯುವಕರು. ಒಬ್ಬ ಯುವಕ ಅಥವಾ ಯುವತಿ ಅಪಘಾತದಲ್ಲಿ ಸಾವನ್ನಪ್ಪಿದರೆ ಏನಾಗುತ್ತದೆ? ಅವನ ಅಮ್ಮ, ಅಪ್ಪನಿಗೆ ಮತ್ತು ಸಂಬಂಧಿಕರಿಗೆ ಮರೆಯಲಾಗದ ನೋವು, ಸಂಕಟಗಳನ್ನು ತರುತ್ತದೆ ಎನ್ನುವುದು ನಿಜ. ಆದರೆ ಅಷ್ಟೇ ಅಲ್ಲ. ಒಬ್ಬ ಯುವಕ ಅಥವಾ ಯುವತಿ ಸತ್ತರೆ ಕುಟುಂಬಕ್ಕಿಂತ ದೇಶಕ್ಕೆ ದೊಡ್ಡ ನಷ್ಟ ಉಂಟಾಗುತ್ತದೆ.
ಅಪಘಾತಗಳು ಹೆಚ್ಚಾಗಿರುವ ದೇಶಗಳು ಒಳಗೊಳಗೆ ಆರ್ಥಿಕವಾಗಿ, ಸ್ಥೆದ್ಧಾಂತಿಕವಾಗಿ ಮತ್ತು ಬಲಿಷ್ಟತೆಯನ್ನು ಕಳೆದುಕೊಂಡು ಕುಸಿಯುತ್ತಾ ಬರುತ್ತದೆ. ದೇಶ ಒಂದು ಮಗುವಿನ ಸಮಗ್ರ ಬೆಳವಣಿಗೆಗೆ ಎಷ್ಟು ಸಂಪನ್ಮೂಲಗಳನ್ನು ವ್ಯಯಿಸಿ ನಂತರ ಆತ ಬೆಳೆದ ಬಳಿಕ ಅದನ್ನು ದೇಶಕ್ಕೆ ಹಿಂತಿರುಗಿಸುವ ಮೂಲಕ ದೇಶದ ಸರ್ವಾಂಗೀಣ ಬೆಳವಣಿಗೆಯ ಚಕ್ರ ನಿರ್ಮಾಣವಾಗುತ್ತದೆ. ಆದರೆ ನಡುವೆ ಆ ವ್ಯಕ್ತಿಯೇ ಸತ್ತೋ ಅಥವಾ ಅಂಗವಿಕಲನಾದರೆ ದೇಶದ ಬೆಳವಣಿಗೆಯ ಮೇಲೆ ಅದು ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಅಂಗವಿಕಲಬಾದ ವ್ಯಕ್ತಿ ಅನ್ಪ್ರಾಡೇಕ್ಟಿವ್ ಆಗುತ್ತಾನೆ. ಅದು ದೇಶದ ಏಳಿಗೆಗೆ ಒಳ್ಳೆಯದಲ್ಲ. ಅದಕ್ಕಾಗಿ ಅಪಘಾತಗಳು ಕಡಿಮೆಯಾಗಲೇಬೇಕು. ಅಪಘಾತ ಹೆಚ್ಚು ನಡೆಯುವ ರಾಷ್ಟ್ರಗಳು ಅಭಿವೃದ್ಧಿಯ ದೃಷ್ಟಿಯಿಂದ ಹಿಂದಕ್ಕೆ ಬೀಳುತ್ತವೆ. ಅದಕ್ಕೆ ಪರಿಹಾರ. ವಿದೇಶಗಳಲ್ಲಿ ಇರುವಂತೆ ರಸ್ತೆ ಸುರಕ್ಷತೆ ಕಾಯ್ದೆ ಭಾರತದಲ್ಲೂ ಜಾರಿಗೆ ತರಬೇಕು. ಆದರೆ ಎಡಪಕ್ಷಗಳ ವಾದ ನಮ್ಮ ರಸ್ತೆಗಳು ಸರಿ ಇಲ್ಲ. ಅದನ್ನು ಮೊದಲು ಸರಿ ಪಡಿಸಬೇಕು ನಂತರ ಆ ಕಾಯ್ದೆ ಜಾರಿಗೆ ಬರಲಿ.
ರಸ್ತೆಗಳು ಸರಿ ಆದರೆ ಅಪಘಾತಗಳು ಕಡಿಮೆ ಆಗುತ್ತಾ? ಆ ವಾದದ ಬಗ್ಗೆ ನನಗೆ ಅಸಮಾಧಾನವಿದೆ. ಅಪಘಾತಗಳು ನಡೆಯುವುದು ರಸ್ತೆ ಸಂಚಾರದ ಬಗ್ಗೆ ನಮ್ಮ ಸವಾರರಿಗೆ ಶಿಸ್ತು ಇಲ್ಲದಿರುವುದರಿಂದ ಮಾತ್ರವೇ ವಿನಃ ಬೇರೆಯಾಗುವುದರಿಂದ ಅಲ್ಲವೇ ಅಲ್ಲ. ಅಪಘಾತಕ್ಕೆ ಮೊದಲ ಮತ್ತು ಮುಖ್ಯ ಕಾರಣವೆಂದರೆ ಚಾಲಕರ ನಿರ್ಲಕ್ಷ್ಯ. ಅದನ್ನು ಸರಿ ಮಾಡಿದರೆ ಅಪಘಾತಗಳ ಸಂಖ್ಯೆ ಅರ್ಧದಷ್ಟು ಕಡಿಮೆಯಾಗುತ್ತದೆ. ಹಾಗಾದರೆ ಚಾಲಕರ ನಿರ್ಲಕ್ಷ್ಯವನ್ನು ಹೊಡೆದೂಡಿಸುವುದು ಹೇಗೆ? ಅವರಿಗೆ ಆಡಳಿತದ ಬಗ್ಗೆ ಹೆದರಿಕೆ ಹುಟ್ಟಿಸುವುದು. ಒಂದಂತೂ ನಿಜ. ಯಾವುದೇ ಚಾಲಕ ಅಪಘಾತ ಆಗಲಿ ಎನ್ನುವ ಮನಸ್ಥಿತಿಯನ್ನು ಯಾವತ್ತೂ ಹೊಂದಿರುವುದಿಲ್ಲ. ಎಡಪಕ್ಷಗಳ ಈ ವಾದ ಸರಿ. ಆದರೆ ಅದೇ ಸಮಯಕ್ಕೆ ಚಾಲಕರಿಂದ ಅಪಘಾತವಾದರೆ ಅದರಿಂದ ಯಾರದ್ದಾದರೂ ಪ್ರಾಣ ಹೋದರೆ ತನಗೇನು ಎನ್ನುವ ಧೋರಣೆ ಇದ್ದಾಗ ಆತ ಅಪಘಾತದ ಬಗ್ಗೆ ಸೀರಿಯಸ್ಸ್ನೆಸ್ ಇರುವುದಿಲ್ಲ. ಅದಕ್ಕಾಗಿ ಈ ಮಸೂದೆಯಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಪ್ರಾಣಹಾನಿ ಸಂಭವಿಸಿದರೆ ಒಂದು ಲಕ್ಷ ರೂಪಾಯಿ ದಂಡ ಇದೆ ಎನ್ನುವ ಹೆದರಿಕೆ ಇದ್ದಲ್ಲಿ ಆತ ಹೆದರಿಕೆಯಿಂದ ವಾಹನ ಚಲಾವಣೆ ಮಾಡುವ ಆದಷ್ಟು ಎಚ್ಚರಿಕೆ ವಹಿಸುತ್ತಾನೆ. ಇನ್ನೂ ಸಣ್ಣಪುಟ್ಟ ಅಪರಾಧಗಳಿಗೆ ಈ ಮಸೂದೆಯಲ್ಲಿ ಹೆಚ್ಚು ದಂಡ ವಿಧಿಸಿರುವುದರ ಬಗ್ಗೆ ಕೂಡ ಎಡಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಇಲ್ಲಿ ದಂಡ ಹೆಚ್ಚಿದ್ದಷ್ಟು ಚಾಲಕ ವಾಹನ ಚಲಾವಣೆಯಲ್ಲಿ ಎಚ್ಚರಿಕೆ ವಹಿಸಬಹುದು, ಆದರೆ ಈ ಹೆಚ್ಚಿನ ದಂಡ ಭವಿಷ್ಯದಲ್ಲಿ ಹೆಚ್ಚಿನ ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ ಎನ್ನುವ ಆತಂಕ ಕೂಡ ಇದೆ.
ಅದು ಹ್ಯಾಗೆ? ವಾಹನ ಸವಾರ ಯಾವುದಾದರೂ ಒಂದು ತಪ್ಪು ಮಾಡಿದ ಎಂದು ಇಟ್ಟುಕೊಳ್ಳಿ. ಅದಕ್ಕೆ ಮಸೂದೆಯಲ್ಲಿ ದಂಡ ದೊಡ್ಡದಿದೆ ಎಂದು ಅಂದುಕೊಳ್ಳಿ. ಆಗ ಏನಾಗುತ್ತೇ, ಚಾಲಕ ಆ ಒಟ್ಟು ದಂಡದ ಅರ್ಧದಷ್ಟು ಹಣವನ್ನು ಅಧಿಕಾರಿಗೆ ಕೊಟ್ಟು ತನ್ನ ತಪ್ಪಿನಿಂದ ಪಾರಾಗುವ ಮನಸ್ಸು ಮಾಡುತ್ತಾನೆ. ಸರ್, ಸುಮ್ಮನೆ ಒಂದೂವರೆ ಸಾವಿರ ದಂಡ ಯಾಕೆ, ಮೂನ್ನೂರು ಇಟ್ಟುಕೊಳ್ಳಿ. ರಸೀದಿ ಬೇಡಾ ಎಂದು ಹೇಳಿದರೆ ಆ ಅಧಿಕಾರಿ ಸುಮ್ಮನೆ ಸಿಕ್ಕಿದಷ್ಟು ಹಣವನ್ನು ಜೇಬಿಗೆ ಹಾಕಿದರೆ ಆಗ ನಷ್ಟ ಯಾರಿಗೆ? ಸರ್ಕಾರಕ್ಕೆ. ಆ ನ್ಯಾಯಯುತವಾಗಿ ಸಿಗಬೇಕಾಗಿದ್ದ ದಂಡವೂ ಸಿಗಲಾರದು. ಈ ಮಸೂದೆಯಿಂದ ಆರ್ಟಿಓದ ಪ್ರಾಮುಖ್ಯತೆ ಕಡಿಮೆಯಾಗುತ್ತದೆ ಎಂದು ಹೆಳಲಾಗುತ್ತದೆ. ಇದನ್ನು ಎಡಪಕ್ಷಗಳು ವಿರೋಧಿಸುತ್ತಿರುವುದು. ಆರ್ಟಿಓದ ಭ್ರಷ್ಟಾಚಾರದ ವಿರುದ್ಧ ಇಲ್ಲಿಯ ತನಕ ವ್ಯಾಪಕವಾಗಿ ಪ್ರತಿಭಟನೆಗಳನ್ನು ಮಾಡಿದವರೇ ಈಗ ಆರ್ಟಿಒದ ಅಸ್ತಿತ್ವ ಕಡಿಮೆಯಾಗುತ್ತೇ ಎಂದಾಗ ಬೊಬ್ಬೆ ಹೊಡೆಯುತ್ತಿವೆ. ದಂಡದ ಮೊತ್ತ, ಶಿಕ್ಷೆಯ ಅನುಪಾತ ಕಡಿಮೆ ಮಾಡಿ ಎಂದು ಹೇಳುವ ಬಿಜೆಪಿಯೇತರ ಪಕ್ಷಗಳು ಹಾಗಾದರೆ ದೇಶದ ಅಭಿವೃದ್ಧಿಯ ಬಗ್ಗೆ ಎನು ಯೋಚಿಸಿವೆ.
ಅಪಘಾತಗಳು ಕಡಿಮೆಯಾಗದೇ ದೇಶದ ಅಭಿವೃದ್ಧಿಯಾಗದು, ರಸ್ತೆಗಳು ಸರಿಯಾಗದೇ ಮಸೂದೆ ಕಾಯ್ದೆಯಾಗಬಾರದು ಮತ್ತು ಚಾಲಕರಿಗೆ ಹೆದರಿಕೆ ಬರಬೇಕಾದರೆ ದಂಡದ ಮೊತ್ತ ಜಾಸ್ತಿಯಾಗಲೇಬೇಕು. ಇದು ಒಂದು ರೀತಿಯಲ್ಲಿ ಹುಚ್ಚು ಬಿಡದೆ ಮದುವೆಯಾಗುವುದಿಲ್ಲ..ಮದುವೆಯಾಗದೇ ಹುಚ್ಚು ಬಿಡುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.