
ನವದೆಹಲಿ: ಅರುಣಾಚಲ ಪ್ರದೇಶದ ಭಾರತೀಯ ಮಹಿಳೆಯೊಬ್ಬರಿಗೆ ಚೀನಾದ ಶಾಂಘೈನ ಪುಡಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಿರುಕುಳ ನೀಡಿ, 18 ಗಂಟೆಗಳಿಗೂ ಹೆಚ್ಚು ಕಾಲ ಬಂಧಿಸಿಡಲಾಗಿತ್ತು. ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಚೀನಾ ವಿರುದ್ಧ ಪ್ರಬಲ ಹೇಳಿಕೆ ನೀಡಿದೆ.
ಈಗಾಗಲೇ ರಾಜತಾಂತ್ರಿಕ ಕಳವಳಗಳನ್ನು ಹುಟ್ಟುಹಾಕಿರುವ ಈ ಘಟನೆಯು, ಚೀನಾದ ವಿದೇಶಾಂಗ ಸಚಿವಾಲಯದ ವಿವಾದಾತ್ಮಕ ಹೇಳಿಕೆಯಿಂದ ಮತ್ತಷ್ಟು ಉಲ್ಬಣವಾಗಿದೆ, ಅಲ್ಲದೇ ಅರುಣಾಚಲ ಪ್ರದೇಶದ ಮೇಲಿನ ಭಾರತದ ಸಾರ್ವಭೌಮತ್ವವನ್ನು ಮತ್ತೊಮ್ಮೆ ಪ್ರಶ್ನಿಸಿದೆ.
ಭಾರತ ವಿದೇಶಾಂಗ ಸಚಿವಾಲಯ (MEA) ಚೀನಾದ ಹೇಳಿಕೆಗಳನ್ನು ತೀವ್ರವಾಗಿ ತಿರಸ್ಕರಿಸಿದೆ. ಭಾರತೀಯ ಪ್ರಜೆಯನ್ನು ನಡೆಸಿಕೊಂಡ ರೀತಿಯನ್ನು ಖಂಡಿಸಿದೆ, ಈ ಘಟನೆಯನ್ನು ಅಂತರರಾಷ್ಟ್ರೀಯ ಮಾನದಂಡಗಳ ಮತ್ತು ಚೀನಾದ ಸ್ವಂತ ವಲಸೆ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಕರೆದಿದೆ.
“ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಮತ್ತು ಅಳಿಸಲಾಗದ ಭಾಗ” ಎಂದು ಭಾರತ ಪುನರುಚ್ಛರಿಸಿದೆ.
ಮಾಧ್ಯಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾ, ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅರುಣಾಚಲ ಪ್ರದೇಶದ ಬಗ್ಗೆ ಭಾರತದ ನಿಸ್ಸಂದಿಗ್ಧ ನಿಲುವನ್ನು ಪುನರುಚ್ಚರಿಸಿದರು.
“ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಮತ್ತು ಅಳಿಸಲಾಗದ ಭಾಗವಾಗಿದೆ ಮತ್ತು ಇದು ಸ್ಪಷ್ಟ ಸತ್ಯ. ಚೀನಾದ ಕಡೆಯಿಂದ ಯಾವುದೇ ನಿರಾಕರಣೆ ಈ ನಿರ್ವಿವಾದದ ವಾಸ್ತವವನ್ನು ಬದಲಾಯಿಸುವುದಿಲ್ಲ” ಎಂದು ಅವರು ಹೇಳಿದರು.
ಮಾನ್ಯ ಭಾರತೀಯ ಪಾಸ್ಪೋರ್ಟ್ನಡಿ ಕಾನೂನುಬದ್ಧವಾಗಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ವಿಷಯದಲ್ಲಿ ತಾನು ನಡೆದುಕೊಂಡ ರೀತಿಯನ್ನು ಸಮರ್ಥಿಸಲು ಚೀನಾದ ಅಧಿಕಾರಿಗಳು ವಿಫಲರಾಗಿದ್ದಾರೆ, ಈ ಬಗ್ಗೆ ಭಾರತ ಬಲವಾದ ಪ್ರತಿಭಟನೆಯನ್ನು ಸಲ್ಲಿಸಿದೆ ಎಂದು ವಕ್ತಾರರು ದೃಢಪಡಿಸಿದ್ದಾರೆ.
Our response to media queries on statements made by the Chinese Foreign Ministry⬇️
🔗 https://t.co/3JUnXjIBLc pic.twitter.com/DjEdy7TmTK— Randhir Jaiswal (@MEAIndia) November 25, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



