
ದೇಶದ ಆರ್ಥಿಕ ರಾಜಧಾನಿ ಎಂದು ಕರೆಯಲ್ಪಡುವ ಮುಂಬಯಿಯಲ್ಲಿ 26 ನವೆಂಬರ್ 2008ರಂದು ನಡೆದ ಭಯೋತ್ಪಾದಕ ದಾಳಿಗೆ 17 ವರ್ಷಗಳು ಕಳೆದಿವೆ. ಅಮಾಯಕ ಜನರನ್ನು ಕಳೆದುಕೊಂಡ (26/11)ಕರಾಳ ದಿನವನ್ನು ದೇಶದ ಜನತೆ ನೆನೆಯುತ್ತಿದೆ. ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ದೇಶ ಹಾಗೂ ಜನರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಯೋಧರ ತ್ಯಾಗಕ್ಕೆ ಪ್ರತಿಯೊಬ್ಬ ಭಾರತೀಯನೂ ನಮನ ಸಲ್ಲಿಸುತ್ತಿದ್ದಾರೆ.
174 ಮಂದಿ ಬಲಿ; 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು…
ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಸಂಘಟನೆಯ 10 ಮಂದಿ ಉಗ್ರರು ನ.21 ಪಾಕಿಸ್ತಾನದಿಂದ ಬೋಟ್ ಮೂಲಕ ಮುಂಬಯಿ ಪ್ರವೇಶಿಸಿದ್ದರು. ಬಳಿಕ ಗುರುತು ಮರೆಸಿಕೊಂಡು ಮೂರು ದಿನಗಳ ಕಾಲ ಹೋಟೆಲ್, ರೈಲ್ವೇ ನಿಲ್ದಾಣ, ಆಸ್ಪತ್ರೆ, ಯಹೂದಿ ಸಮುದಾಯ ಕೇಂದ್ರ ಸೇರಿದಂತೆ 10ಕ್ಕೂಹೆಚ್ಚು ಕಡೆಗಳಲ್ಲಿ ಬಾಂಬ್ ಮತ್ತು ಗುಂಡಿನ ದಾಳಿ ನಡೆಸಿದ್ದರು. ಅದರಲ್ಲೂ ಪ್ರತಿಷ್ಟಿತ ತಾಜ್ ಹೋಟೆಲ್ ಉಗ್ರರ ಬಾಂಬ್ ದಾಳಿಗೆ ಹೊತ್ತಿ ಉರಿಯಿತು. ಭಯಾನಕ ದಾಳಿಯಲ್ಲಿ 174 ಜನರು ಮರಣ ಹೊಂದಿದ್ದರೆ, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ದಾಳಿಯಲ್ಲಿ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಮೇಜರ್ ಸಂದೀಪ್ ಉನ್ನೀಕೃಷ್ಣನ್, ಎಸಿಪಿ ಅಶೋಕ್ ದಾಮ್ಲೆ, ಇನ್ಸ್ಪೆಕ್ಟರ್ ವಿಜಯ್ ಸಲಸ್ಕರ್, ಎಎಸ್ಐ ತುಕಾರಾಂ ಓಂಬ್ಳೆ ಸೇರಿ 18 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.ಪಾಕಿಸ್ತಾನದ ಕರಾಚಿಯಿಂದ ಸಮುದ್ರ ಮಾರ್ಗದ ಮೂಲಕ ನಗರ ಪ್ರವೇಶಿಸಿದ್ದ 10 ಮಂದಿ ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಉಗ್ರರು ಪ್ರತಿಷ್ಠಿತ ತಾಜ್ ಹೋಟೆಲ್, ಶಿವಾಜಿ ಟರ್ಮಿನಲ್ ಸೇರಿ 12 ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಏಕಾಏಕಿ ನಡೆಸಿದ ಗುಂಡಿನ ದಾಳಿಯಲ್ಲಿ ವಿದೇಶಿಗರೂ ಸೇರಿ 174 ಮಂದಿ ಅಸುನೀಗಿದ್ದರು. ಘಟನೆ ನಡೆದು ಇಂದಿಗೆ 16 ವರ್ಷಗಳೇ ಕಳೆದಿದ್ದರೂ, ಉಗ್ರರ ಕ್ರೌರ್ಯದ ಗುರುತು ದೇಶದ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ.
ದಾಳಿ ನಡೆದ ಪ್ರಮುಖ ಸ್ಥಳಗಳು
- ತಾಜ್ ಹೋಟೆಲ್
- ಒಬೆರಾಯ್ ಟ್ರೈಡೆಂಟ್ ಹೋಟೆಲ್
- ಲಿಯೋಫೋಲ್ಡ್ ಕೆಫೆ
- ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್
- ಕಾಮಾ ಹಾಸ್ಪಿಟಲ್
- ನಾರಿಮನ್ ಹೌಸ್
2012ರಲ್ಲಿ ಗಲ್ಲಿಗೇರಿದ ಅಜ್ಮಲ್ ಕಸಬ್
ಮುಂಬಯಿ ದಾಳಿ ನಡೆಸಿದ 10 ಭಯೋತ್ಪಾದಕರ ಪೈಕಿ 9 ಉಗ್ರರನ್ನು ಭದ್ರತಾ ಪಡೆಯ ಸೈನಿಕರು ಹೊಡೆದುರುಳಿಸಿದ್ದರು. ಗುಂಡಿನ ದಾಳಿ ನಡೆಸಿ 58 ಜನರನ್ನು ಹತ್ಯೆಗೈದ ಅಜ್ಮಲ್ ಕಸಬ್ನನ್ನು ಸೆರೆ ಹಿಡಿಯಲಾಗಿತ್ತು. ಕಸಬ್ನನ್ನು 2012 ನವೆಂಬರ್ 21ರಂದು ಪುಣೆಯ ಯೆರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಜಗತ್ತಿನೆಲ್ಲೆಡೆ ಸಂಚಲನ ಸೃಷ್ಟಿಸಿದ್ದ ದಾಳಿ ನಡೆದು ಇಂದಿಗೆ 16 ವರ್ಷಗಳು ಕಳೆದಿದ್ದರೂ, ಮಾಸದ ಸಾಕಷ್ಟು ನೆನಪುಗಳು ಹಾಗೇ ಉಳಿದುಕೊಂಡಿವೆ. ಭಯೋತ್ಪಾದಕ ದಾಳಿಯಲ್ಲಿ ಪೊಲೀಸರು, ಭದ್ರತಾ ಪಡೆ ಯೋಧರು ಹುತಾತ್ಮರಾಗಿದ್ದಾರೆ.
ಮುಂಬೈ ದಾಳಿಗೆ ಬಲಿಯಾದ ಪೋಲೀಸ್ ಅಧಿಕಾರಿಗಳು:
ಹೇಮಂತ್ ಕರ್ಕರೆ
(1952-26 ನವೆಂಬರ್) ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಬುಧವಾರ ರಾತ್ರಿ ತಾಜ್ ಹೋಟೆಲ್ ಬಳಿ ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಅವರ ಎದೆಗೆ ಮೂರು ಗುಂಡುಗಳು ಹೊಕ್ಕಿದ್ದರಿಂದ ಸ್ಥಳದಲ್ಲಿಯೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಹೇಮಂತ್ ಕರ್ಕರೆ ನಾಗಪುರದ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿ 1982ರಲ್ಲಿ ಭಾರತೀಯ ಪೊಲೀಸ್ ಸೇವೆಗೆ ಸೇರ್ಪಡೆಯಾಗಿದ್ದರು.
ವಿಜಯ್ ಸಲಸ್ಕರ್
ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಹೆಸರಾದ ವಿಜಯ್ ಸಲಸ್ಕರ್ ಸಹ ಕಾಮ್ಟೆಯೊಂದಿಗೆ ಉಗ್ರರ ದಾಳಿಗೆ ಬಲಿಯಾದರು. ಮುಂಬೈ ಭೂಗತ ಜಗತ್ತಿನ ಮಂದಿಗೆ ಸಿಂಹಸ್ವಪ್ನರಾಗಿದ್ದ ವಿಜಯ್ ಅನೇಕ ಭೂಗತ ವ್ಯಕ್ತಿಗಳನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಿದ್ದಾರೆ. ಭೂಗತ ಪಾತಾಕಿಗಳಾದ ಅಮರ್ ನಾಯಕ್, ಜಗ್ಗು ಶೆಟ್ಟಿ, ಸಾಧು ಶೆಟ್ಟಿ, ಕುಂದನ್ ಸಿಂಗ್ ರಾವತ್, ಜಹೂರ್ ಮಕಾಂದ್ ಸೇರಿದಂತೆ ಅನೇಕರು ಇವರ ಬಂದೂಕಿನ ಕಾಡತೂಸಿಗೆ ಸಿಕ್ಕು ಪ್ರಾಣ ಕಳೆದುಕೊಂಡಿದ್ದಾರೆ. 1983 ರಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆಗೆ ಸೇರಿದ ವಿಜಯ್, ಕಳೆದ 24 ವರ್ಷಗಳ ಕಾಲ ನಿಶ್ವಾರ್ಥ ಸೇವೆ ಸಲ್ಲಿಸಿದ್ದಾರೆ.
ಅಶೋಕ್ ಕಾಮ್ಟೆ
ಮತ್ತೊಬ್ಬ ಐಪಿಎಸ್ ಅಧಿಕಾರಿ ಅಶೋಕ್ ಮಾರುತಿರಾವು ಕಾಮ್ಟೆ 1989ರ ಐಪಿಎಸ್ ಬ್ಯಾಚ್ ಗೆ ಸೇರಿದವರು. ಮೆಟ್ರೊ ಚಿತ್ರಮಂದಿರದ ಬಳಿ ಉಗ್ರರೊಂದಿಗಿನ ದಾಳಿಯಲ್ಲಿ ಅವರು ಮೃತಪಟ್ಟರು.
ತುಕಾರಾಂ ಓಂಬಳೆ
ಮುಂಬೈ ಮೇಲೆ ದಾಳಿ ಸಂಭವಿಸಿ ಇಂದಿಗೆ 9 ವರ್ಷವಾಗಿದೆ. ಆದರೂ ಇನ್ನೂ ಆ ಕರಾಳ ಘಟನೆಯ ನೆನಪುಗಳು ಮಾಸಿಲ್ಲ. ತಮ್ಮ ಆಪ್ತರನ್ನು ಕಳೆದುಕೊಂಡವರ ದುಃಖವನ್ನು ಯಾರೂ ಭರಿಸಲು ಸಾಧ್ಯವಿಲ್ಲ. ಇದರ ನಡುವೆಯೇ ದೇಶಕ್ಕಾಗಿ ಹುತಾತ್ಮರಾದವರ ಪಟ್ಟಿ ಕೂಡ ದೊಡ್ಡದಿದೆ. ಇದರಲ್ಲಿ ಪ್ರಮುಖರಾದವರು ತುಕಾರಾಂ ಓಂಬಳೆ.
ಪಾಕ್ನಿಂದ ಬಂದು ದಾಳಿ ನಡೆಸಿದ ಹತ್ತು ಉಗ್ರರ ಪೈಕಿ ಒಬ್ಬ ಉಗ್ರ ಅಜ್ಮಲ್ ಕಸಬ್ ಜೀವಂತ ಸೆರೆಯಾಗಿದ್ದು ತುಕಾರಾಂ ಓಂಬಳೆ ಅವರಿಂದಲೇ. ಈ ಉಗ್ರ ಬಂದೂಕಿನಿಂದ ಗುಂಡಿನ ಸುರಿಮಳೆಗರೆಯುತ್ತಿದ್ದರೂ ಕೆಚ್ಚದೆ, ಧೈರ್ಯ, ಸಾಹಸ ಪ್ರದರ್ಶಿಸಿ, ಪ್ರಾಣ ಹೋಗುತ್ತಿದ್ದರೂ ಲೆಕ್ಕಿಸದೇ ಉಗ್ರನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ತುಕಾರಾಂ ಓಂಬಳೆ ಇಂದಿಗೂ ಸ್ಮರಣೀಯರು.
ತುಕಾರಾಂ ಓಂಬಳೆ ಅವರ 26/11 ಘಟನೆಯಲ್ಲಿ ಪಾತ್ರದ ವಿವರ ಹೀಗಿದೆ….
ಪೊಲೀಸ್ ಅಧಿಕಾರಿಗಳೂ ಸೇರಿದಂತೆ 166 ಮಂದಿಯ ಸಾವಿಗೆ ಕಾರಣನಾದ 10 ಮಂದಿ ಉಗ್ರರಲ್ಲಿ ಬದುಕುಳಿದ ಪಾಕಿಸ್ತಾನಿ ಉಗ್ರಗಾಮಿ ಅಜ್ಮಲ್ ಕಸಬ್ಗೆ ಗಲ್ಲು ಶಿಕ್ಷೆಯಾಗಿದೆ. ಆದರೆ ಕಸಬ್ ಸೆರೆ ಸಿಕ್ಕಿ ಪಾಕಿಸ್ತಾನದ ವಿದ್ರೋಹಿ ತಂತ್ರಗಳು ಬಯಲಿಗೆ ಬರುವಲ್ಲಿ ಸಹಕರಿಸಿದ ಒಂದು ಆತ್ಮವು ಚಿರ ಶಾಂತಿ ಪಡೆದಿದೆ. ಅದು ಬೇರೆ ಯಾರದೂ ಅಲ್ಲ, ಮುಂಬಯಿ ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ ತುಕಾರಾಂ ಓಂಬಳೆ ಅವರದು.
ಹೌದು, 26-11-2008ರ ಆ ನತದೃಷ್ಟ ರಾತ್ರಿಯಲ್ಲಿ ಪಾಕಿಸ್ತಾನದಿಂದ ನುಸುಳಿದ್ದ ಉಗ್ರಗಾಮಿಗಳಲ್ಲಿ ಕಸಬ್ ತನ್ನ ಮತ್ತೊಬ್ಬ ಸಹಚರ ಇಸ್ಮಾಯಿಲ್ ಜೊತೆ ಸೇರಿಕೊಂಡು ಛತ್ರಪತಿ ಶಿವಾಜಿ ಟರ್ಮಿನಸ್ನಲ್ಲಿ ಮಾರಣಹೋಮ ನಡೆಸಿದ್ದರು. ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ 52 ಮಂದಿ ಮುಗ್ಧ ಜನರನ್ನು ಗುಂಡಿನ ಸುರಿಮಳೆಗೈದು ಕೊಂದು ಹಾಕಿ, ಪೊಲೀಸ್ ವಾಹನವನ್ನೇ ಹೈಜಾಕ್ ಮಾಡಿ ಪರಾರಿಯಾಗುತ್ತಿದ್ದರು. ಈ ವಾಹನಕ್ಕೆ ಅಡ್ಡಲಾಗಿ ಬಂದ ಓಂಬಳೆ, ಸಾಹಸಮಯವಾಗಿ ತನ್ನ ಕೈಯಲ್ಲಿದ್ದ ರೈಫಲ್ ಅಡ್ಡ ಹಿಡಿದು, ಆ ಕಾರನ್ನು ತಡೆದಿದ್ದರು. ಕಸಬ್ ಮತ್ತು ಸಹಚರ ತನ್ನ ಮೇಲೆ ಗುಂಡಿನ ಮಳೆಗೈಯುತ್ತಿದ್ದರೂ ಲೆಕ್ಕಿಸದೆ ಕಸಬ್ ದಾಳಿಗೆ ಎದೆಯೊಡ್ಡಿದ ಅವರು, ತನ್ನ ಸಹೋದ್ಯೋಗಿಗಳು ಕಸಬ್ನನ್ನು ಸೆರೆಹಿಡಿಯುವಂತೆ ನೋಡಿಕೊಂಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದ ಅವರು ಕೊನೆಯುಸಿರೆಳೆದಿದ್ದರು.
ಗಿರ್ಗಾಂವ್ ಚೌಪಾಟಿಯಲ್ಲಿ ಕಸಬ್ ಮತ್ತು ಇಸ್ಮಾಯಿಲ್ ಪರಾರಿಯಾಗುತ್ತಿದ್ದ ಪೊಲೀಸ್ ವಾಹನದ ಟೈರ್ ಪಂಕ್ಚರ್ ಆಗಿದ್ದುದರಿಂದ ಇದು ಸಾಧ್ಯವಾಗಿತ್ತು. ಬಳಿಕ ಓಂಬಳೆಗೆ ಮರಣೋತ್ತರವಾಗಿ ಅಶೋಕ ಚಕ್ರ ಶೌರ್ಯ ಪ್ರಶಸ್ತಿಯನ್ನು ಪ್ರದಾನಿಸಲಾಗಿತ್ತು. ಈ ಚಕಮಕಿಯ ವೇಳೆ ಮತ್ತೊಬ್ಬ ಉಗ್ರಗಾಮಿ ಇಸ್ಮಾಯಿಲ್ ಸಾವನ್ನಪ್ಪಿದ್ದ.
ಮೇಜರ್ ಸಂದೀಪ್ ಉನ್ನೀಕೃಷ್ಣನ್ ಬಲಿದಾನ
ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಎನ್ಎಸ್ಜಿ ಕಮಾಂಡೋ ಆಗಿದ್ದ ಮೇಜರ್ ಸಂದೀಪ್ ಉನ್ನೀಕೃಷ್ಣನ್ ಮತ್ತು ಅವರ ತಂಡ ಉಗ್ರರೊಂದಿಗಿನ ಸೆಣೆಸಾಟದಲ್ಲಿ ಮುಂಚೂಣಿಯಲ್ಲಿತ್ತು. ಉಗ್ರರಿದ್ದ ತಾಜ್ ಹೋಟೆಲ್ನ ಒಂದೊಂದೇ ಮಹಡಿಯನ್ನು ಎನ್ಎಸ್ಜಿ ಯೋಧರು ಸುತ್ತುವರಿಯುತ್ತಾ, ಜನರನ್ನು ರಕ್ಷಿಸುತ್ತಿದ್ದರು. ನ.29ರ ವರೆಗೂ ಹೋಟೆಲ್ನಲ್ಲಿ ಯೋಧರು ಹಾಗೂ ಉಗ್ರರ ನಡುವೆ ಕಾದಾಟ ಮುಂದುವರಿದಿತ್ತು. ನ.28ರಂದು ಮೇಜರ್ ಸಂದೀಪ್ ಉನ್ನೀಕೃಷ್ಣನ್ ಉಗ್ರರ ಗುಂಡೇಟಿಗೆ ವೀರ ಮರಣ ಹೊಂದಿದರು. ವೀರ ಯೋಧ ಸಂದೀಪ್ ಉನ್ನೀಕೃಷ್ಣನ್ ಮರಣ ಹೊಂದಿ ಒಂದು ದಶಕವೇ ಕಳೆದಿದ್ದರೂ, ಇಂದಿಗೂ ದೇಶದ ಜನರು ಅವರ ತ್ಯಾಗವನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಸಂದೀಪ್ ಅವರ ಶೌರ್ಯವನ್ನು ಗುರುತಿಸಿ ಮರಣೋತ್ತರವಾಗಿ ಅಶೋಕ ಚಕ್ರವನ್ನು ನೀಡಿ ಗೌರವಿಸಲಾಯಿತು.
ಗುಪ್ತಚರ ಮಾಹಿತಿ ಬಳಸಲು ವಿಫಲ, ಮುಂಬೈ ದಾಳಿಗೆ ಕಾರಣ
೨೬/೧೧ ಮುಂಬೈ ಭಯೋತ್ಪಾದನಾ ದಾಳಿ “ಕೂದಲೆಳೆಯ ಭದ್ರತಾ ಗುಪ್ತಚರ ಕಾರ್ಯಾಚರಣೆಯ ವೈಫಲ್ಯದಿಂದ ನಡೆದ ವಿಧ್ವಂಸಕ ಕೃತ್ಯ” ಎನ್ನುತ್ತದೆ ಹೊಸ ತನಿಖಾ ವರದಿ. ಯು ಎಸ್, ಬ್ರಿಟಿಷ್ ಮತ್ತು ಭಾರತೀಯ ಗುಪ್ತಚರ ಇಲಾಖೆಗಳು ಸಂಗ್ರಹಿಸಿದ ಮಾಹಿತಿಗಳನ್ನು ಒಟ್ಟಿಗೆ ಕಲೆ ಹಾಕುವುದರ ವೈಫಲ್ಯದಿಂದ ಈ ದಾಳಿ ಸಾಧ್ಯವಾಗಿದೆ ಎನ್ನುತ್ತದೆ ವರದಿ.
ಅಮೇರಿಕಾದ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ತನಿಖಾ ವರದಿ ಹೇಳುವಂತೆ ಇದು “ಗುಪ್ತಚರ ಮಾಹಿತಿಯ ರಾಶಿ ಆದರೆ ಬಿಡಿಸಲಾರದ ಒಗಟು” ಎಂದಿರುವ ಪತ್ರಿಕೆ ಮುಂಬೈ ಭಯೋತ್ಪಾದನಾ ದಾಳಿ ಭದ್ರತಾ ಪಡೆಗಳ ದೌರ್ಬಲ್ಯವನ್ನೂ ತೋರಿಸುತ್ತದೆ ಹಾಗೆಯೇ ಹೈ ಟೆಕ್ ಕಂಪ್ಯೂಟರ್ ಗಳು ಸಂಗ್ರಹಿಸಬಹುದಾದ ಮಾಹಿತಿ ಹೇಗೆ ಭಯೋತ್ಪಾದನ ನಿಗ್ರಹಕ್ಕೆ ಆಯುಧವಾಗಿ ಬಳಸಬಹುದು ಎಂಬುದನ್ನೂ ತೋರಿಸುತ್ತದೆ ಎನ್ನುತ್ತದೆ.
ಎದ್ದು ಕಾಣುವ ಭದ್ರತಾ ವೈಫಲ್ಯವೊಂದನ್ನು ಎತ್ತಿ ಹಿಡಿದಿರುವ ಈ ತನಿಖೆ, ೨೬/೧೧ ದಾಳಿಯ ಪ್ರಮುಖ ಆಯೋಜಕ ಲಷ್ಕರ್ ಎ ತೈಬಾ ದ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಜರ್ರಾರ್ ಷಾ ನ ಅಂತರ್ಜಾಲ ಚಟುವಟಿಕೆಗಳನ್ನು ಭಾರತೀಯ ಹಾಗು ಬ್ರಿಟಿಷ್ ಗುಪ್ತಚರ ದಳಗಳು ಗಮನಿಸಿದ್ದವು ಆದರೆ ಚುಕ್ಕಿಗಳನ್ನು ಜೋಡಿಸಲು ವಿಫಲವಾದವು ಎಂದಿದೆ.
26/11 ಮುಂಬೈ ದಾಳಿ: ಮೋಸ್ಟ್ವಾಂಟೆಡ್ “ಉಗ್ರ ರಾಣಾ” ಹದಿನೇಳು ವರ್ಷಗಳ ಬಳಿಕ ಭಾರತಕ್ಕೆ!
26/11 ಮುಂಬೈ ದಾಳಿಯ ಉಗ್ರರಿಗೆ ಶಿಕ್ಷೆ ನೀಡುವ ವಿಚಾರದಲ್ಲಿ ಭಾರತಕ್ಕೆ ಬಹುದೊಡ್ಡ ಯಶಸ್ಸು ಸಿಕ್ಕಿದೆ. ಮುಂಬೈ ಮೇಲೆ ನಡೆಸಲಾಗಿದ್ದ ಭಯೋತ್ಪಾದನಾ ದಾಳಿಯ ಮಾಸ್ಟರ್ಮೈಂಡ್ ಹಾಗೂ ಪ್ರಮುಖ ಆರೋಪಿ ತಹವ್ವುರ್ ಹುಸೇನ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಮುಂದಾಗಿದೆ. ಇದು ಭಾರತಕ್ಕೆ ಸಿಕ್ಕಿರುವ ಅತಿ ದೊಡ್ಡ ರಾಜತಾಂತ್ರಿಕ ಗೆಲುವು ಎಂದು ಹೇಳಲಾಗುತ್ತಿದೆ. ರಾಣಾ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿಯಾಗಿದ್ದಾನೆ. ವಿಶ್ವವೇ ಬೆಚ್ಚಿ ಬೀಳುವಂತಹ ಮುಂಬೈ ದಾಳಿಯಲ್ಲಿ ರಾಣಾ ಮಾಸ್ಟರ್ ಮೈಂಡ್ ಆಗಿದ್ದ. ಇದೀಗ ಆತನನ್ನು ಭಾರತಕ್ಕೆ ಹಸ್ತಾಂತರಿಸಲು ರಹಸ್ಯ ಕಾರ್ಯಾಚರಣೆಯನ್ನು ಶುರು ಮಾಡಿಕೊಳ್ಳಲಾಗಿದೆ. ಈ ಬೆಳವಣಿಗೆ ಪಾಕಿಸ್ತಾನಕ್ಕೆ ನಡುಕವನ್ನುಂಟು ಮಾಡಿದೆ.
ಮುಂಬೈದಾಳಿ ನಡೆಯುವಾಗ ಉಗ್ರರಿಗೆ ರಾಣಾ ಸಂಚಾರ ಸೇವೆ ಕೊಟ್ಟಿದ್ದ. ಅಲ್ಲದೇ ಪಾಕಿಸ್ತಾನದ ಸೇನೆಯೊಂದಿಗೆ ಆತ ನಿರಂತರ ಸಂಪರ್ಕದಲ್ಲಿ ಇದ್ದ. ಭಾರತದಲ್ಲಿ ನಡೆದ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎನ್ನುವುದನ್ನು ಭಾರತವು ಘಟನೆ ನಡೆದಾಗಿನಿಂದಲೂ ಆರೋಪಿಸುತ್ತಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಪುರಾವೆಗಳು ಸಿಗದೆ ಇರುವುದು ಈ ಪ್ರಕರಣದಲ್ಲಿ ಹಿನ್ನಡೆಯಾಗಿತ್ತು. ಇದೀಗ ಪ್ರಮುಖ ಆರೋಪಿಯನ್ನು ಭಾರತಕ್ಕೆ ಅಮೆರಿಕ ಹಸ್ತಾಂತರಿಸುವುದಕ್ಕೆ ಮುಂದಾಗಿರುವುದು ಭಾರೀ ದೊಡ್ಡ ಯಶಸ್ಸು ಸಿಕ್ಕಂತೆ ಆಗಿದೆ.
26/11 ದಾಳಿ ‘ಹಿಂದೂ ಭಯೋತ್ಪಾದನೆ’, ಉಗ್ರ ಕಸಬ್ ಬೆಂಗಳೂರಿನ ಹಿಂದೂ ವಿದ್ಯಾರ್ಥಿ ಎಂದು ಸಾರಲು ಹೊರಟಿದ್ದ ಪಾಕ್!
6/11 ಮುಂಬೈ ಭಯೋತ್ಪಾದಕ ದಾಳಿಯನ್ನು “ಹಿಂದೂ ಭಯೋತ್ಪಾದನೆ” ಎಂದೂ ಪಾಕಿಸ್ತಾನ ಮೂಲದ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಕಸಬ್ ಬೆಂಗಳೂರಿನ ಸಮೀರ್ ಚೌಧರಿ ಆಗಿ ಸಾಯುವಂತೆ ತೋರಿಸಲು ಯತ್ನಗಳು ನಡೆದಿದ್ದವೆಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಹೇಳಿದ್ದಾರೆ. ಅವರು ೨೦೦೮ರ ಮುಂಬೈ ದಾಳಿ ತನಿಖೆಯ ಅಂಶಗಳನ್ನು ಬಹಿರಂಗಪಡಿಸಿದ್ದು 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ತಾನು ನಡೆಸಿದ ತನಿಖೆಯ ಬಗ್ಗೆ ತನ್ನ ಆತ್ಮಕಥೆ ‘ಲೆಟ್ ಮಿ ಸೇ ಇಟ್ ನೌ’ ನಲ್ಲಿ ಬರೆದುಕೊಂಡಿದ್ದಾರೆ.
ಎಲ್ಇಟಿ ಪಾಕ್ ಪ್ರಚೋದಿತ ಭಯೋತ್ಪಾದನೆ ದಾಳಿಯನ್ನು “ಹಿಂದೂ ಭಯೋತ್ಪಾದನೆ” ಎಂದು ಬಿಂಬಿಸುವ ಯತ್ನ ನಡೆಸಿತ್ತು ಎಂದು ಮಾತ್ರವಲ್ಲದೆ . ಈ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ಕೈವಾಡವೂ ಇತ್ತೆಂದು ಪತ್ತೆಯಾಗಿರುವುದಾಗಿ ಹೇಳಿದರು.
ಪುಸ್ತಕದ ಆಯ್ದ ಭಾಗಗಳ ಪ್ರಕಾರ, (ಪಾಕಿಸ್ತಾನದ) ಐಎಸ್ಐ ಮತ್ತು ಎಲ್ಇಟಿ ಸಂಘಟನೆಗಳು ಕಸಬ್ ನನ್ನು ಜೈಲಿನಲ್ಲಿಯೇ ಮುಗಿಸಲು ಪ್ರಯತ್ನಿಸುತ್ತಿದ್ದವು, ಏಕೆಂದರೆ ಅವನು ದಾಳಿಯೊಡನೆ ಸಂಪರ್ಕವಿರುವ ಏಕೈಕ ಮಹತ್ವದ ಸಾಕ್ಷಿಯಾಗಿದ್ದ. ದಾವೂದ್ ಇಬ್ರಾಹಿಂ ನ ಡಿ ಕಂಪನಿಗೆ ಕಸಬ್ ನನ್ನು “ಮುಗಿಸುವ” ಕೆಲಸವನ್ನು ವಹಿಸಲಾಗಿತ್ತು.
26/11 ದಾಳಿಯನ್ನು “ಹಿಂದೂ ಭಯೋತ್ಪಾದನೆ” ಎಂದು ನಿರೂಪಿಸುವ ಎಲ್ಇಟಿಯ ಯೋಜನೆಯನ್ನು ವಿವರಿಸುವಾಗ, ಮರಿಯಾ , “ಎಲ್ಲವೂ ಯೋಜನೆಯ ಪ್ರಕಾರ ನಡೆದಿದ್ದರೆ, ಕಸಬ್ ಚೌಧರಿಯಂತೆ ಸಾವನ್ನಪ್ಪುತ್ತಿದ್ದ ಹಾಗೂ ಮಾಧ್ಯಮಗಳು ದಾಳಿಗೆ ‘ಹಿಂದೂ ಭಯೋತ್ಪಾದಕರನ್ನು’ ದೂಷಿಸುತ್ತಿದ್ದವು.” ಎಂದಿದ್ದಾರೆ. ಭಯೋತ್ಪಾದಕ ಸಂಘಟನೆಯ ಮೇಲೆ ಭಯೋತ್ಪಾದಕರ ಮೇಲೆ ಭಾರತೀಯ ವಿಳಾಸಗಳೊಂದಿಗೆ ನಕಲಿ ಗುರುತಿನ ಚೀಟಿಗಳನ್ನು ಇರಿಸಲಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ. ಭಯೋತ್ಪಾದಕ ದಾಳಿಯ ನಂತರ ಬಿಡುಗಡೆಯಾದ ಕಸಬ್ ನ ಛಾಯಾಚಿತ್ರ “ಕೇಂದ್ರ ತನಿಖಾ ಸಂಸ್ಥೆಗಳ ಕೈಚಳಕವಾಗಿದೆ” ಎಂದು ಮಾದ್ಯಮಗಳು ಹೇಳಿಕೆ ನೀಡುತ್ತಿದ್ದವು. ಮತ್ತು ಮುಂಬೈ ಪೋಲೀಸರು ಮಾಧ್ಯಮಗಳಿಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸದಿರಲು ತೀವ್ರ ಪ್ರಯತ್ನ ಮಾಡಿದರು.”
ಇನ್ನು ಛಾಯಾಚಿತ್ರದಲ್ಲಿ ಕಸಬ್ ತನ್ನ ಬಲ ಮಣಿಕಟ್ಟಿನ ಮೇಲೆ ಕೆಂಪು ದಾರವನ್ನು ಧರಿಸಿರುವುದು ಕಂಡುಬಂದಿದೆ, ಇದು ಪವಿತ್ರ ಹಿಂದೂ ದಾರ ಎಂದು ನಂಬಲಾಗಿದೆ.26/11 ದಾಳಿಯನ್ನು ‘ಹಿಂದೂ ಭಯೋತ್ಪಾದನೆ’ ಎಂದು ಬಿಂಬಿಸಲು ದುಷ್ಕರ್ಮಿಗಳು ಯೋಜಿಸುತ್ತಿದ್ದಾರೆ ಎಂಬ ಸಿದ್ಧಾಂತವನ್ನು ಅನೇಕರು ನಂಬಲು ಇದು ಕಾರಣವಾಗಿತ್ತು.
“ಹಿಂದೂ ಭಯೋತ್ಪಾದಕರು ಮುಂಬೈ ಮೇಲೆ ಹೇಗೆ ದಾಳಿ ಮಾಡಿದ್ದಾರೆಂದು ಹೇಳುವ ವರದಿಗಳು ಪತ್ರಿಕೆಗಳಲ್ಲಿ ಬರೆಯಲ್ಪಡುತ್ತಿತ್ತು.ದೊಡ್ಡ ದೊಡ್ಡ ಟಿವಿ ಪತ್ರಕರ್ತರು ಬೆಂಗಳೂರಿಗೆ ತೆರಳಿ ಚೌಧರಿಯಾಗಿ ಬದಲಾದ ಕಸಬ್ ನ ಕುಟುಂಬ ಮತ್ತು ನೆರೆಹೊರೆಯವರನ್ನು ಸಂದರ್ಶಿಸಿ ಬ್ರೇಕಿಂಗ್ ನ್ಯೂಸ್ ಕೊಡುತ್ತಿದ್ದರು.ಆದರೆ ಅವರ ಎಣಿಕೆ ಹಾಗೆ ಆಗಲಿಲ್ಲ. ಪಾಕಿಸ್ತಾನದ ಫರೀದ್ಕೋಟ್ನ ಅಜ್ಮಲ್ ಕಸಬ್ ಓರ್ವ ನಮ್ಮ ಬಳೀ ಸಿಕ್ಕಿದ್ದ”
ಈ ಯೋಜನೆಯನ್ನು ವಿಫಲಗೊಳಿಸಲು ಹುತಾತ್ಮ ಮುಂಬೈ ಕಾನ್ಸ್ಟೆಬಲ್ ತುಕಾರಂ ಓಂಬ್ಳೆ ಸಾಧನೆ ಅಪೂರ್ವವಾದದ್ದು. ಕಸಬ್ನನ್ನು ಜೀವಂತವಾಗಿ ಸೆರೆಹಿಡಿಯುವಲ್ಲಿ ಓಬ್ಳೆ ಅವರ ಪಾತ್ರ ಮಹತ್ವದ್ದಿತ್ತ್ತು
ಪುಸ್ತಕದ ಪ್ರಕಾರ, “ಕಸಬ್ ದರೋಡೆಕೋರನಾಗಿ ಎಲ್ಇಟಿ ಸೇರಿಕೊಂಡ. ಜಿಹಾದ್ಗೆ ಹಾಗೂ ಆತನಿಗೆ ಯಾವುದೇ ಸಂಬಂಧವಿಲ್ಲ. ಆದಾಗ್ಯೂ, ಆತನ ತಲೆಗೆ ದುರುದ್ದೇಶದ ಉಪದೇಶ ತುಂಬಲಾಯಿತು.ಇದು ಕಸಬ್ ಗೆ ಭಾರತದಲ್ಲಿ ನಮಾಜ್ ಮಾಡಲು ಅನುಮತಿಸುವುದಿಲ್ಲ ಎಂದು ನಂಬಿಸಿತ್ತು. ಆದರೆ ಆತ ಬಂಧಿಸಲ್ಪಟ್ಟ ಬಳಿಕ ಮೆಟ್ರೊ ಸಿನೆಮಾ ಬಳಿಯ ಮಸೀದಿಗೆ ಭೇಟಿ ನೀಡಲು ಅನುಕೂಲ ಕಲ್ಪಿಸಿದಾಗ ಅವನಿಗೆ ಪರಮಾಶ್ಚರ್ಯವಾಗಿತ್ತು.”
ಕಸಬ್ಗೆ ಮುಂಬೈ ದಾಳಿಗೆ ಮುನ್ನ ವಾರ ಕಾಲ ರಜೆ ಹಾಗೂ 1.25 ಲಕ್ಷ ರೂ. ನೀಡಲಾಗಿತ್ತು.ಕಸಬ್ ತನ್ನ ಸಹೋದರಿಯ ಮದುವೆಗೆ ತಮ್ಮ ಕುಟುಂಬಕ್ಕೆ ಹಣವನ್ನು ನೀಡಿದ್ದ.
ದೇಶದ ಇತಿಹಾಸದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಲ್ಲಿ, ನವೆಂಬರ್ 26, 2008 ರಂದು ಮುಂಬೈನಲ್ಲಿ ಪಾಕಿಸ್ತಾನದ 10 ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ನಡೆಸಿದ ದಾಳಿ ಮಹತ್ವದ್ದಾಗಿದೆ. ಈ ದಾಳಿಯಲ್ಲಿ 166 ಜನರು ಸಾವನ್ನಪ್ಪಿದರು ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡರು.ದಾಳಿಯ ವೇಳೆ ಜೀವಂತವಾಗಿ ಸೆರೆಹಿಡಿಯಲ್ಪಟ್ಟ ಏಕೈಕ ಭಯೋತ್ಪಾದಕ ಕಬ್ ನನ್ನು 2012 ರ ನವೆಂಬರ್ 21 ರಂದು ಗಲ್ಲಿಗೇರಿಸಲಾಯಿತು
ಮುಂಬೈ ದಾಳಿಯನ್ನು ಹಿಂದೂ ಭಯೋತ್ಪಾದನೆ ಎಂದು ಬಿಂಬಿಸಲು ಕಾಂಗ್ರೆಸ್ ಕೂಡ ಪ್ರಯತ್ನಿಸಿತ್ತು
ಪೊಲೀಸರು ಮುಂಬೈ ನಗರದ ಬೀದಿಗಳಲ್ಲಿ ನಾಕಾಬಂದಿ ಹಾಕಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರಾಣವನ್ನೂ ಲೆಕ್ಕಿಸದೆ ಪಾಕಿಸ್ತಾನಿ ಭಯೋತ್ಪಾದಕ ಅಜ್ಜಲ್ ಕಸಬ್ನನ್ನು ಬಂಧಿಸಿ ದರು ಪೊಲೀಸ್ ಪೇದೆ ತುಕಾರಾಂ ಒಂಬ್ಳೆ, 2008ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಬಂಧಿತ ಅಜ್ಜಲ್ ಕಸಬ್ನನ್ನು ವಿಚಾ ರಣೆಗೊಳಪಡಿಸಿದಾಗ ಆತ ಪಾಕಿಸ್ತಾನದ ಪ್ರಜೆ ಎಂಬ ವಿಷಯ ತಿಳಿಯಿತು. ಆದರೆ ಆತ ತನ್ನ ಕೈಗೆ ಕೇಸರಿ ಬಣ್ಣದ ‘ದಾರವನ್ನು ಕಟ್ಟಿಕೊಂಡಿದ್ದ ಪಾಕಿಸ್ತಾನದ ಐಎಸ್ಐ ಆತನಿಗೆ ಉಗ್ರ ತರಬೇತಿ ನೀಡುವಾಗ, ಆತ ನಡೆಸುವ ಭಯೋತ್ಪಾದಕ ಕೃತ್ಯವನ್ನು ಹಿಂದೂಗಳ ತಲೆಗೆ ಕಟ್ಟಲು ಕೈಗೆ ಕೇಸರಿ ದಾರವನ್ನು ಕಟ್ಟಿತ್ತು.
ಅಜ್ಜಲ್ ಕಸಬ್ ಬಂಧನದ ನಂತರ, ಪಾಕಿಸ್ತಾನದ ಐಎಸ್ ಐಗಿಂತಲೂ ಅಪಾಯಾಕಾರಿಯಾಗಿ ನಡೆದುಕೊಂಡ ಕಾಂಗ್ರೆಸ್, ಅಜ್ಜಲ್ ಕಸಬ್ನನ್ನು ಹಿಂದೂವನ್ನಾಗಿ ಬಿಂಬಿ ಸುವ ಕೆಲಸ ಮಾಡಿತು. ಕಾಂಗ್ರೆಸ್ಸಿನ ದಿಗ್ವಿಜಯ ಸಿಂಗ್ ‘ಕೇಸರಿ ಭಯೋತ್ಪಾದನೆ’ ಎಂಬ ನೂತನ ಪದವನ್ನು ಬಳಸಿದರು. ಹಿಂದೂ ಸಂಘಟನೆಗಳ ಜನರನ್ನು ರಾತ್ರೋರಾತ್ರಿ ಭಯೋತ್ಪಾದಕರಂತೆ ಬಿಂಬಿಸುವ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾಂಗ್ರೆಸ್ಸಿನ ದಿಗ್ವಿಜಯ್ ಸಿಂಗ್ “26/11ರ ಭಯೋತ್ಪಾದಕ ಕೃತ್ಯದಲ್ಲಿ ಪಾಕಿಸ್ತಾನದ ಕೈವಾಡ ಕಾಣುತ್ತಿಲ್ಲ” ಎಂದು ಹೇಳುವ ಮೂಲಕ ಐಎಸ್ಐಗೆ ಕ್ಲೀನ್ ಚಿಟ್ ನೀಡಿಬಿಟ್ಟರು. ದೇಶದಾದ್ಯಂತ ಹಿಂದೂ ಭಯೋತ್ಪಾದನೆ ಎಂಬ ಹೊಸ ದೊಂದು ವ್ಯಾಖ್ಯಾನವನ್ನು ಪ್ರಾರಂಭಿಸಿದರು. ಕಾಂಗ್ರೆಸ್ಸಿ ಗರು ಹೀಗೆ ಹೇಳಿದ ಮೇಲೆ, ಎಡಚರರಿಗೆ ಆನೆಬಲ ಬಂದಂತಾಯಿತು. ಅವರು ಯಥಾಪ್ರಕಾರ ತಮ್ಮ ಸಿಂಡಿಕೇಟ್ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಮಿತ್ರ ಸಂಘಟನೆಗಳ ಮೇಲೆ ತಲೆಬುಡವಿಲ್ಲದ ಆರೋಪಗಳ ಸುರಿಮಳೆಯನ್ನು ಸುರಿಸಿದರು. ಬಹು ಸಖ್ಯಾತ ಹಿಂದೂಗಳ ಮನೋಸ್ಥೆರ್ಯವನ್ನು ಕುಗ್ಗಿಸುವ ದೊಡ್ಡ ಪಡ್ಯಂತ್ರವನ್ನು ಕಾಂಗ್ರೆಸ್ ಮಾಡಿತ್ತು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



