ಸಾಮ್ರಾಟ ಅಶೋಕನ ರಾಜ್ಯ ಲಾಂಛನವಾಗಿದ್ದ ಸಿಂಹಗಳ ಮುಖವುಳ್ಳ ಭಾರತದ ರಾಷ್ಟ್ರ ಲಾಂಛನದ ರೇಖಾಚಿತ್ರ ರಚಿಸಿದ ದೀನನಾಥ್ ಭಾರ್ಗವ ಅವರ ಈ ಕಾರ್ಯ ಭಾರತದ ಸಂವಿಧಾನದ ಮೂಲ ಹಸ್ತಪ್ರತಿಯ ಮುಖಪುಟಗಳಲ್ಲಿ ಕಂಗೊಳಿಸುತ್ತಿದೆ.
ಇಂದೋರ್ನ ಆನಂದ್ ನಗರದ ತಮ್ಮ ಸ್ವಗೃಹದಲ್ಲಿ ಡಿ.25, 2016ರಂದು ಅಗಲಿದ 89 ವರ್ಷದ ದೀನನಾಥ್ ಭಾರ್ಗವ ಅವರ ಬಗ್ಗೆ ಜನರು ಹೆಚ್ಚಾಗಿ ತಿಳಿದಿಲ್ಲ.
ಮಧ್ಯಪ್ರದೇಶದ ಬೇತಲ್ ಜಿಲ್ಲೆಯ ಮುಲ್ತೈ ಗ್ರಾಮದಲ್ಲಿ ನವೆಂಬರ್ 1, 1927ರಲ್ಲಿ ಜನಿಸಿದ್ದ ದೀನನಾಥ್ ಭಾರ್ಗವ ಅವರು ಶಾಂತಿನಿಕೇತನದ ವಿಶ್ವ ಭಾರತಿಯ ಕಲಾ ಭವನದ ವಿದ್ಯಾರ್ಥಿಯಾಗಿದ್ದರು.
ಕಲಾ ಭವನದ ಲಲಿತ ಕಲಾ ಇಲಾಖೆಯ ಪ್ರಾಂಶುಪಾಲರಾದ ನಂದಲಾಲ್ ಬೋಸ್, ಭಾರ್ಗವ ಅವರ ಪ್ರತಿಭೆಯಿಂದ ಪ್ರಭಾವಿತರಾಗಿ ಅವರನ್ನು ಭಾರತದ ಸಂವಿಧಾನದ ಹಸ್ತಪ್ರತಿ ವಿಸ್ಯಾಸದ ಜವಾಬ್ದಾರಿ ಹೊಂದಿದ್ದ ತಂಡದ ಸದಸ್ಯರಾಗಿ ನೇಮಕ ಮಾಡಿದ್ದರು.
ಸಾರನಾಥ್ನ ಅಶೋಕ ಸ್ಥಂಭದ ಮೇಲಿರುವ ಸಿಂಹ ಲಾಂಛನವನ್ನು ಸಂವಿಧಾನ ಹಸ್ತಪ್ರತಿಯ ಮುಖಪುಟದಲ್ಲಿ ಈ ಲಾಂಛನವನ್ನು ವಿನ್ಯಾಸಗೊಳಿಸುವುದು ನಂದಲಾಲ್ ಅವರ ಉದ್ದೇಶವಾಗಿತ್ತು. ಭಾರ್ಗವ ಅವರು ವಿನ್ಯಾಸಗೊಳಿಸಿದ ಈ ಚಿತ್ರ ಜನವರಿ 26, 1950ರಂದು ಭಾರತದ ರಾಷ್ಟ್ರ ಲಾಂಛನವಾಗಿ ಸಂವಿಧಾನದ ಹಸ್ತಪ್ರತಿಯಲ್ಲಿ ಅಳವಡಿಸಲಾಯಿತು.
ನಾಲ್ಕು ಸಿಂಹಗಳನ್ನು ಹೊಂದಿರುವ ಭಾರತದ ರಾಷ್ಟ್ರ ಲಾಂಛನ ಶಕ್ತಿ, ಧೈರ್ಯ ಮತ್ತು ವಿಶ್ವಾಸಗಳ ಸಂಕೇತವಾಗಿದೆ. ಈ ಲಾಂಛನದ ವೃತ್ತಾಕಾರದ ಚೌಕಟ್ಟಿನ ನಾಲ್ಕು ದಿಕ್ಕುಗಳಲ್ಲಿರುವ ಇತರ ನಾಲ್ಕು ಪ್ರಾಣಿಗಳಾದ ಸಿಂಹ (ಉತ್ತರ), ಆನೆ (ಪೂರ್ವ), ಕುದುರೆ (ದಕ್ಷಿಣ) ಹಾಗೂ ಕೋಣ (ಪಶ್ಚಿಮ) ಈ ಲಾಂಛನದ ರಕ್ಷಕರು ಎಂದು ಪರಿಗಣಿಸಲಾಗಿದೆ. ಈ ನಾಲ್ಕು ಪ್ರಾಣಿಗಳನ್ನು ‘ಧರ್ಮ ಚಕ್ರ’ದ ಮೂಲಕ ವಿಂಗಡಿಸಲಾಗಿದೆ. ದೇವನಾಗರಿ ಭಾಷೆಯಲ್ಲಿ ‘ಸತ್ಯಮೇವ ಜಯತೆ’ ಎಂಬ ನಾಣ್ನುಡಿಯನ್ನು ಈ ಲಾಂಛನದ ಬರೆಯಲಾಗಿದೆ.
ನಂದಲಾಲ್ ಬೋಸ್ ಅವರು ಭಾರ್ಗವ ಅವರಿಗೆ ಸಂವಿಧಾನದ ಮುಖಪುಟ ಮತ್ತು ಮೊದಲ 30 ಪುಟಗಳ ಅಲಂಕಾರ ವಿನ್ಯಾಸದ ಹೊಣೆಗಾರಿಕೆ ನೀಡಿದ್ದರು.
ಪೆನ್ಸಿಲ್ ಮತ್ತು ಬ್ರಶ್ನ ಸಹಾಯದಿಂದ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಇದರ 30 ಪುಟಗಳನ್ನು ಚಿನ್ನದ ಬಣ್ಣಗಳಿಂದ ಕೂಡಿದ ಲಿಪಿಯಿಂದ ಬರೆಯಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.