ನವದೆಹಲಿ: ಪಾಕಿಸ್ಥಾನ ಮತ್ತು ಚೀನಾ ವಿರುದ್ಧದ ಯುದ್ಧದ ನಂತರ ವಲಸೆ ಹೋದವರ ಆಸ್ತಿಗಳ ಹಕ್ಕು ಮತ್ತು ವರ್ಗಾವಣೆಯ ಸಂರಕ್ಷಿಸುವ 50 ವರ್ಷಗಳಷ್ಟು ಹಳೆಯ ಕಾನೂನಿನ ತಿದ್ದುಪಡಿ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 5ನೇ ಬಾರಿ ಸಹಿ ಹಾಕಿದ್ದಾರೆ.
ಈ ಕಾನೂನು ಕಟ್ಟಳೆಗೆ ಒಪ್ಪಿಗೆ ಸೂಚಿಸುವ ವಿಧೇಯಕಕ್ಕೆ 5ನೇ ಬಾರಿ ಸಹಿ ಹಾಕಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಸಂಸತ್ನಲ್ಲಿ ಕಾನೂನು ತಿದ್ದುಪಡಿ ತರುವಲ್ಲಿ ವಿಫಲವಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವಿಧೇಕವನ್ನು ಶುಕ್ರವಾರ ಮರು ಹೊರಡಿಸಲಾಗಿದ್ದು, ಜನವರಿ 7ರಂದು ಮೊದಲ ಬಾರಿ ಪ್ರಕಟಿಸಲಾಗಿತ್ತು. ವೈರಿ ಆಸ್ತಿ (ತಿದ್ದುಪಡಿ ಮತ್ತು ಕ್ರಮಬದ್ಧಗೊಳಿಸುವಿಕೆ) 5ನೇ ವಿಧೇಯಕ, 2016 ಈವರೆಗೆ 4 ಬಾರಿ ಘೋಷಿಸಲಾಗಿದೆ.
ಕೇಂದ್ರ ಸಚಿವ ಸಂಪುಟ ಈ ವಿಧೇಯಕವನ್ನು ಬುಧವಾರ ಹೊರಡಿಸಿದೆ. ಸಂಸತ್ನಲ್ಲಿ ಅನಾಣ್ಯೀಕರಣ ವಿಚಾರವಾಗಿ ನಡೆದ ಬಿಕ್ಕಟ್ಟಿನಿಂದಾಗಿ ಈ ವಿಧೇಯಕವನ್ನು ಮರು ಹೊರಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.