ವಾರಣಾಸಿ: ಉತ್ತರ ಪ್ರದೇಶದ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಆಗಮಿಸಿದ್ದ ಪ್ರಧಾನಿ ಮೋದಿ ಅವರು, ತಮ್ಮ ಭೋಜನವನ್ನು ತಾವೇ ಸ್ವತಃ ತಂದು ಬಿಜೆಪಿ ಕಾರ್ಯಕರ್ತರೊಂದಿಗೆ ಸೇವಿಸಿದರು.
ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ ಕೇಶವ ಮೌರ್ಯ ಹಾಗೂ ಇತರ ಕಾರ್ಯಕರ್ತರೊಂದಿಗೆ ಮಧ್ಯಾಹ್ನದ ಊಟ ಸೇವಿಸಿದ ಈ ಪೋಟೋವನ್ನು ಬಿಜೆಪಿ ಪೋಸ್ಟ್ ಮಾಡಿದೆ. ‘ಇಂತಹ ಸಮಾನತೆ ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಧ್ಯ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಪ್ರಧಾನಿ ಮೋದಿ ಹಾಗೂ ಇತರ ಕಾರ್ಯಕರ್ತರು ತಮ್ಮ ತಮ್ಮ ಊಟ/ತಿಂಡಿಯನ್ನು ಸಭೆ ನಡೆಯುವ ಸ್ಥಳಕ್ಕೆ ತಂದಿದ್ದರು ಎಂದು ಟ್ವೀಟ್ನಲ್ಲಿ ತಿಳಿಸಲಾಗಿದೆ.
Everyone including PM Shri @narendramodi brought their own tiffins and had discussion over a meal. Such equality is possible only in BJP. pic.twitter.com/qGkwfiAtPM
— BJP (@BJP4India) December 22, 2016
PM Shri @narendramodi interacted & had lunch with more than 26,000 booth workers belonging to over 1700 booths in Varanasi today. pic.twitter.com/DmOB2Ykrfp
— BJP (@BJP4India) December 22, 2016
ಇದೇ ವೇಳೆ ಪ್ರಧಾನಿ ಮೋದಿ ಅವರು ವಾರಣಾಸಿಯ 1700 ಬೂತ್ಗಳ 26,000 ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ವಾರಣಾಸಿಯಲ್ಲಿ ಕ್ಯಾನ್ಸರ್ ಕೇಂದ್ರ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕಬೀರ್ ನಗರ್ದಲ್ಲಿ ತಳಮಟ್ಟದ ಕೇಬಲ್ ವೈರ್ ಅಳವಡಿಸುವುದು, ಬೀದಿ ದೀಪಗಳ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.