ಬಂಟ್ವಾಳ: ನಮ್ಮ ಸನಾತನ ಸಂಸ್ಕೃತಿಯನ್ನು ಗೌರವಿಸುವ ಬಲಪಡಿಸುವ ಕೆಲಸ ಹಿಂದೂ ಸಂಘಟನೆಗಳ ಮೂಲಕ ನಡೆಯುವ ಕಾಲ ಬಂದಿರುವುದು ನಮ್ಮ ದುರಾದೃಷ್ಟ, ಪ್ರತಿಯೊಬ್ಬ ಹಿಂದೂ ನಾನು ಹಿಂದೂ ಎನ್ನುವ ಭಾವನೆಯನ್ನು ಮೈಗೂಡಿಸಿಕೊಂಡು ಶ್ರೇಷ್ಠ ಧರ್ಮವನ್ನು ಪ್ರೀತಿಸಿದಾಗ ಇಲ್ಲಿನ ನೆಲ ಜಲ ಸಂಸ್ಕೃತಿ ಉಳಿಯುತ್ತೆ ಎಂದು ಶ್ರೀ ಕ್ಷೇತ್ರ ಪೊಳಲಿಯ ಪರಮಪೂಜ್ಯ ಶ್ರೀಶ್ರೀಶ್ರೀ ಸ್ವಾಮಿ ವಿವೇಕಾಚೈತನ್ಯಾನಂದ ಸ್ವಾಮೀಜಿ ಹೇಳಿದರು.
ಅವರು ಹಿಂದೂ ಜಾಗರಣವೇದಿಕೆಯ ವತಿಯಿಂದ ಡಿ. 6 ರಂದು ಅಯೋಧ್ಯೆ ಶ್ರೀ ರಾಮನ ಜನ್ಮ ಸ್ಥಾನದ ಬಗ್ಗೆ ನಡೆದ ಮುಕ್ತಿ ಅಂದೋಲನದ ವಿಜಯ ದಿನದ ಅಂಗವಾಗಿ ಬಿಸಿರೋಡಿನ ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ ಮತ್ತು ಬಳಿಕ ನಡೆದ ಧಾರ್ಮಿಕ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಅರ್ಶೀವಚನ ನೀಡಿದರು. ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ನಮ್ಮ ಮೂಲ ಧರ್ಮಕ್ಕೆ ಪೆಟ್ಟು ನೀಡುತ್ತಿದೆ. ಭಜನೆ ಪೂಜೆಯ ಮೂಲಕ ಹಿಂದೂ ಧರ್ಮವನ್ನು ಉಳಿಸುವ ಕೆಲಸ ಮಾಡಬೇಕಾಗಿದೆ, ಆ ಮೂಲಕ ಸಂಘಟನೆಯನ್ನು ಬಲಪಡಿಸಿ ದೇಶವನ್ನು ಉಳಿಸಿ ಎಂದು ಅವರು ಹೇಳದರು.
ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಕೆ.ಟಿ.ಉಲ್ಲಾಸ್ ದಿಕ್ಸೂಚಿ ಭಾಷಣದ ಮೂಲಕ ಬಹು ಸಂಖ್ಯಾತ ಹಿಂದೂ ಬಹು ದೊಡ್ಡ ಕನಸಗಿರುವ ಆಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಡಳಿತ ಪಕ್ಷ ಸಂವಿಧಾದದಲ್ಲಿ ತಿದ್ದು ಪಡಿ ತಂದು ಕನಸನ್ನು ನನಸು ಮಾಡಬೇಕು ಎಂದು ಹೇಳಿದರು. ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಕೊಲೆಗೈಯುವ ಮತ್ತು ನಿರಂತರ ಹಲ್ಲೆ ನಡೆಸುವ ಮೂಲಕ ಹಿಂದೂ ಸಮಾಜದಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಮಾಡುತ್ತಿದ್ದಾರೆ. ಈ ಎಲ್ಲಾ ಪ್ರಕರಣದ ಹಿಂದೆ ಮುಸ್ಲಿಂ ಸಂಘಟನೆಯ ಪದಾಧಿಕಾರಿಗಳು ಕೈಜೊಡಿಸಿದ್ದರು. ಇಂತಹ ನೂರಾರು ದೇಶದ್ರೋಹ ಕೆಲಸಗಳ ಮೂಲಕ ಶಾಂತಿ ಕದಡುವ ಪ್ರಯತ್ನವನ್ನು ಮಾಡುತ್ತಲೇ ಬಂದಿದೆ. ಇನ್ನು ಹಿಂದೂ ಸಮಾಜ ಇಂತಹ ದುಷ್ಕೃತ್ಯಗಳನ್ನು ಸಹಿಸಿಕೊಳ್ಳುವುದಿಲ್ಲ. ಭಯೋತ್ಪಾದನೆ ಮತಾಂತರ ಮತ್ತು ಸಮಾಜ ಒಡೆಯುವ ಕೆಲಸವನ್ನು ಎಂದೂ ಸಹಿಸುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿದಲ್ಲದೆ ಇದಕ್ಕೆ ತಕ್ಕ ಪ್ರತೀಕಾರ ನೀಡಲು ಸಿದ್ದವಾಗಿದೆ ಎಂದರು.
ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಹಿ.ಜಾಗರಣಾ ಅಧ್ಯಕ್ಷ ಚಂದ್ರ ಕಲಾಯಿ, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಕಲ್ಲಡ್ಕ , ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಕಲಾಯಿ ಉಪಸ್ಥಿತರಿದ್ದರು.
ಬಾಲಕೃಷ್ಣ ಕಾಮಾಜೆ ಸ್ವಾಗತಿಸಿ, ಕಿರಣ್ ಮೂರ್ಜೆ ಧನ್ಯವಾದ ನೀಡಿದರು, ರಮೇಶ್ ಕುಮಾರ್ ವಗ್ಗ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.