ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ವತಿಯಿಂದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ 2016 ರ ಡಿಸೆಂಬರ್ 11 ಭಾನುವಾರ ಬೆಳಗ್ಗೆ 8.30 ರಿಂದ ನಗರದ ನಗರದ ನೆಹರು ಮೈದಾನ ಬಳಿಯ ಫುಟ್ಬಾಲ್ ಮೈದಾನದಲ್ಲಿ ನಡೆಯಲಿದೆ.
ಕ್ರೀಡಾಕೂಟದಲ್ಲಿ 100 ಮೀ. 200 ಮೀ.,400 ಮೀ .ಓಟ, ಬಾಲ್ ಪಾಸಿಂಗ್, ಸಂಗೀತಕುರ್ಚಿ, ಮೂರುಕಾಲಿನ ಓಟ, ಗೋಣಿಚೀಲ ಓಟ, ವಾಕಿಂಗ್, ಸ್ಲೋ ಬೈಕ್ರೇಸ್, ಬಾಳೆ ಹಣ್ಣು ತಿನ್ನುವ ಸ್ಪರ್ಧೆ, ಕ್ರಿಕೆಟ್, ಹಗ್ಗ ಜಗ್ಗಟ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಥಳದಲ್ಲೇ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಪತ್ರಕರ್ತರು ಹಾಗೂ ಕ್ರಿಕೆಟ್ ತಂಡಗಳ ಹೆಸರುಗಳನ್ನು ಡಿಸೆಂಬರ್ 5 ರ ಒಳಗೆ ದಯಾ ಕುಕ್ಕಾಜೆ (9880271904) ಹಾಗೂ ಸುರೇಶ್ ಪಳ್ಳಿ (9964025942) ಅವರಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಇಂದಾಜೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಿಯಮಗಳು
1. ಕ್ರೀಡಾಕೂಟದಲ್ಲಿ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದ ಪತ್ರಕರ್ತರಿಗೆ, ಛಾಯಾಗ್ರಾಹಕರಿಗೆ ಮತ್ತು ಸಿಬ್ಬಂದಿಗಳಿಗೆ ಮಾತ್ರ ಅವಕಾಶ.
2. ಸ್ಪರ್ಧೆಗಳಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಾಳುಗಳು ಸಂಘದ ಅಥವಾ ಸಂಸ್ಥೆಯ ಗುರುತು ಚೀಟಿ ಹೊಂದಿರಬೇಕು.
3. ಗುಂಪು ಆಟಗಳಿಗೆ ಪ್ರತ್ಯೇಕವಾಗಿ ಸಂಸ್ಥೆಗಳ ಹೆಸರಿನಲ್ಲಿ ತಂಡಗಳಿಗೆ ಭಾಗವಹಿಸಲು ಅವಕಾಶವಿದೆ. ಭಾಗವಹಿಸುವ ತಂಡಗಳು ಡಿಸೆಂಬರ್ 5 ರ ರ ಮೊದಲು ಪ್ರೆಸ್ ಕ್ಲಬ್ನಲ್ಲಿ ಹೆಸರು ನೋಂದಾಯಿಸತಕ್ಕದ್ದು.
4. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಬೆಳಗ್ಗೆ 8.30 ಕ್ಕೆ ಕ್ರೀಡಾಂಗಣದಲ್ಲಿ ಕಡ್ಡಾಯವಾಗಿ ಹಾಜರಿದ್ದು ತಮ್ಮ ಹೆಸರನ್ನು ನೋಂದಾಯಿಸಬೇಕು. ಆಸಕ್ತರು ಕ್ಲಪ್ತ ಸಮಯದಲ್ಲಿ ಹಾಜರಿದ್ದು ಸಹಕರಿಸಬೇಕಾಗಿ ವಿನಂತಿ.
5.ಯಾವುದೇ ಸ್ಪರ್ಧೆಯನ್ನು ರದ್ದುಪಡಿಸುವ ಅಧಿಕಾರ ಸಂಘಟಕರಿಗಿರುತ್ತದೆ.
6. ಸ್ಪರ್ಧೆಗಳಿಗೆ ನಾಯಕರು ಆಯಾ ತಂಡಗಳ ಸದಸ್ಯರ ಪೂರ್ಣ ಮಾಹಿತಿ ಹೊಂದಿಬೇಕು. ಸ್ಪರ್ಧೆಯ ವಿಚಾರದಲ್ಲಿ ಯಾವದೇ ತಕರಾರು ಕಂಡುಬಂದಲ್ಲಿ ಅವುಗಳನ್ನು ಸಂಬಂಧಪಟ್ಟವರೊಂದಿಗೆ ಮಾತುಕತೆಯ ಮೂಲಕ ಬಗೆಹರಿಸಲು ತಂಡದ ನಾಯಕರಿಗೆ ಮಾತ್ರ ಅವಕಾಶ ಇರುತ್ತದೆ.
7. ಸ್ಪರ್ಧೆಯಲ್ಲಿ ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ.
ಹೆಚ್ಚಿನ ವಿವರಗಳಿಗೆ ಈ ಕೆಳಗಿನವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ದಯಾನಂದ ಕುಕ್ಕಾಜೆ – 9880271904
ಸುರೇಶ್ ಪಳ್ಳಿ – 9964025942
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.