ಮಂಗಳೂರು : ಸ್ವಾತಂತ್ರೋತ್ತರ ಭಾರತವನ್ನು ಆಳಿದ ಅನೇಕ ಸರಕಾರಗಳು ದೇಶದಲ್ಲಿ ಭ್ರಷ್ಟಚಾರ ನಿರ್ಮೂಲನೆಗೆ ಯಾವುದೇ ಕಠಿಣ ಯೋಜನೆಯನ್ನು ಜಾರಿಗೆ ತಂದಿರಲಿಲ್ಲ. ಭೂಫೋರ್ಸ್ ಹಗರಣದಿಂದ ಹಿಡಿದು 2 ಲಕ್ಷ ಕೋಟಿ ರೂಪಾಯಿಗಳ ಕಲ್ಲಿದ್ದಲು ಹಗರಣದವರೆಗೂ ಭಾರತದಲ್ಲಿ ಸುಮಾರು 20 ಲಕ್ಷ ಕೋಟಿಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಭ್ರಷ್ಟಚಾರ ಜರುಗಿರುವುದು ವಿವರವಾಗಿ ವರದಿಯಾಗಿದೆ. ಇವುಗಳ ಪೈಕಿ ಶೇ. 95 ಕ್ಕಿಂತ ಹೆಚ್ಚು ಹಗರಣಗಳು ಜರುಗಿರುವುದು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ. ಕೇಂದ್ರದಲ್ಲಿ 2014 ರ ನಂತರ ಜನರ ಪೂರ್ಣ ಬಹುಮತದಿಂದ ಆಡಳಿತದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ಅಧಿಕಾರ ವಹಿಸಿಕೊಂಡ ನಂತರ ಯಾವುದೇ ರೀತಿಯ ಭ್ರಷ್ಟಚಾರ ಜರುಗದಂತೆ ಹಾಗೂ ಚುನಾವಣೆ ಪೂರ್ವದಲ್ಲಿ ನಾ ಖಾವೂಂಗಾ, ನಾ ಖಾನೆದೂಂಗ’ ಎಂಬ ಕೊಟ್ಟ ಮಾತಿನಂತೆ ಆಡಳಿತ ನಡೆಸುತ್ತಾ ಬಂದಿರುವುದು ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುವಂತೆ ಮಾಡಿರುವುದು ಮಾತ್ರವಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲವೆಂಬುದರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಇದರಿಂದ ಮನವರಿಕೆಯಾಗತೊಡಗಿದೆ. ಇದರ ಬೆನ್ನಲ್ಲೆ ರೂ.೫೦೦ ಹಾಗೂ ೧೦೦೦ರದ ನೋಟುಗಳನ್ನು ಅಪನಗದೀಕರಣಗೊಳಿಸಿ ಭ್ರಷ್ಟಚಾರ ಮಾತ್ರವಲ್ಲದೆ ಕಪ್ಪುಹಣ, ಮಾಫಿಯಾ, ಖೋಟಾನೋಟು ಹಾಗೂ ಭಯೋತ್ಪಾದನೆಗೆ ನೇರ ಪೆಟ್ಟು ಬೀಳುವಂತೆ ಮಾಡಿರುವುದು ಕಾಂಗ್ರೆಸ್ನಿಂದ ಸಹಿಸಿಕೊಳ್ಳಲಾಗುತ್ತಿಲ್ಲ. ಈ ಯೋಜನೆಯಿಂದ ದೇಶಕ್ಕಾಗುವ ಲಾಭದ ಬಗ್ಗೆ ಸ್ಪಷ್ಟ ಅರಿವಿದ್ದರು ತಮಗಾಗುವ ನಷ್ಟದ ಲೆಕ್ಕಾಚಾರವನ್ನು ಮಾಡಿ ಸತ್ಯಕ್ಕೆ ದೂರವಿರುವ ಹೇಳಿಕೆಗಳನು ಕೊಡುತ್ತಾ, ಸಮಾಜದಲ್ಲಿ ಗೊಂದಲ ಸೃಷ್ಟಿಸುವ ನಿಟ್ಟಿನಲ್ಲಿ ನಾಟಕೀಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಾ ದೇಶದ ಅಭಿವೃದ್ಧಿಯ ವಿರುದ್ಧ ಹಾಗೂ ಜನರ ಪ್ರಗತಿಪರ ಯೋಜನೆಗಳ ವಿರುದ್ಧ ತಮ್ಮ ನಿಲುವನ್ನು ತಾವೇ ಬಹಿರಂಗಪಡಿಸಿಕೊಂಡಿದ್ದಾರೆ.
ಮಮತಾಬ್ಯಾನರ್ಜಿ ನೇತೃತ್ವದಲ್ಲಿ ನವೆಂಬರ್ 28 ರಂದು ಘೋಷಿಸಿರುವ ಭಾರತ ಬಂದ್ಗೆ ಕರ್ನಾಟಕದ ಕಾಂಗ್ರೆಸ್ ಸರಕಾರ ಬೆಂಬಲ ವ್ಯಕ್ತಪಡಿಸಿರುವುದು ಹಾಗೂ ಕರ್ನಾಟಕದಲ್ಲಿ ಬಂದ್ ಯಶಸ್ವಿಗೊಳಿಸುವಂತೆ ರಾಹುಲ್ ಗಾಂಧಿ ಕರ್ನಾಟಕ ಕಾಂಗ್ರೆಸ್ ಸಮಿತಿಗೆ ಸೂಚಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಭ್ರಷ್ಟಚಾರವನ್ನೇ ಕಸುಬಾಗಿಸಿಕೊಂಡು ಕಪ್ಪುಹಣವನ್ನೇ ಆಮ್ಲಜನಕವನ್ನಾಗಿಸಿಕೊಂಡಿದ್ದ ಕಾಂಗ್ರೆಸ್, ತನ್ನ ಅಸ್ಥಿತ್ವ ಕಟ್ಟಿಕೊಳ್ಳಲು ಈ ಮೂಲಕ ಪ್ರಯತ್ನಿಸಿರುವುದು ಅತ್ಯಂತ ದುರಾದೃಷ್ಟಕರ. ರೂ. 500 ಹಾಗೂ 1000 ದ ಅಪನಗದೀಕರಣದಿಂದ ದೇಶಕ್ಕೆ ಬಹುದೊಡ್ಡ ಪ್ರಮಾಣದಲ್ಲಿ ಲಾಭವಿದೆ. ದೇಶದಲ್ಲಿನ ಎಲ್ಲಾ ರಾಷ್ಟ್ರವಿರೋಧಿ, ಪ್ರತ್ಯೇಕವಾದಿ ಮತ್ತು ಭಯೋತ್ಪಾದಕ ಚಟುವಟಿಕೆಗಳು ಒಮ್ಮೆಲೆ ಇದೀಗ ಸ್ಥಗಿತಗೊಂಡಿದೆ. ಪಾಕಿಸ್ಥಾನದ ಪ್ರತ್ಯೇಕವಾದಿ ಹಾಗೂ ಭಯೋತ್ಪಾದಕರ ಗಾಳಕ್ಕೆ ಅತಿ ಸುಲಭವಾಗಿ ಕಾಶ್ಮೀರದ ಯುವಕರು ಬಲಿಯಾಗುತ್ತಿದ್ದರು, ಪಾಕಿಸ್ಥಾನದಲ್ಲಿ ಮುದ್ರಣಗೊಂಡ ಭಾರತದ ಖೋಟಾನೋಟುಗಳನ್ನು ಇಲ್ಲಿನ ಯುವಕರಿಗೆ ಕೊಟ್ಟು ಅವರ ಮೂಲಕ ಕಣಿವೆ ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸಲಾಗುತಿತ್ತು. ಭಾರತದ ಸೈನಿಕರ ವಿರುದ್ಧ ವಿನಾಕಾರಣ ಸಂಘರ್ಷಕ್ಕೆ ಹಾಗೂ ಅಲ್ಲಿ ನಡೆಸಲಾಗುತ್ತಿದ್ದ ಕಲ್ಲು ತೂರಾಟ ಇದೀಗ ಸಂಪೂರ್ಣ ನಿಂತಿರುವುದು ಪಾಕಿಸ್ತಾನದ ಸಂಚಿಗೆ ಕೊಟ್ಟ ಉತ್ತರವಾಗಿದೆ ಮಾತ್ರವಲ್ಲದೆ ದೇಶದಲ್ಲಿ ಭಯೋತ್ಪಾದಕರ ವಿಕೃತ ಚಟುವಟಿಕೆಗಳು ಬಂದ್ ಆಗುವಂತೆ ಮಾಡಿದೆ.
ನಗದು ವಹಿವಾಟಿಗೆ ತಕ್ಕ ಪ್ರಮಾಣದಲ್ಲಿ ಕಡಿವಾಣ ಬಿದ್ದಿರುವುದರಿಂದ ಭೂಮಾಫಿಯಾ ಹಾಗೂ ಡ್ರಗ್ ಮಾಫಿಯಾಗಳಿಗೆ ಈ ಯೋಜನೆ ಮುಳ್ಳಾಗಿ ಮಾರ್ಪಾಡಿಸಿದೆ ಹಾಗೂ ಮುಂದಿನ ದಿನಗಳಲ್ಲಿ ಭ್ರಷ್ಟಚಾರ ಮತ್ತು ಕಪ್ಪುಹಣ ನಿಗ್ರಹಕ್ಕೆ ಇಟ್ಟ ಪ್ರಥಮ ಹೆಜ್ಜೆ ಇದಾಗಿದೆ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಈ ಯೋಜನೆಯ ಮೂಲಕ ಕೇಂದ್ರ ಸರಕಾರವು ಒಂದೇ ಏಟಿನಲ್ಲಿ ದೇಶದ ಐದು ಮಾರಕಗಳಿಗೆ ಉತ್ತರಕೊಟ್ಟಿದೆ. ಇಗಾಗಲೇ ಜನರಿಂದ ತಿರಸ್ಕ್ರತಗೊಂಡಿರುವ ಕಾಂಗ್ರೆಸ್, ಇಂತಹ ಐತಿಹಾಸಿಕ ಯೋಜನೆಯ ವಿರುದ್ಧ ಧ್ವನಿಎತ್ತಿರುವುದು ಅವರಿಗಿರುವ ದೇಶದ ಡೋಂಗಿ ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ. ದೇಶದಲ್ಲಿ ಅಪನಗದೀಕರಣದ ವಿಷಯದಲ್ಲಿ ಹಲವಾರು ಸಮೀಕ್ಷೆಗಳು ನಡೆದಿದ್ದು ಶೇ.85 ಕ್ಕಿಂತ ಹೆಚ್ಚು ಜನ ಮೋದಿಯವರ ನಿರ್ಣಯದ ಪರವಾಗಿದ್ದಾರೆ. ಜನರ ದಿಕ್ಕನ್ನು ತಪ್ಪಿಸಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಆದಿಯಾಗಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಮುಂದಿನ ದಿನಗಳಲ್ಲಿ ಜನರು ಸೂಕ್ತ ಉತ್ತರ ಕೊಡಲಿದ್ದಾರೆ ಎಂದು ದ.ಕ ಜಿಲ್ಲಾ ಬಿಜೆಪಿ ವಕ್ತಾರ ವಿಕಾಸ್ ಪುತ್ತೂರು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.