ಸಂಸ್ಕೃತವನ್ನು ವಿಶ್ವದಲ್ಲೇ ಸಂಸ್ಕರಿಸಿದ ಅತ್ಯಂತ ಹಳೆಯ ಭಾಷೆ ಎಂದು ಪರಿಗಣಿಸಲಾಗಿದೆ. ನಾಗ್ಪುರ ಮೂಲದ ಏಕಮಾತ್ರ ಸಂಸ್ಕೃತ ವಾರಪತ್ರಿಕೆ ‘ಸಂಸ್ಕೃತ ಭವಿತವ್ಯಂ’ ಕಳೆದ 65 ವರ್ಷಗಳಿಂದ ಸಂಸ್ಕೃತ ಭಷೆ ಮತ್ತು ಅದರ ಮಹತ್ವವನ್ನು ಉಳಿಸಿಕೊಂಡು ಬಂದಿದೆ.
ವಿದ್ವಾಂಸ, ಶ್ರೇಷ್ಠ ಸಂಗೀತಗಾರ ಮತ್ತು ಯೋಗ ಪರಿಣಿತರಾದ ಪ್ರಜ್ಞಾಭಾರತಿ ಡಾ. ಶ್ರೀಧರ್ ಭಾಸ್ಕರ್ ವೆರ್ಣೇಕರ್ ಅವರು 1951ರಲ್ಲಿ ಸಂಸ್ಕೃತ ಭವಿತವ್ಯಂ ವಾರಪತ್ರಿಕೆಯನ್ನು ಆರಂಭಿಸಿದ್ದರು. ಇದು ವಿಶ್ವದಲ್ಲೇ ಅತ್ಯಂತ ಸ್ಥಿರವಾಗಿ ಪ್ರಕಟಿಸಲಾಗುತ್ತಿರುವ ಸಂಸ್ಕೃತ ವಾರಪತ್ರಿಕೆ. ಭವಿತವ್ಯಂ ಪತ್ರಿಕೆ ಸಂಸ್ಕೃತ ಭಾಷಾ ಪ್ರಚಾರಿಣಿ ಸಭಾ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ನಾಗ್ಪುರದಲ್ಲಿ 1918ರಲ್ಲಿ ಜನಿಸಿದ ಡಾ.ವರ್ಣೇಕರ್, ತೀರ್ಥ-ಭಾರತಂ ಮುಂತಾದ ಕಾವ್ಯ ಕೃತಿಗಳನ್ನು ಬರೆದಿದ್ದಾರೆ. ಅವರ ಶಿವಾಜಿ ಮಹಾರಾಜರ ಕುರಿತ ‘ಶ್ರೀ ಶಿವರಾಜೋದಯಂ’ ಕೃತಿ 1974ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಜಗದ್ಗುರು ಶ್ರೀ ಶಂಕರಾಚಾರ್ಯರು ಕೂಡ ಅವರಿಗೆ ಪ್ರಜ್ಞಾ ಭಾರತಿ ಎಂಬ ಬಿರುದು ನೀಡಿ ಗೌರವಿಸಿದ್ದರು ಎನ್ನಲಾಗಿದೆ.
ಸಮಾಜದ ಎಲ್ಲ ವರ್ಗಗಳಿಗೂ ಉಚಿತ ಯೋಗ ಶಿಕ್ಷಣ ನೀಡುತ್ತಿರುವ ನಾಗ್ಪುರದ ಯೋಗಾಭ್ಯಾಸಿ ಮಂಡಲ್ನ ಅಧ್ಯಕ್ಷರಾಗಿಯೂ ವೆರ್ಣೇಕರ್ ಅವರು ಕಾರ್ಯ ನಿರ್ವಹಿಸಿದ್ದರು.
ಸಂಸ್ಕೃತ ಭಾಷಾ ಪ್ರಚಾರಿಣಿ ಸಭಾ ನಾಗ್ಪುರದ ಸಿವಿಲ್ ಲೇನ್ ಪ್ರದೇಶದಲ್ಲಿ ಸ್ಥಾಪಿತಗೊಂಡಿದ್ದು, ಲೀನಾ ರಸ್ತೋಗಿ ಅವರು 2005ರಿಂದ ಇದರ ಸಂಪಾದಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾ. ಶ್ರೀಧರ್ ವರ್ಣೇಕರ್ ಇದರ ಮೊದಲ ಸಂಪಾದಕರಾಗಿದ್ದು, ಡಾ.ಕೇಶವ ರಾಮಚಂದ್ರ ಜೋಶಿ ಹಾಗೂ ಡಾ. ಎನ್.ಆರ್. ರದಪಾಂಡೆ ಈ ಹಿಂದೆ ಭಾವಿತಾವ್ಯಂ ನಿಯತಕಾಲಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು.
77 ವರ್ಷದ ಲೀನಾ ರಸ್ತೋಗಿ ಅವರು ಹೆಸರಾಂತ ಘಝಲ್ ಲೇಖಕಿಯೂ ಆಗಿದ್ದು, ಸಂಸ್ಕೃತ, ಹಿಂದಿ, ಮರಾಠಿ ಮತ್ತು ಆಂಗ್ಲ ಭಾಷೆಗಳಲ್ಲಿ ಸುಮಾರು 33 ಕೃತಿಗಳನ್ನು ಬರೆದಿದ್ದಾರೆ.
ಅವರು ಬರೆದ ಕಥಾ ಎಕ್ ಕಿಲಾಕಸ್ಯ (ಒಂದು ಸೂಜಿ ಮೇಲೆ ಬರೆದಿರುವ ಕಥೆ) ಅಮರಾವತಿ ವಿಶ್ವವಿದ್ಯಾಲಯದ ಮೊದಲ ವರ್ಷದ ಪದವಿಪೂರ್ವ ವಿದ್ಯಾರ್ಥಿಗಳ ಪಠ್ಯಕ್ರಮದ ಭಾಗವಾಗಿ ಸೇರಿಸಲಾಗಿದೆ. ಅವರು ಬರೆದಿರುವ ಕವಿತೆ ನಮಾಮಿ ರಾಷ್ಟ್ರಧ್ವಜಂ ಮಹಾರಾಷ್ಟ್ರ ಬೋರ್ಡ್ನ 10ನೇ ತರಗತಿ ಶಾಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿದೆ.
ಅವರ ಕಥೆ ‘ಕಿಮ್ ಈಶ ಮೀ ಪುತ್ರ’ ನಾಗ್ಪುರ ವಿಶ್ವವಿದ್ಯಾಲಯದ ಅಂತಿಮ ವರ್ಷದ ಪದವಿಪೂರ್ವ ವಿದ್ಯಾರ್ಥಿಗಳ ಗದ್ಯ ಭಾಗವಾಗಿ ಸೇರಿಸಲಾಗಿದೆ.
ಪ್ರಸ್ತುತ ಅವರು ದೆಹಲಿಯ ಸಾಹಿತ್ಯ ಅಕಾಡೆಮಿ ಸೂಚನೆಯಂತೆ ಶ್ರೀಧರ್ ವರ್ಣೇಕರ್ ಅವರ ಜೀವನ ಚರಿತ್ರೆ ಕುರಿತು ಬರೆಯುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.