ಬೆಂಗಳೂರು: ರಾಜ್ಯ ಬಿಜೆಪಿಯ ವೈದ್ಯಕೀಯ ಪ್ರಕೋಷ್ಠದ ವತಿಯಿಂದ ಭೂಕಂಪ ಪೀಡಿತ ನೇಪಾಳಕ್ಕೆ ೨೦ ತಜ್ಞ ವೈದ್ಯರ ತಂಡವನ್ನು ಎ.30ರಂದು ಕಳುಹಿಸಿಕೊಡಲಾಗುತ್ತಿದೆ.
ಭೂಕಂಪದಿಂದ ಗಾಯಗೊಂಡ ಜನರಿಗೆ ಅಲ್ಲಿನ ಚಿರಾಯು ಆಸ್ಪತ್ರೆಯಲ್ಲಿ ಈ ತಜ್ಞರ ತಂಡ ಚಿಕಿತ್ಸೆ ನೀಡಲಿದ್ದಾರೆ. ಅಲ್ಲದೇ ಶಸ್ತ್ರಚಿಕಿತ್ಸೆಯನ್ನೂ ನಡೆಸಲಿದ್ದಾರೆ.
ಮೂಳೆ ತಜ್ಞರು, ನರರೋಗ ತಜ್ಞರು, ರಕ್ತನಾಳ ಶಸ್ತ್ರ ಚಿಕಿತ್ಸಕರು, ಪ್ಲಾಸ್ಟಿಕ್ ಸರ್ಜನ್, ಮಕ್ಕಳ ತಜ್ಞರು, ಅರವಳಿಕೆ ತಜ್ಞರು, ತುರ್ತು ಚಿಕಿತ್ಸಕರು ಈ ತಂಡದಲ್ಲಿದ್ದು, 9 ದಿನಗಳ ಕಾಲ ನೇಪಾಳದಲ್ಲಿ ಇದ್ದು ಇವರು ಅಲ್ಲಿನ ಜನರ ಸೇವೆ ಮಾಡಲಿದ್ದಾರೆ.
ಮೈಸೂರಿನ ಬೃಂದಾವನ ಆಸ್ಪತ್ರೆಯ ಮೂಳೆ ರೋಗ ತಜ್ಞರಾದ ಡಾ.ಬಿ.ಎಚ್.ಮಂಜುನಾಥ್ ಈ ತಂಡವನ್ನು ಮುನ್ನಡೆಸಲಿದ್ದಾರೆ.
ಮತ್ತೊಂದು ವೈದ್ಯರ ತಂಡ ಕೂಡ ಸಿದ್ಧವಾಗಿದ್ದು ಕೆಲ ದಿನಗಳಲ್ಲಿ ಅದು ಕೂಡ ಅಲ್ಲಿಗೆ ತೆರಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.