×
Home About Us Advertise With s Contact Us

ಭಾರತದ ಎನ್‌ಎಸ್‌ಜಿ ಸದಸ್ಯತ್ವದ ‘ಸಾಧ್ಯತೆ’ಗಳ ಬಗ್ಗೆ ಚರ್ಚಿಸಲು ಸಿದ್ಧ: ಚೀನಾ

ind-china2
ಬೀಜಿಂಗ್: ಭಾರತದ ನ್ಯೂಕ್ಲಿಯರ್ ಸಪ್ಲಯರ್‍ಸ್ ಗ್ರೂಪ್ (ಎನ್‌ಎಸ್‌ಜಿ)ನ ಪರಿಪೂರ್ಣ ಸದಸ್ಯತ್ವದ ‘ಸಾಧ್ಯತೆ’ಗಳ ಬಗ್ಗೆ ಚರ್ಚಿಸಲು ಸಿದ್ಧರಿದ್ದೇವೆ ಎಂದು ಚೀನಾ ರಾಯಭಾರಿ ಹೇಳಿದ್ದಾರೆ.
ಭಾರತ ಕಳೆದ ತಿಂಗಳು ನಾಗರಿಕ ಪರಮಾಣು ವಹಿವಾಟು ನಡೆಸುವ ೪೮ ರಾಷ್ಟ್ರಗಳ ಗುಂಪಿನಲ್ಲಿ ಸ್ಥಾನ ಪಡೆಯಲು ಚೀನಾ ಜೊತೆ ಸಂಭಾವ್ಯ ಮಾತುಕತೆ ನಡೆಸಿದೆ ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿಯ ಇಂಧನ ಮಾಲಿನ್ಯ ಕಡಿಮೆಯಾಗಿಸಲು ರಷ್ಯಾ, ಫ್ರಾನ್ಸ್, ಅಮೇರಿಕಾದ ಸಹಭಾಗಿತ್ವದಲ್ಲಿ ಪರಮಾಣು ಶಕ್ತಿ ಸ್ಥಾವರ ನಿರ್ಮಿಸಲು ಬಹು ಬಿಲಿಯನ್ ಡಾಲರ್ ಯೋಜನೆಯ ಎನ್‌ಎಸ್‌ಜಿ ಸೇರಲು ಸಕಲ ಪ್ರಯತ್ನ ನಡೆಸುತ್ತಿದ್ದಾರೆ.
೧೯೭೪ರ ಅಣು ಬಾಂಬ್ ಪರೀಕ್ಷೆಯ ಹೊರತಾಗಿ ಚೀನಾ ನಿರಾಕರಣಾಧಿಕಾರವನ್ನು ಹೊಂದಿದ ಕಾರಣ ಒಮ್ಮತದ ಮೂಲಕ ಗುಂಪಿನಲ್ಲಿ ಸ್ಥಾನ ಪಡೆಯಲು ಭಾರತ ವಿಫಲವಾಗಿದೆ.
ಚೀನಾ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ಹೊಸ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಗಾಗಿ ಭಾರತಕ್ಕೆ ಭೇಟು ನೀಡಲಿದ್ದು, ಹೊಸ ಎನ್‌ಎಸ್‌ಜಿ ರಾಷ್ಟ್ರಗಳು ಗುಂಪಿನಲ್ಲಿ ಸ್ಥಾನ ಪಡೆಯಲು ಅಸ್ತಿತ್ವದಲ್ಲಿರುವ ರಾಷ್ಟ್ರಗಳ ಒಪ್ಪಿಗೆ ಪಡೆಯುವ ಅಗತ್ಯವಿದೆ ಎಂದು ಚೀನಾ ವಿದೇಶಾಂಗ ಸಚಿವ ಲಿ ಬೋಡಾಂಗ್ ಹೇಳಿದ್ದಾರೆ.

ಈ ನಿಯಮಗಳನ್ನು ಚೀನಾ ರಚಿಸಿಲ್ಲ. ಎನ್‌ಎಸ್‌ಜಿ ಸೇರುವ ಬಗ್ಗೆ ಭಾರತ ಮತ್ತು ಚೀನಾ ಉತ್ತಮ ಸಂಪರ್ಕ ಹೊಂದಿವೆ. ಭಾರತದೊಂದಿಗೆ ಸಂವಹನ ನಡೆಸಿ ಎನ್‌ಎಸ್‌ಜಿಗೆ ಭಾರತದ ಒಮ್ಮತ ಹೆಚ್ಚಿಸಲು ಚೀನಾ ಬಯಸಿದೆ. ಆದರೆ ಇದಕ್ಕೆ ಎನ್‌ಎಸ್‌ಜಿ ಚಾರ್ಟರ್ ಪ್ರಕಾರ ನಡೆಯಬೇಕಿದ್ದು, ನಿಯಮಗಳನ್ನು ಗೌರವಿಸಬೇಕಿದೆ ಎಂದು ಅವರು ಹೇಳಿದ್ದಾರೆ.

 

Recent News

Back To Top
error: Content is protected !!