×
Home About Us Advertise With s Contact Us

‘PRAGATI’ಗೆ ಚಾಲನೆ ನೀಡಿದ ಮೋದಿ

pragathiನವದೆಹಲಿ: ಸಾರ್ವಜನಿಕರ ಕುಂದುಕೊರತೆಗಳ ಪರಿಹಾರ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿಸುವ ಮೂಲಕ ಆಡಳಿತವನ್ನು ದಕ್ಷ ಮತ್ತು ಕ್ರಿಯಾಶೀಲಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಬಹು ಉಪಯೋಗಿ ಮತ್ತು ಬಹುಮಾದರಿ ವೇದಿಕೆ PRAGATI (Pro-Active Governance And Timely Implementation)ಗೆ ಚಾಲನೆ ನೀಡಿದರು

PRAGATI ಅನನ್ಯ ಸಂಯೋಜಕ ಮತ್ತು ಪರಸ್ಪರ ಸಂವಾದಿಸುವ ವೇದಿಕೆಯಾಗಿದ್ದು, ಸಾರ್ವಜನಿಕರ ಕುಂದುಕೊರತೆಗಳಿಗೆ ಶೀಘ್ರ ಪರಿಹಾರ ನೀಡುವ ಗುರಿಯನ್ನು ಇಟ್ಟುಕೊಂಡಿದೆ. ಅಲ್ಲದೇ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಆರಂಭಿಸಿರುವ ಪ್ರಮುಖ ಯೋಜನೆಗಳನ್ನು ಮತ್ತು ಕಾರ್ಯಗಳನ್ನು ಪರಿಶೀಲಿಸುವ ಮತ್ತು ಮೇಲ್ವಿಚಾರಣೆ ಮಾಡುವ ಕಾರ್ಯವನ್ನೂ ನಿರಂತರವಾಗಿ ಮಾಡಲಿದೆ.

ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವಲ್ಲಿ ಕೇಂದ್ರ ಮಾಡುತ್ತಿರುವ ಪ್ರಯತ್ನಕ್ಕೆ PRAGATI ಸಾಕಷ್ಟು ಕೊಡುಗೆ ನೀಡಲಿದೆ.

ಈ ವೇಳೆ ಮಾತನಾಡಿದ ಮೋದಿ ‘ಇಡೀ ಜಗತ್ತೇ ಈಗ ಭಾರತದತ್ತ ನೋಡುತ್ತಿದೆ, ಹೀಗಾಗಿ ಭಾರತ ಆಡಳಿತ ದಕ್ಷ ಮತ್ತು ಹೊಣೆಗಾರಿಕೆಯನ್ನು ಹೊಂದಿರುವುದು ಅತ್ಯವಶ್ಯಕವಾಗಿದೆ, ಈ ನಿಟ್ಟಿನಲ್ಲಿ PRAGATI ಮಹತ್ವದ ಹೆಜ್ಜೆಯನ್ನಿಡಲಿದೆ’ ಎಂದರು.

Tags: ,

 

Recent News

Pungava 01-10-2018
23 hours ago  
Back To Top
error: Content is protected !!