ಲಕ್ನೋ : ಚಹಾ, ನೀರು ಇತ್ಯಾದಿ ರಿಫ್ರೆಶ್ಮೆಂಟ್ಗಳಿಗಾಗಿ ತನ್ನ ಸಚಿವರುಗಳು 4 ವರ್ಷದಲ್ಲಿ 9 ಕೋಟಿ ರೂ.ಗಳನ್ನು ವ್ಯಯಿಸಿದ್ದಾರೆಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ.
ಈ ಬಗ್ಗೆ ಯುಪಿ ವಿಧಾನಸಭೆಯಲ್ಲಿ ಲಿಖಿತ ಪ್ರತಿಕ್ರಿಯೆ ನೀಡಿರುವ ಸಿಎಂ ಅಖಿಲೇಶ್ ಯಾದವ್ 72 ಸಚಿವರುಗಳು 2012 ರಿಂದ 2016 ರ ನಡುವೆ ಅಧಿಕೃತ ಪ್ರವಾಸದ ವೇಳೆ ಆಹಾರ ಮತ್ತು ಇತರ ಆಕಸ್ಮಿಕ ವೆಚ್ಚಗಳಿಗಾಗಿ ತಮ್ಮ ಪಾಕೆಟ್ ಮನಿಯಿಂದ ಖರ್ಚಾದ ೮.೭೨ ಕೋಟಿ ರೂ.ಗಳ ಮರುಪಾವತಿಗಾಗಿ ಬೇಡಿಕೆ ಇಟ್ಟಿದ್ದಾರೆ ಎಂದಿದ್ದಾರೆ.
ಯುಪಿ ಒಳಗೆ ಪ್ರವಾಸ ಕೈಗೊಂಡರೆ ದಿನಕ್ಕೆ 2,500 ರೂ. ಮತ್ತು ರಾಜ್ಯದ ಹೊರಗೆ ಪ್ರವಾಸ ಕೈಗೊಂಡರೆ ದಿನಕ್ಕೆ 3,000 ರೂ. ಭತ್ಯೆಯನ್ನು ಸಚಿವರುಗಳಿಗಾಗಿ ನೀಡಲಾಗುತ್ತದೆ.
ವಾಸ್ತವವಾಗಿ ಇವರುಗಳು ಈ ಹಣವನ್ನು ತಮ್ಮ ವೈಯಕ್ತಿಕ ಭೇಟಿದಾರರಿಗೆ, ಬೆಂಬಲಿಗರಿಗೆ ತಿನ್ನಿಸುವುದಕ್ಕೆ ವ್ಯಯಿಸುತ್ತಾರೆ.
ಈ ಖರ್ಚಾದ ಹಣದ ಬಗ್ಗೆ ಯಾವುದೇ ಓಚರ್ ಅಥವಾ ಸಾಕ್ಷಿಗಳನ್ನು ತೋರಿಸದೆ ಮರುಪಾವತಿಗೆ ಬೇಡಿಕೆ ಇಡುತ್ತಿದ್ದಾರೆ.
ಸಮಾಜವಾದಿ ಸಚಿವರುಗಳ ಈ ವರ್ತನೆಯನ್ನು ಬಿಜೆಪಿ ಮತ್ತು ಇತರ ಪಕ್ಷಗಳು ತೀವ್ರವಾಗಿ ಖಂಡಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.