ನವದೆಹಲಿ : ಪಠಾಣ್ಕೋಟ್ ಮೇಲೆ ನಡೆದ ದಾಳಿಯ ಮಾದರಿ ಮತ್ತೆ ದೇಶದಲ್ಲಿ ದಾಳಿಗಳು ಆಗದಂತೆ ತಡೆಯುವ ಸಲುವಾಗಿ ತಂತ್ರಜ್ಞಾನಗಳು, ಲೇಸರ್ ವಾಲ್ಗಳನ್ನು ಮತ್ತು ನದಿಗಳ ಸುತ್ತ ಕಣ್ಗಾವಲುಗಳನ್ನು ಹೆಚ್ಚಿಸುವಂತೆ ಮಾಜಿ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತಾ ಅವರನ್ನೊಳಗೊಂಡ ಪರಿಶೀಲನಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.
ಪಠಾಣ್ಕೋಟ್ ದಾಳಿಯ ಹಿನ್ನಲೆಯಲ್ಲಿ ಪಾಕಿಸ್ಥಾನ-ಭಾರತ ಗಡಿಯ ಸಮೀಪ ಭದ್ರತಾ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಗುಪ್ತ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು.
ಗಡಿಯ ಭದ್ರತೆಗೆ ವೈಜ್ಞಾನಿಕ ವಿಧಾನವನ್ನು ಅಳವಡಿಸುವಂತೆ ಸಮಿತಿ ಸಲಹೆ ನೀಡಿದೆ. ಅಲ್ಲದೆ ಪಾಕ್ನೊಂದಿಗೆ ಗಡಿ ಹಂಚಿಕೊಂಡಿರುವ 4 ರಾಜ್ಯಗಳಿಗೂ ಪ್ರತ್ಯೇಕ ಶಿಫಾರಸ್ಸುಗಳನ್ನು ಸಮಿತಿ ನೀಡಿದೆ.
ಒಳನುಸುಳುವಿಕೆ ಹೆಚ್ಚಾಗಿರುವ ಭಾಗಗಳಲ್ಲಿ ಲೇಸರ್ ವಾಲ್ಗಳನ್ನು ಅಳವಡಿಸದಿರುವುದಕ್ಕೆ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಜನವರಿಯಲ್ಲಿ ಪಠಾಣ್ಕೋಟ್ ದಾಳಿ ನಡೆದ 3 ತಿಂಗಳ ಬಳಿಕ ಈ ಸಮಿತಿಯನ್ನು ರಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.