ನವದೆಹಲಿ : ರಿಯೋ ಒಲಿಂಪಿಕ್ಸ್ಗೆ ಭಾರತ ಒಟ್ಟು 118 ಅಥ್ಲೀಟ್ಸ್ಗಳನ್ನು ಕಳುಹಿಸಿ ಕೊಟ್ಟಿತ್ತು. ಆದರೆ ಸಿಕ್ಕಿದ್ದು 1 ಬೆಳ್ಳಿ ಮತ್ತು 1 ಕಂಚು ಪದಕ ಮಾತ್ರ.
ಹೀಗಾಗಿ ಮುಂಬರುವ ಒಲಿಂಪಿಕ್ಸ್ಗಳಲ್ಲಿ ಭಾರತ ಮಹತ್ತರದ ಸಾಧನೆ ಮಾಡಲಿ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಟಾರ್ಸ್ಕ್ ಫೋರ್ಸ್ನ್ನು ರಚನೆ ಮಾಡಲು ಮುಂದಾಗಿದ್ದಾರೆ.
ಮುಂದಿನ 3 ಒಲಿಂಪಿಕ್ಸ್ಗಳಿಗೆ ಅನ್ವಯವಾಗುವಂತೆ ಟಾಸ್ಕ್ ಫೋರ್ಸ್ ರಚನೆಯಾಗಲಿದೆ.
ಒಲಿಂಪಿಕ್ಸ್ಗೆ ಬೇಕಾದ ಎಲ್ಲಾ ಆಕ್ಷನ್ ಪ್ಲಾನ್ಗಳನ್ನು ಸಿದ್ಧಪಡಿಸಿಕೊಳ್ಳುವ ಸಲುವಾಗಿ ಇನ್ನು ಕೆಲವೇ ದಿನಗಳಲ್ಲಿ ಟಾಸ್ಕ್ ಫೋರ್ಸ್ನ್ನು ರಚನೆ ಮಾಡಲಾಗುತ್ತದೆ ಎಂದು ಮೋದಿ ಘೋಷಿಸಿದ್ದಾರೆ.
ದೇಶ ವಿದೇಶಗಳ ಕ್ರೀಡಾ ತಜ್ಞರು ಈ ಟಾಸ್ಕ್ ಫೋರ್ಸ್ನಲ್ಲಿರಲಿದ್ದು 2020 ರ ಟೋಕಿಯೋ ಒಲಿಂಪಿಕ್, 2024, 2028 ರ ಒಲಿಂಪಿಕ್ಸ್ಗೆ ಬೇಕಾದ ಕ್ರೀಡಾ ಸೌಲಭ್ಯ, ತರಬೇತಿ, ಅಥ್ಲೀಟ್ಗಳ ಆಯ್ಕೆಗೆ ಬೇಕಾದ ಸ್ಟ್ರಾಟೆಜಿಗಳನ್ನು ಇದು ರೂಪಿಸಲಿದೆ.
ದೇಶದ ಕ್ರೀಡಾಳುಗಳಿಗೆ ಕಳಪೆ ಸೌಲಭ್ಯ, ತರಬೇತಿಯನ್ನು ನೀಡಲಾಗಿದೆ ಎಂಬುದು ನಮ್ಮ ಆಟಗಾರರು ರಿಯೋದಲ್ಲಿ ನೀಡಿದ ಪ್ರದರ್ಶನದಿಂದಲೇ ತಿಳಿದು ಬಂದಿದೆ. ಹೀಗಾಗಿ ಮುಂಬರುವ ಒಲಿಂಪಿಕ್ಸ್ನಲ್ಲಿ ಕ್ರೀಡಾಳುಗಳ ಪ್ರದರ್ಶನವನ್ನು ಉತ್ತಮಪಡಿಸುವ ದೃಷ್ಟಿಯಿಂದ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.