ಶ್ರೀನಗರ: ಕಠ್ಮಂಡುವಿನ ಸುದಿಪ್ತೊ ಪಾಲ್ ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಉದ್ದೇಶಕ್ಕಾಗಿ 2,500 ಕಿ.ಮೀ. ಸೈಕಲ್ ರೈಡ್ ಮಾಡಿದ್ದಾರೆ.
ಭೂಕುಸಿತ ಮತ್ತು ಧಾರಾಕಾರ ಮಳೆಗೆ ಸಿಲುಕಿದ್ದ ಸುದಿಪ್ತೊ ಪಾಲ್, ‘ಹೋಪ್ ಫಾರ್ ದ ಬೆಸ್ಟ್ ಎಂಡ್ ಪ್ಲಾನ್ ಫಾರ್ ದ ವರ್ಸ್ಟ್’ ಎಂಬ ಬಲವಾದ ನಂಬಿಕೆಯೊಂದಿಗೆ ತಮ್ಮ ಸೈಕಲ್ ರೈಡ್ ಆರಂಭಿಸಿದ್ದರು.
ಶ್ರೀನಗರದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಶ್ರೀನಗರದ ಬದಲು ಕಿಶ್ತವಾರ್ನಿಂದ ತನ್ನ ಪಯಣ ಆರಣಭಿಸಿದ ಪಾಲ್, ಕಾಜಾ-ತಬೋ-ಬಾತಾಲ್-ಚಂದ್ರತಾಲ್-ಕೀಲಾಂಗ್ ತಿಯೋಗ್ ಸರ್ಕ್ಯೂಟ್ ಮೂಲಕ ಪಾಂಗಿ ಕಣಿವೆ, ಲಾಹೌಲ್-ಸ್ಪಿತಿ ಕಣಿವೆ ಸೇರಿ ಉತ್ತರಾಖಂಡ್ ತಲುಪಿದ್ದರು.
ಹಿಮಾಲಯಗಳ ಮೂಲಕ ಹವಲಾರು ಮಂದಿ ಸೈಕಲ್ ಸವಾರಿ ಮಾಡಿದ್ದಾರೆ. ಆದರೆ ಮೂರು ದೇಶಗಳ ಮೂಲಕ ಕಾಶ್ಮೀರದಿಂದ ಅರುಚಾಲ ಪ್ರದೇಶದ ವರೆಗೆ 5000 ಕಿ.ಮೀ. ಏಕಾಂಗಿಯಾಗಿ, ಅನುದಾನರಹಿತ ಸವಾರಿ ನಡೆಸಿರುವುದು ಇದೇ ಮೊದಲು.
ಅಲ್ಲದೇ ಈ ಪ್ರಯಾಣ ಕೇವಲ ಹಿಮಾಲಯಗಳಲ್ಲಿ ಸೈಕಲ್ ಸವಾರಿ ನಡೆಸುವುದು ಮಾತ್ರವಲ್ಲ. ಇದು ಅಲ್ಲಿಯ ಸಂಸ್ಕೃತಿ ಮತ್ತು ಜೀವನಶೈಲಿ ಅರ್ಥ ಮಾಡಿಕೊಳ್ಳುವುದು, ಜನರೊಂದಿಗೆ ಸ್ನೇಹ ಸಂಬಂಧ ಬೆಳೆಸುವುದು ಇದರ ಉದ್ದೇಶವಾಗಿತ್ತು.
ಸುದಿಪ್ತೋ ಪಾಲ್ ಹಿಮಾಲಯಗಳಲ್ಲಿ ಪ್ರಯಣಿಸುವುದು ಇದೇ ಮೊದಲಲ್ಲ. ಅವರು ಕಳೆದ 15 ವರ್ಷಗಳಿಂದ ಸೈಕಲ್ ರೈಡ್ ಮಾಡುತ್ತಲೇ ಬಂದಿದ್ದಾರೆ.
ಚೈಲ್ಡ್ ರೈಟ್ಸ್ ಎಂಡ್ ಯೂ (ಕ್ರೈ) ನಡೆಸುತ್ತಿರುವ ‘ಸ್ಕೂಲ್ ದ ಸ್ಪಾರ್ಕ್’ ರಾಷ್ಟ್ರೀಯ ಅಭಿಯಾನ ಮಕ್ಕಳ ಶಿಕ್ಷಣದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಈ ಅಭಿಯಾನ ಮುಂದಿನ ಆರು ತಿಂಗಳಳ ಕಾಲ ಮೂರು ಹಂತಗಳಲ್ಲಿ ನಡೆಯುತ್ತಿದ್ದು, ಇದು ಮಕ್ಕಳು ತಮ್ಮ ಶಿಕ್ಷಣ ಮತ್ತು ಮೂಲಭೂತ ಹಕ್ಕುಗಳನ್ನು ಪಡೆಯಲು ಎದುರಿಸುತ್ತಿರುವ ಸವಾಲುಗಳನ್ನು ಕೇಂದ್ರೀಕರಿಸುತ್ತದೆ.
ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಕ್ರೈ ಸಂಸ್ಥೆ ದೇಶದಾದ್ಯಂತ ತನ್ನ ಸಂಪರ್ಕ ಹೊಂದಿದ್ದು, 2.5 ಲಕ್ಷ ಮಕ್ಕಳ ಜೀವನದ ಮೇಲೆ ತನ್ನ ಪ್ರಭಾವ ಬೀರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.