ನವದೆಹಲಿ : ಇಂಡಿಯನ್ ಏರ್ಸ್ಪೇಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ವೈ-ಫೈ ಸೇವೆಯನ್ನು ಶೀಘ್ರದಲ್ಲೇ ಬಳಸುವ ಅವಕಾಶವನ್ನು ಪಡೆಯಲಿದ್ದಾರೆ. ಈ ಬಗೆಗಿನ ಅಂತಿಮ ನಿರ್ಧಾರವನ್ನು ಶೀಘ್ರದಲ್ಲೇ ಕೈಗೊಳ್ಳುವ ಸೂಚನೆಯನ್ನು ಕೇಂದ್ರ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಗರಿಕ ವಿಮಾನಯಾನ ಕಾರ್ಯದರ್ಶಿ ಆರ್. ಎನ್. ಚೌಧರಿ ಅವರು ಹತ್ತು ದಿನದೊಳಗೆ ಈ ಕುರಿತು ಸಿಹಿ ಸುದ್ದಿಯನ್ನು ನಾನು ನೀಡಲಿದ್ದೇನೆ ಎಂದಿದ್ದಾರೆ.
ಪ್ರಸ್ತುತ ಇಂಡಿಯಾ ಏರ್ಸ್ಪೇಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮೊಬೈಲ್ ಫೋನ್, ಇಂಟರ್ನೆಟ್ ಬಳಸಲು ಅವಕಾಶವಿಲ್ಲ.
ವಿಮಾನದಲ್ಲಿ ವೈ-ಫೈ ಅಳವಡಿಕೆಯಿಂದ ಭದ್ರತಾ ಸವಾಲು ಎದುರಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ವಾಯ್ಸ್ ಮತ್ತು ಡಾಟಾವನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯ ಇಲ್ಲಿ ಅತಿ ಮುಖ್ಯವಾಗಿರುತ್ತದೆ ಎಂದಿದ್ದಾರೆ. ಅಲ್ಲದೆ ಏಜೆನ್ಸಿಗಳು ಡೀಟೆಲ್ಸ್ಗಳನ್ನು ಕಲೆಹಾಕುವುದು ಅತ್ಯಗತ್ಯ. ಅಗತ್ಯ ಬಿದ್ದಾಗ ಇವುಗಳನ್ನು ಟ್ರ್ಯಾಕ್ ಕೂಡಾ ಮಾಡಬಹುದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.