ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಉಗ್ರವಾದದಿಂದ ಸಂತ್ರಸ್ತರಾದ ನಾಗರೀಕರಿಗೆ ಪರಿಹಾರವನ್ನು ಘೋಷಣೆ ಮಾಡಿದೆ. ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದ ಜನತೆಯೂ ಈ ಪರಿಹಾರಕ್ಕೆ ಅರ್ಜಿ ಹಾಕಬಹುದು ಎಂದಿದೆ. ಈ ಮೂಲಕ ಪಾಕ್ಗೆ ಮತ್ತೊಂದು ದೊಡ್ಡ ಶಾಕ್ ನೀಡಿದೆ.
ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪಿಒಕೆ, ಬಲೂಚಿಸ್ಥಾನ, ಗಿಲ್ಗಿಟ್ನಲ್ಲಿನ ಹೋರಾಟಕ್ಕೆ ಮೋದಿ ಬೆಂಬಲ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಪಿಎಂಒದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಅವರು ಉಗ್ರವಾದದಿಂದ ಸಂತ್ರಸ್ತರಾದವರಿಗೆ ಪರಿಹಾರವನ್ನು ಘೋಷಣೆ ಮಾಡಿದ್ದು, ಪಿಒಕೆ ಮತ್ತು ಕಾಶ್ಮೀರಿಗಳು ಭಾರತದ ಬಹು ಮುಖ್ಯ ಭಾಗ. ಹೀಗಾಗಿ ಅವರು ಈ ಪರಿಹಾರಕ್ಕೆ ಅರ್ಜಿ ಹಾಕಬಹುದು ಎಂದಿದ್ದಾರೆ.
ಭಾರತದ ಸಂವಿಧಾನದ ಪ್ರಕಾರ ಈ ನಿಯಮಗಳು ಪಾಕ್ ವಶಪಡಿಸಿಕೊಂಡಿರುವ ಭಾರತದ ಭಾಗಕ್ಕೂ ಅನ್ವಯವಾಗುತ್ತದೆ ಎಂದಿದ್ದಾರೆ.
ಉಗ್ರವಾದ/ ಕೋಮುವಾದ/ಎಡಪಂಥೀಯ/ಗಡಿಯಲ್ಲಿ ಗುಂಡಿನ ಕಾದಾಟ, ಭಾರತದ ಭಾಗದಲ್ಲಿ ಮೈನ್, ಎಲ್ಇಡಿ, ಐಇಡಿ ಸ್ಫೋಟದಲ್ಲಿ ಸಂತ್ರಸ್ತರಾದ ನಾಗರೀಕರಿಗೆ ಕೇಂದ್ರದ ನೆರವು ಯೋಜನೆಯಡಿ ಪರಿಹಾರವನ್ನು ನೀಡಲು ನಿರ್ಧರಿಸಲಾಗಿದ್ದು ಇದಕ್ಕೆ ಮೋದಿ ನೇತೃತ್ವದಲ್ಲಿ ಕೇಂದ್ರ ಸಂಪುಟ ಅನುಮತಿ ನೀಡಿದೆ.
ಪರಿಹಾರ ಧನವನ್ನು 3 ಲಕ್ಷದಿಂದ 5 ಲಕ್ಷಕ್ಕೇರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.