ಹೈದರಾಬಾದ್ : ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರಿಗೆ ವಿದೇಶೀ ಕೋಚ್ನ್ನು ನೇಮಿಸಿ ಕೊಡುವುದಾಗಿ ತೆಲಂಗಾಣ ಕ್ರೀಡಾ ಸಚಿವ ಮಹಮ್ಮದ್ ಅಲಿ ಹೇಳಿದ್ದಾರೆ. ಆದರೆ ಅವರ ಈ ಆಫರ್ನ್ನು ಸಿಂಧು ತಿರಸ್ಕರಿಸಿದ್ದಾರೆ.
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಸಿಂಧು, ನನಗೆ ಗೋಪಿಚಂದ್ ಅವರೇ ಅತ್ಯುತ್ತಮ ಕೋಚ್ ಎಂದಿದ್ದಾರೆ. ಅಲ್ಲದೆ ಸಚಿವರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
ಮುಂದಿನ ಬಾರಿ ಸಿಂಧು ಅವರು ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲಲಿ ಎಂಬ ಕಾರಣಕ್ಕೆ ಅವರಿಗೆ ವಿದೇಶಿ ಕೋಚ್ ಒಬ್ಬರನ್ನು ನೇಮಿಸಲು ನಿರ್ಧರಿಸಿದ್ದೇವೆ ಎಂದು ಅಲಿ ಹೇಳಿದ್ದರು.
ಆದರೆ ಇದೀಗ ಸಿಂಧು ಅವರೇ ವಿದೇಶಿ ಕೋಚ್ ಆಫರ್ನ್ನು ತಿರಸ್ಕರಿಸಿದ್ದು ಗೋಪಿಚಂದ್ ಅವರನ್ನೇ ಭವಿಷ್ಯದಲ್ಲೂ ತಮ್ಮ ಕೋಚ್ನ್ನಾಗಿ ಮುಂದುವರೆಸಲು ಮುಂದಾಗಿದ್ದಾರೆ.
ರಿಯೋ ಒಲಿಂಪಿಕ್ಸ್ನಲ್ಲಿ ಫೈನಲ್ ಪಂದ್ಯದಲ್ಲಿ ಸೋತ ಸಿಂಧು, ಬೆಳ್ಳಿ ಪದಕವನ್ನು ಗೆದ್ದು ಬಂದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.