ನವದೆಹಲಿ : ಶ್ರೀಕೃಷ್ಣಜನ್ಮಾಷ್ಟಮಿಯನ್ನು ದೇಶದ ವಿವಿಧೆಡೆ ಭಾರೀ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಹಲವಾರು ಗಣ್ಯರು ಜನರಿಗೆ ಶುಭ ಕೋರಿದ್ದಾರೆ.
ಟ್ವೀಟ್ ಮಾಡಿರುವ ಮೋದಿ, ‘ಎಲ್ಲರಿಗೂ ಜನ್ಮಾಷ್ಟಮಿಯ ಶುಭಕಾಮನೆಗಳು’ ಎಂದಿದ್ದಾರೆ.
ರಾಷ್ಟ್ರಪತಿಯವರು ‘ಶ್ರೀಕೃಷ್ಣನ ಜೀವನ ಮತ್ತು ಬೋಧನೆ ಯಾವುದೇ ಫಲಾಪೇಕ್ಷೆ ಇಲ್ಲದೆ ಕರ್ತವ್ಯ ಮಾಡಬೇಕು ಎಂಬುದನ್ನು ಸಾರುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೊಂದೆಡೆ ಶ್ರೀಕೃಷ್ಣನ ಜನ್ಮಸ್ಥಾನ ಮಥುರಾದಲ್ಲಿ ಸಂಭ್ರಮ, ಸಡಗರ ಮನೆಮಾಡಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ಇಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ದೇಗುಲದ ಸುತ್ತಮುತ್ತ 160 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. 13 ಪಿಎಸಿ ಪಡೆ, 4 ಸಿಆರ್ಪಿಎಫ್ ತಂಡ, 1500 ಪೊಲೀಸರು, 100 ಹೋಂಗಾರ್ಡ್ಗಳನ್ನು ಭದ್ರತಾ ದೃಷ್ಟಿಯಿಂದ ನಿಯೋಜನೆ ಮಾಡಲಾಗಿದೆ.
ಭದ್ರತೆಯ ಕಾರಣಕ್ಕಾಗಿ ಕೃಷ್ಣನ ಜನ್ಮಸ್ಥಾನವನ್ನು 3 ಝೋನ್ ಮತ್ತು 14 ಸೆಕ್ಟರ್ಗಳಾಗಿ ವಿಭಜಿಸಲಾಗಿದೆ. 57 ಬ್ಯಾರಿಯರ್, 16 ವಾಚ್ಟವರ್ಗಳನ್ನು ಸ್ಥಾಪಿಸಲಾಗಿದೆ.
ಎಂಟ್ರಿ ಮತ್ತು ಎಕ್ಸಿಟ್ಗಳನ್ನು ವೈದ್ಯಕೀಯ ಉಪಚಾರ ವ್ಯವಸ್ಥೆಯನ್ನಿಡಲಾಗಿದೆ. ಸೂಕ್ತ ಪರಿಶೀಲನೆಯ ಬಳಿಕವೇ ಪ್ರತಿಯೊಬ್ಬರನ್ನು ದೇಗುಲದೊಳಕ್ಕೆ ಬಿಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.