ಹರಿಯಾಣ : ರಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿರುವ ಮಹಿಳಾ ಕುಸ್ತಿ ಪಟು ಸಾಕ್ಷಿ ಮಲಿಕ್ ಅವರು ತವರಿಗೆ ವಾಪಾಸ್ಸಾಗಿದ್ದು ದೆಹಲಿಯ ಇಂದಿರಾಗಾಂಧಿ ಏರ್ಪೋರ್ಟ್ನಲ್ಲಿ ಅದ್ಧೂರಿ ಸ್ವಾಗತವನ್ನು ಕೋರಲಾಗಿದೆ.
ಬಳಿಕ ಹರಿಯಾಣಕ್ಕೆ ತೆರಳಿರುವ ಅವರಿಗೆ ಅಲ್ಲಿನ ಸಿಎಂ ಮನೋಹರ್ ಲಾಲ್ ಕಟ್ಟರ್ ಅವರು ಸನ್ಮಾನ ಏರ್ಪಡಿಸಿದ್ದರು. ಅಲ್ಲದೆ ಆಕೆಯನ್ನು ತನ್ನ ರಾಜ್ಯದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ರಾಯಭಾರಿಯಾಗಿ ಘೋಷಿಸಿದ್ದಾರೆ.
ಈ ಬಳಿಕ ಮಾತನಾಡಿದ ಸಾಕ್ಷಿ, ಒಲಿಂಪಿಕ್ಸ್ನಲ್ಲಿ ಭಾರತಕ್ಕಾಗಿ ಪದಕ ಗೆಲ್ಲುವುದು ನನ್ನ ಕನಸಾಗಿತ್ತು. ಅದಕ್ಕಾಗಿ ೧೨ ವರ್ಷಗಳಿಂದ ಸತತ ಪರಿಶ್ರಮ ಪಟ್ಟಿದ್ದೇನೆ. ಸಹಕಾರ, ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ಭವಿಷ್ಯದಲ್ಲೂ ಈ ಸಹಕಾರ ಮುಂದುವರೆಯುತ್ತದೆ ಎಂದು ನಂಬಿದ್ದೇನೆ ಎಂದು ಹೇಳಿದ್ದಾರೆ.
ಪದಕ ಗೆದ್ದ ಸಾಕ್ಷಿಗೆ ಹರಿಯಾಣ ಸರ್ಕಾರ 2.5 ಕೋಟಿ ರೂ. ಗಳನ್ನು ಘೋಷಿಸಿದೆ.
ಆಕೆಯ ಸ್ವಗ್ರಾಮ ರೋಹಟಕ್ನಲ್ಲಿ ಭಾರತದ ಧ್ವಜ ಹಾಗೂ ಆಕೆಯ ಪೋಸ್ಟರ್ ಹಿಡಿದು ನಿಂತಿದ್ದ ಜನ ಆಕೆಗೆ ಅದ್ಧೂರಿ ಸ್ವಾಗತವನ್ನು ಕೋರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.