ಲಕ್ನೋ : 2017 ರಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣಾ ಪ್ರಚಾರದ ಸಂದರ್ಭ ಡ್ಯಾನ್ಸ್ ಮಾಡಿಸಲು ಹೆಣ್ಣು ಮಕ್ಕಳಿಗೆ ಭಾರೀ ಬೇಡಿಕೆ ಬರಲಿದೆ.
ಮನೋರಂಜನೆಗಾಗಿ ಡ್ಯಾನ್ಸ್ ಮಾಡಿಸುವ ಸಲುವಾಗಿ ಬೇರೆ ರಾಜ್ಯಗಳಿಂದ ಹೆಣ್ಣು ಮಕ್ಕಳನ್ನು ಕಳ್ಳಸಾಗಣೆಯ ಮೂಲಕ ಉತ್ತರಪ್ರದೇಶಕ್ಕೆ ಕರೆತರುವ ದಂಧೆ ಆರಂಭವಾಗಿದೆ.
ಛತ್ತೀಸ್ಗಢದಿಂದ ಕಳ್ಳಸಾಗಣೆ ಮೂಲಕ ಕರೆತರಲಾಗಿದ್ದ 32 ಹೆಣ್ಣು ಮಕ್ಕಳನ್ನು ಇತ್ತೀಚೆಗೆ ಅಲಹಾಬಾದ್ನಲ್ಲಿ ರಕ್ಷಣೆ ಮಾಡಲಾಗಿದೆ. ಈ ಘಟನೆ ಭಾರೀ ಆತಂಕವನ್ನು ಸೃಷ್ಟಿಸಿದ್ದು, ಹೆಣ್ಣು ಮಕ್ಕಳ ಕಳ್ಳ ಸಾಗಣೆ ಬಗ್ಗೆ ಕಣ್ಣು ತೆರೆಸಿದೆ.
ಯುಪಿ, ಬಿಹಾರದಂತಹ ರಾಜ್ಯಗಳಲ್ಲಿ ಚುನಾವಣೆಯ ಪ್ರಚಾರ ಕಾರ್ಯದ ಸಂದರ್ಭ ಜನರಿಗೆ ಮನೋರಂಜನೆ ನೀಡಲು ಹೆಣ್ಣು ಮಕ್ಕಳಿಂದ ನೃತ್ಯ ಮಾಡಿಸುವುದು ಸಾಮಾನ್ಯವಾಗಿದೆ. ಇದಕ್ಕಾಗಿ ಮುಂಬೈಯ ಪರವಾನಗಿ ಹೊಂದಿದ ಬಾರ್ಗಳಿಂದ ಡಾನ್ಸ್ಗರ್ಲ್ಸ್ಗಳನ್ನು ಕರೆತರಲಾಗುತ್ತದೆ.
ಆದರೆ ಇದೀಗ ಕಳ್ಳ ಸಾಗಣೆ ಮೂಲಕ ಅಮಾಯಕ ಹೆಣ್ಣು ಮಕ್ಕಳನ್ನು ಕರೆತರುತ್ತಿರುವುದಲ್ಲದೆ, ಅವರಿಗೆ ವೇತನ, ಊಟ, ವಸತಿಯನ್ನು ನೀಡದೆ ದೌರ್ಜನ್ಯ ಎಸಗುತ್ತಿರುವ ಘಟನೆ ಅಲ್ಲಿ ಕಂಡು ಬರುತ್ತಿದೆ.
ಹೆಣ್ಣು ಮಕ್ಕಳ ಸಾಗಣೆ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಶಕ್ತಿವಾಹಿನಿ ಎಂಬ ಎನ್ಜಿಒ ಮುಖಂಡ ರಿಷಿಕಾಂತ್ ಎಂಬುವವರು ಚುನಾವಣಾ ಪ್ರಚಾರದ ವೇಳೆ ಇಂತಹ ಡ್ಯಾನ್ಸ್ ಶೋಗಳಿಗೆ ನಿರ್ಬಂಧ ಹಾಕುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.