ನವದೆಹಲಿ : ಪತಂಜಲಿ ಸಂಸ್ಥೆಗೆ ಮುಂದಿನ 5 ವರ್ಷದಲ್ಲಿ ಶೇ. 100 ರಿಂದ ಶೇ. 200 ರಷ್ಟು ಪ್ರಗತಿ ಕಾಣುವುದು ಅತಿ ಚಿಕ್ಕ ವಿಷಯ, ಗುರಿಯನ್ನು ತಲುಪಿ ಶೇ. 100 ರಿಂದ 200 ರಷ್ಟು ಪ್ರಗತಿಯನ್ನು ಸಾಧಿಸುತ್ತೇವೆ ಎಂಬುದಾಗಿ ಅದರ ಮುಖ್ಯಸ್ಥ, ಯೋಗಗುರು ಬಾಬಾ ರಾಮ್ದೇವ್ ಹೇಳಿದ್ದಾರೆ.
ಮಹತ್ವಾಕಾಂಕ್ಷಿಯ ಪ್ರಗತಿಯ ಗುರಿಯನ್ನು ತಲುಪುವುದಕ್ಕಾಗಿ ಹಂಚಿಕೆ ವ್ಯವಸ್ಥೆ ಮತ್ತು ಸಾಗಾಣೆ ಸರಪಳಿಯನ್ನು ಬಲಿಷ್ಠಗೊಳಿಸುತ್ತಿದ್ದೇವೆ ಎಂಬುದಾಗಿ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
2006 ರಲ್ಲಿ ಬಾಬಾ ರಾಮ್ದೇವ್ ಮತ್ತು ಬಾಲಕೃಷ್ಣ ಅವರು ಪತಂಜಲಿಯನ್ನು ಸ್ಥಾಪಿಸಿದರು, ಆಧುನಿಕ ಬೇಡಿಕೆ ಮತ್ತು ತಂತ್ರಜ್ಞಾನದೊಂದಿಗೆ ಆಯುರ್ವೇದ ವಿಜ್ಞಾನವನ್ನು ಸ್ಥಾಪಿಸುವ ಉದ್ದೇಶದೊಂದಿಗೆ ಇದನ್ನು ಆರಂಭಿಸಲಾಗಿತ್ತು.
ಪ್ರಸ್ತುತ ಪತಂಜಲಿ ಬ್ರಾಂಡ್ ದೇಶದಲ್ಲಿ 500 ಸ್ಟೋರ್ಗಳನ್ನು ಹೊಂದಿದ್ದು, 4,500 ಹಂಚಿಕೆದಾರರನ್ನು ಒಳಗೊಂಡಿದೆ. ಆರೋಗ್ಯವರ್ಧಕ, ಸೌಂದರ್ಯವರ್ಧಕ, ಆಹಾರ ಇತ್ಯಾದಿ ಎಲ್ಲಾ ಬಗೆಯ ಉತ್ಪನ್ನಗಳು ಇದರಲ್ಲಿ ದೊರೆಯುತ್ತದೆ. ಶೀಘ್ರದಲ್ಲೇ ಅಮೇಜಾನ್ ಜೊತೆಗೂಡಿ ಆನ್ಲೈನ್ ವೆಂಚರ್ನ್ನು ಪತಂಜಲಿ ಆರಂಭಿಸಲಿದೆ ಎಂದು ಬಾಬಾ ರಾಮ್ದೇವ್ ಹೇಳಿದ್ದಾರೆ.
ಮೇಕ್ ಇನ್ ಇಂಡಿಯಾ ಮತ್ತು ಆಯುರ್ವೇದಿಕ್ ಉತ್ಪನ್ನಗಳ ಮೂಲಕ ತನ್ನ ಉತ್ಪನ್ನಗಳನ್ನು ಪ್ರಮೋಟ್ ಮಾಡುತ್ತಿರುವ ಪತಂಜಲಿ ಶೀಘ್ರಗತಿಯಲ್ಲಿ ಮಾರುಕಟ್ಟೆಯನ್ನು ಆಕ್ರಮಿಸುತ್ತಿದೆ.
ಇದರ ಸ್ವದೇಶ್ ಬಚಾವೋ ಅಜೆಂಡಾ ಗ್ರಾಹಕರನ್ನು ಸೆಳೆಯುತ್ತಿದೆ. ರೇಡಿಯೋ, ಟಿ.ವಿ., ಪತ್ರಿಕೆಗಳಲ್ಲೂ ಭರ್ಜರಿ ಜಾಹೀರಾತುಗಳನ್ನು ನೀಡಿ ಜನರ ಗಮನವನ್ನು ಸೆಳೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.