ನವದೆಹಲಿ : ಇಂಧನ ತುಂಬಿಸುವಿಕೆ, ನವೀಕರಣ ಮತ್ತು ಮರುಪೂರಣಕ್ಕಾಗಿ (refuelling, refurbishment and replenishment) ಇನ್ನು ಮುಂದೆ ಭಾರತ ಮತ್ತು ಯುಎಸ್ಎ ಯ ಶಿಫ್ ಮತ್ತು ಏರ್ಕ್ರಾಫ್ಟ್ಗಳು ಪರಸ್ಪರರ ಬೇಸ್ಗಳನ್ನು ಬಳಕೆ ಮಾಡಬಹುದಾಗಿದೆ.
ಆಗಸ್ಟ್ 29 ರಂದು ಅಮೇರಿಕಾಗೆ ತೆರಳಲಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಉಭಯ ದೇಶಗಳ ನಡುವಣ ಈ ಬಗೆಗಿನ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
ಈ ಒಪ್ಪಂದದ ಕರಡು ಪ್ರತಿಗಳನ್ನು ಉಭಯ ದೇಶಗಳು ಈಗಾಗಲೆ ಒಪ್ಪಿಕೊಂಡಿದೆ ಎಂದು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಅಮೇರಿಕಾ ರಕ್ಷಣಾ ಕಾರ್ಯದರ್ಶಿ ಆಸ್ಟನ್ ಕಾರ್ಟ್ ಅವರು ನವದೆಹಲಿ ಆಗಮಿಸಿದ ವೇಳೆ ಒಪ್ಪಂದದ ಪ್ರತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಾಗಿತ್ತು.
ಮಾನವೀಯತೆ ಆಧಾರದಲ್ಲಿ ವಿಪತ್ತುಗಳ ವೇಳೆಯಲ್ಲಿ ಪರಸ್ಪರರ ಬೇಸ್ಗಳನ್ನು ಉಪಯೋಗಿಸಿಕೊಳ್ಳಬಹುದೇ ವಿನಃ ಸೈನಿಕರ ನಿಯೋಜನೆ ಅಥವಾ ಖಾಯಂ ನೆಲೆ ಸ್ಥಾಪನೆಗೆ ಒಪ್ಪಂದದ ಪ್ರಕಾರ ಆಸ್ಪದವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.