ನವದೆಹಲಿ : ಕೇಂದ್ರ ಸರ್ಕಾರದ ಮಹತ್ವದ ದೀನ್ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಇದುವರೆಗೆ ಒಟ್ಟು 10,079 ಗ್ರಾಮಗಳು ವಿದ್ಯುತ್ ಪಡೆದುಕೊಂಡಿವೆ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
2016 ರ ಆಗಸ್ಟ್ 15 ರಿಂದ 25 ರ ನಡುವೆ ಅಂದರೆ ಕೇವಲ ಒಂದು ವಾರದ ಅವಧಿಯಲ್ಲಿ ದೇಶದ 28 ಗ್ರಾಮಗಳಿಗೆ ಈ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ವಿದ್ಯುದೀಕರಣಗೊಂಡ 28 ಗ್ರಾಮಗಳ ಪೈಕಿ 4 ಅಸ್ಸಾಂ, 5 ಛತ್ತೀಸ್ಗಢ, 3 ಜಾರ್ಖಂಡ್, 10 ಮೇಘಾಲಯದ ಗ್ರಾಮಗಳಾಗಿವೆ.
ಗ್ರಾಮಜ್ಯೋತಿ ಯೋಜನೆಯಿಂದಾಗಿ ಈ ಗ್ರಾಮಗಳ ವಿದ್ಯುದೀಕರಣದೊಂದಿಗೆ ದೇಶದಲ್ಲಿ ವಿದ್ಯುತ್ ಕಂಡ ಒಟ್ಟು ಗ್ರಾಮಗಳ ಸಂಖ್ಯೆ 10,079 ಕ್ಕೆ ಏರಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.