ಗುವಾಹಟಿ : ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ-ಇಂಡಿಪೆಂಡಂಟ್ (ULFA-I) ಉಗ್ರರು ಅಸ್ಸಾಂನಲ್ಲಿ ಬಿಜೆಪಿ ನಾಯಕನ ಮಗನನ್ನು ಅಪಹರಣಗೊಳಿಸಿ ಇದೀಗ 1 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಬಿಜೆಪಿ ನಾಯಕ ರತ್ನಾಸ್ವೆರ್ ಮೋರನ್ ಅವರ ಪುತ್ರ ಹಾಗೂ ಬಿಜೆಪಿ ಶಾಸಕ ಬೋಲಿನ್ ಚೆಟಿಯಾ ಅವರ ಸೋದರಳಿಯನಾಗಿರುವ 27 ವರ್ಷದ ಕುಲ್ದೀಪ್ ಮೋರನ್ ಎಂಬುವವರನ್ನು ಅಪಹರಣಗೊಳಿಸಲಾಗಿದೆ.
ಅಪಹರಣ ಮಾಡಿರುವ ಉಲ್ಫಾ ಉಗ್ರರು ಇದೀಗ ಇಸಿಸ್ ಮಾದರಿಯಲ್ಲಿ ವೀಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.
ವೀಡಿಯೋದಲ್ಲಿ ಕುಲ್ದೀಪ್ನನ್ನು ಮುಸುಕು ಧರಿಸಿದ ಶಸ್ತ್ರಧಾರಿ ಉಗ್ರರು ಸುತ್ತುವರೆದಿದ್ದಾರೆ. ಕುಲ್ದೀಪ್ ‘ ನನ್ನ ಆರೋಗ್ಯ ಹದಗೆಡುತ್ತಿದೆ. ಅಪ್ಪ, ಅಮ್ಮನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹಣ ನೀಡಿ ನನ್ನನ್ನು ಬಿಡುಗಡೆ ಮಾಡಿ. ಇವರು ನನ್ನನ್ನು ಕೊಲ್ಲುವ ಸಾಧ್ಯತೆ ಇದೆ’ ಎಂದು ಅಂಗಲಾಚಿದ್ದಾನೆ.
ಅಸ್ಸಾಂ ಸಿಎಂ ಸರ್ಬಾನಂದ್ ಸೋನಾವಾಲ್ ಅವರು ಯುವಕನನ್ನು ಬಿಡುಗಡೆ ಮಾಡುವಂತೆ ಉಗ್ರರಲ್ಲಿ ಮನವಿ ಮಾಡಿದ್ದು, ಹಿಂಸೆಯಿಂದ ಏನೂ ಸಾಧಿಸಲಾಗದು ಎಂಬ ತತ್ತ್ವದಲ್ಲಿ ನಮ್ಮ ಸರ್ಕಾರ ನಂಬಿಕೆ ಇಟ್ಟಿದೆ ಎಂದಿದ್ದಾರೆ.
ಆಗಸ್ಟ್ 1 ರಂದು ಅರುಣಾಚಲ ಪ್ರದೇಶದ ಚಂಗ್ಲಾಂಗ್ ಜಿಲ್ಲೆಯಲ್ಲಿ ಕುಲ್ದೀಪ್ನನ್ನು ಅಪಹರಣಗೊಳಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.