ನವದೆಹಲಿ : ಇರಾಕ್ನಲ್ಲಿ ಅಪಹರಣಕ್ಕೊಳಗಾಗಿರುವ 39 ಭಾರತೀಯರನ್ನು ರಕ್ಷಿಸಲು ಸಹಾಯ ಮಾಡುವಂತೆ ಭಾರತ ಇರಾಕ್ಗೆ ಮನವಿ ಸಲ್ಲಿಸಿದೆ.
ಆಗಸ್ಟ್ 21 ರಿಂದ ಇರಾಕ್ಗೆ ಅಧಿಕೃತ ಭೇಟಿ ಕೊಟ್ಟಿರುವ ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ. ಜೆ. ಅಕ್ಬರ್ ಅವರು ಅಲ್ಲಿನ ಆಡಳಿತದೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಅಧಿಕೃತ ಮೀಟಿಂಗ್ನ ಸಂದರ್ಭ ಅಂತಾರಾಷ್ಟ್ರೀಯ ಭಯೋತ್ಪಾದನೆಯಿಂದ ಎದುರಾಗುತ್ತಿರುವ ಸವಾಲುಗಳು ಮತ್ತು ಶಾಂತಿ, ಭದ್ರತೆಯನ್ನು ಕಾಪಾಡುವ ಅಗತ್ಯತೆಯ ಬಗ್ಗೆ ಉಭಯ ದೇಶಗಳು ಚರ್ಚೆ ನಡೆಸಿವೆ.
ಅಲ್ಲದೆ ಉಗ್ರವಾದ ಸಮಸ್ಯೆಯನ್ನು ಪರಸ್ಪರ ಒಗ್ಗಟ್ಟಾಗಿ ಎದುರಿಸುವ ಬಗ್ಗೆಯೂ ನಿರ್ಧಾರಕ್ಕೆ ಬಂದಿದೆ.
2014 ರಲ್ಲಿ ಇಸಿಸ್ ಉಗ್ರರಿಂದ 39 ಭಾರತೀಯರು ಅಪಹರಣಕ್ಕೊಳಗಾಗಿದ್ದರು. ಇದುವರೆಗೆ ಅವರ ಪತ್ತೆಯಾಗಿಲ್ಲ. ಅವರ ಸುರಕ್ಷಿತ ರಕ್ಷಣೆಗೆ ಭಾರತಕ್ಕೆ ಬೇಕಾದ ಎಲ್ಲಾ ಸಹಕಾರ ಮತ್ತು ಬೆಂಬಲವನ್ನು ನೀಡುವುದಾಗಿ ಇರಾಕ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.