ಮುಂಬೈ : ಕರ್ಕಶ ರೀತಿಯಲ್ಲಿ ಸಂಗೀತಗಳನ್ನು ಆಲಿಸುವುದು ಕಾನೂನಾತ್ಮಕವಾಗಿಯೂ, ಆರೋಗ್ಯದ ದೃಷ್ಟಿಯಲ್ಲಿಯೂ ಉತ್ತಮವಲ್ಲದ ಕಾರ್ಯ. ಆದರೂ ಕೆಲವರು ಇದನ್ನು ಗಣನೆಗೆ ತೆಗೆದುಕೊಳ್ಳದೆ ಮನೆಯ ಮಾಳಿಗೆ ಹಾರಿಹೋಗುವಂತೆ, ಸ್ಥಳೀಯರ ನೆಮ್ಮದಿ ಕೆಡಿಸುವಂತಹ ಶಬ್ದದೊಂದಿಗೆ ಸಂಗೀತ ಇಟ್ಟು ಕೇಳುತ್ತಾರೆ.
ಆದರೆ ಎಲ್ಲರೂ ನೆನಪಿಟ್ಟುಕೊಳ್ಳಬೇಕಾದ ಸಂಗತಿ ಎಂದರೆ, ಪರಿಸರ ರಕ್ಷಣಾ ಕಾಯ್ದೆಯ ಸೆಕ್ಷನ್ ೧೫(೧)ರ ಪ್ರಕಾರ ಶಬ್ದ ಮಾಲಿನ್ಯ ನಡೆಸಿದರೆ ೧ ಲಕ್ಷ ದಂಡವನ್ನು ತೆರಬೇಕು, ಮಾತ್ರವಲ್ಲ ೫ ವರ್ಷ ಸೆರೆವಾಸವನ್ನೂ ಅನುಭವಿಸಬೇಕು.
ನೀವು ನಿಮ್ಮ ಸ್ವಂತ ಜಾಗ ಅಥವಾ ಹಗಲು ಹೊತ್ತಿನಲ್ಲಿ ಕರ್ಕಶ ಶಬ್ದ ಮಾಡಿದ್ದೀರಿ ಎಂಬುದು ಕೂಡಾ ಇಲ್ಲಿ ಗಣನೆಗೆ ಬರುವುದಿಲ್ಲ.
ಸಾಂತಾಕ್ರೂಸ್ ನಿವಾಸಿಗಳಾದ 61 ವರ್ಷ ಛಾಯಾ ಓಜಾ 68 ವರ್ಷದ ವೀಣಾ ಉಪಾಧ್ಯಾಯ ಎಂಬ ಹಿರಿಯ ನಾಗರಿಕರು ತಮಾಷೆಗಾಗಿ ಕರ್ಕಶ ಧ್ವನಿಯಲ್ಲಿ ಸಂಗೀತವನ್ನು ಆಲಿಸಿ ಇದೀಗ ಸಂಕಷ್ಟಕ್ಕೀಡಾಗಿದ್ದಾರೆ.
ಶಬ್ದದೊಂದಿಗೆ ಸ್ಥಳೀಯರ ನೆಮ್ಮದಿಯನ್ನು ಕೆಡಿಸಿದ ಇವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಪೊಲೀಸರು ಬಂದು ಇವರ ಮ್ಯೂಸಿಕ್ ಸಿಸ್ಟಂನ್ನು ಕಸಿದುಕೊಂಡು ಹೋದರೂ ಬುದ್ಧಿ ಕಲಿಯದ ಇವರು ಮತ್ತೊಂದು ಸಿಸ್ಟಂ ಮೂಲಕ ಅದೇ ರೀತಿ ಕರ್ಕಶವಾಗಿ ಸಂಗೀತವನ್ನು ಆಲಿಸಿದ್ದಾರೆ.
ಮತ್ತೆ ಪೊಲೀಸರು ಬಂದು ಈ ಶಬ್ದದ ತೀವ್ರತೆಯನ್ನು ಪರಿಶೀಲಿಸಿದಾಗ ಅದು ೯೨.೫ ಡಿಸೆಬಲ್ ಇತ್ತು. ಹೀಗಾಗಿ ಈ ಇಬ್ಬರ ವಿರುದ್ಧ ಕ್ರಿಮಿನಲ್ ಪ್ರಕಣವನ್ನು ದಾಖಲಿಸಿದ್ದಾರೆ.
ಇದೀಗ ಈ ಇಬ್ಬರು ಹಿರಿಯರು ಜಾಮೀನಿಗಾಗಿ ಕೋರ್ಟ್ನ ಮೊರೆ ಹೋಗಿದ್ದಾರೆ.
ಜಾಮೀನು ನೀಡಬೇಕೆ ಎಂಬ ಬಗ್ಗೆ ಕೋರ್ಟ್ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಒಂದು ವೇಳೆ ಕೋರ್ಟ್ ಇವರ ವಿರುದ್ಧ ನಿಂತರೆ 1 ಲಕ್ಷ ದಂಡ ಹಾಗೂ ೫ ವರ್ಷ ಸಜೆಯನ್ನು ಇವರು ಅನುಭವಿಸಬೇಕಾಗುತ್ತದೆ.
ಇದುವರೆಗೆ ಸಂಸ್ಥೆ, ಸಂಘಟನೆಗಳ ಮೇಲೆ ಕೆಲವೊಂದು ಆಚರಣೆಗಳ ಸಂದರ್ಭ ಕರ್ಕಶ ಧ್ವನಿವರ್ಧಕಗಳನ್ನು ಬಳಸಿದ ಆರೋಪದ ಮೇರೆಗೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಆದರೆ ವೈಯಕ್ತಿಕ ವ್ಯಕ್ತಿಗಳ ಮೇಲೆ ಈ ರೀತಿ ಶಬ್ದಮಾಲಿನ್ಯ ನಡೆಸಿದ್ದಕ್ಕಾಗಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದು ಇದೇ ಮೊದಲು.
ಪೊಲೀಸರ ಈ ಕ್ರಮವನ್ನು ಪರಿಸರ ಪ್ರೇಮಿಗಳು ಸ್ವಾಗತಿಸಿದ್ದಾರೆ.
ಎಲ್ಲರಿಗೂ ಶಾಂತಿಯಿಂದ ಬದುಕುವ ಹಕ್ಕಿದೆ. ಆ ಹಕ್ಕನ್ನು ನಮ್ಮ ಸಂಭ್ರಮಾಚರಣೆಗಾಗಿ ನಾವು ಕಸಿದುಕೊಳ್ಳುವಂತೆ ಇಲ್ಲ ಎಂಬುದನ್ನು ಈ ಘಟನೆಯಿಂದ ಎಲ್ಲರೂ ಅರಿತುಕೊಳ್ಳಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.