ನವದೆಹಲಿ : ಕೋಮು ದ್ವೇಷ ಕೆರಳಿಸುವ, ಭಾರತದ ಸಾರ್ವಭೌಮತೆ, ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುವಂತಹ ವಿಷಯಗಳನ್ನು ಬಿತ್ತಿರಿಸುವ ಖಾಸಗಿ ರೇಡಿಯೋ ಸ್ಟೇಷನ್ಗಳಿಗೆ ಯಾವುದೇ ಸರ್ಕಾರಿ ಜಾಹೀರಾತುಗಳನ್ನು ನೀಡದೇ ಇರಲು ಕೇಂದ್ರ ಸರ್ಕಾರದ ಜಾಹೀರಾತುಗಳನ್ನು ಬಿಡುಗಡೆ ಮಾಡುವ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಅಧೀನದಲ್ಲಿರುವ ಸಂಸ್ಥೆ ಡಿಎವಿಪಿ (ಡೈರೆಕ್ಟರೇಟ್ ಆಫ್ ವಿಷುವಲ್ ಪಬ್ಲಿಸಿಟಿ) ನಿರ್ಧರಿಸಿದೆ.
ಡಿಎವಿಪಿ ಜಾರಿಗೊಳಿಸಿರುವ ಹೊಸ ನಿಯಮಗಳ ಭಾಗವಾಗಿ ಈ ಗೈಡ್ಲೈನ್ಗಳನ್ನು ಬಿಡುಗಡೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಎಫ್ಎಂಗಳ ಮೂರನೇ ಹಂತದ ವಿಸ್ತರಣೆಯಡಿ 266 ಎಫ್ಎಂ ರೇಡಿಯೋ ಚಾನಲ್ಗಳ ಎರಡನೇ ಬ್ಯಾಚ್ನ ಇ-ಎಜುಕೇಷನ್ ಮುಖಾಂತರ ರೇಡಿಯೋ ಪ್ರಸಾರ ನೆಟ್ವರ್ಕ್ ವಿಸ್ತರಣೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲೇ ಗೈಡ್ಲೈನ್ ಬಿಡುಗಡೆಯಾಗಿದೆ.
ಹೊಸ ನಿಯಮದ ಪ್ರಕಾರ ಡಿಎವಿಪಿ ಖಾಸಗಿ ಎಫ್ಎಂ ರೇಡಿಯೋಗಳ ರಾಜಕೀಯ ಸಿದ್ಧಾಂತ ಅಥವಾ ಸಂಪಾದಕೀಯ ಕಾರ್ಯಕ್ರಮ ನಿಯಮಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇಂಪಾನೆಲ್ಮೆಂಟ್ ಬಯಸುವ ಎಫ್ಎಂಗಳು ಕನಿಷ್ಟ 6 ತಿಂಗಳವರೆಗೆ ಪ್ರಸಾರವನ್ನು ಕಂಡಿರಬೇಕು. ಇದಕ್ಕೆ ಕನಿಷ್ಟ 16 ಗಂಟೆಯಾದರೂ ಇದರಲ್ಲಿ ಕಾರ್ಯಕ್ರಮಗಳು ಬಿತ್ತರವಾಗಿರಬೇಕು ಎಂದು ನೂತನ ಗೈಡ್ಲೈನ್ ತಿಳಿಸುತ್ತದೆ.
ಇಂಪಾನೆಲ್ಮೆಂಟ್ಗೆ ಅರ್ಜಿ ಹಾಕುವ ರೇಡಿಯೋ ಚಾನಲ್ಗಳು ಬ್ಯಾಲೆನ್ಸ್ ಶೀಟ್, ಫರ್ಮಿಶನ್ ಅಗ್ರಿಮೆಂಟ್ ಮುಂತಾದ ಪ್ರಸ್ತುತ ದಾಖಲೆಗಳನ್ನು ಸಲ್ಲಿಕೆ ಮಾಡುವುದು ಕಡ್ಡಾಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.