ನವದೆಹಲಿ : ವಿವಿಧ ಬೆಲೆಯ ನಾಣ್ಯ, 100 ರೂ. ಮತ್ತು 500 ರೂ. ನೋಟುಗಳಲ್ಲಿ ಅಂಧರಿಗೆ ಗುರುತಿಸುವಿಕೆಗೆ ಸಹಾಯಕವಾಗುವಂತಹ ಯಾವುದೇ ಸಂಕೇತಗಳಿಲ್ಲ ಎಂದು ಆರೋಪಿಸಿ ಬಾಂಬೆ ಹೈಕೋರ್ಟ್ನಲ್ಲಿ ಪಿಟಿಷನ್ ಒಂದು ಸಲ್ಲಿಕೆಯಾಗಿದೆ.
ನೋಟುಗಳನ್ನು ಅಂಧರಿಗೆ, ಭಾಗಶಃ ಅಂಧರಿಗೆ ಗುರುತಿಸಲು ಸಹಾಯಕವಾಗುವ ರೀತಿಯಲ್ಲಿ ವಿನ್ಯಾಸಗೊಳಿಸುವಂತೆ ಇದರಲ್ಲಿ ಕೇಳಿಕೊಳ್ಳಲಾಗಿದೆ.
ನ್ಯಾಷನಲ್ ಅಸೋಸಿಯೇಶನ್ ಫಾರ್ ಬ್ಲೈಂಡ್ (ಎನ್ಎಬಿ) ಈ ಪಿಟಿಷನ್ನ್ನು ಸಲ್ಲಿಕೆ ಮಾಡಿದ್ದು, ಇದರ ವಕೀಲ ಉದಯ್ ವರುಣ್ಜಿಕರ್ ‘ವಿಕಲಾಂಗ ಕಾಯ್ದೆಯ ಪ್ರಕಾರ ವಿಕಲಚೇತನರ ಹಿತಾಸಕ್ತಿಯ ರಕ್ಷಣೆಗೆ ವಿವಿಧ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಕರ್ತವ್ಯ. ಅದರಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಕೂಡಾ. ಆದರೆ ಪ್ರಸ್ತುತ ಇರುವ ನಾಣ್ಯ ಮತ್ತು ನೋಟುಗಳನ್ನು ಅಂಧರು ಗುರುತಿಸುವುದೇ ಕಷ್ಟವಾಗಿದೆ’ ಎಂದು ವಾದಿಸಿದ್ದಾರೆ.
ಕೆಲ ವರ್ಷಗಳಿಂದ ಈ ಸಮಸ್ಯೆ ಉದ್ಭವವಾಗಿದೆ. ಆದರೆ ಹಿಂದೆಲ್ಲಾ ಪ್ರತಿ ನಾಣ್ಯದಲ್ಲೂ ವಿಭಿನ್ನ ಮಾರ್ಕ್ಗಳಿತ್ತು. ಆದರೆ ಅದನ್ನೀಗ ತೆಗೆಯಲಾಗಿದೆ. 100 ರೂ. ಮತ್ತು 500 ರೂ. ನೋಟುಗಳಿಗೆ ವ್ಯತ್ಯಾಸವೇ ಇಲ್ಲದಂತಾಗಿದೆ. 1, 2, 5 ರೂ. ಮತ್ತು 50 ಪೈಸೆಗಳ ನಾಣ್ಯಗಳು ಸಮಾನವಾಗಿದೆ.
ವಿಭಿನ್ನ ಬೆಲೆಯ ನಾಣ್ಯಗಳು, ನೋಟುಗಳು, ವಿಭಿನ್ನ ವಿನ್ಯಾಸ, ಗಾತ್ರ, ಆಕಾರಗಳನ್ನು ಹೊಂದಿರುವಂತೆ ನೋಡಿಕೊಳ್ಳಬೇಕು. ಇದರಿಂದ ಯಾವುದೇ ಗೊಂದಲಗಳು ಉಂಟಾಗುವುದಿಲ್ಲ. ಎಂದು ಪಿಟಿಷನ್ನಲ್ಲಿ ಹೇಳಲಾಗಿದೆ.
ಆರ್ಬಿಐಗೆ ಈ ಬಗ್ಗೆ ಲಿಖಿತ ಮನವಿಯನ್ನು ಮಾಡಲಾಗಿದ್ದು, ಸರ್ಕಾರಕ್ಕೂ ಸಂಸ್ಥೆ ವಿಸ್ತೃತ ಮಾಹಿತಿಯನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.